ರಾಮನಗರ: ನ್ಯಾಯಾಲಯದ ಅಭಿಪ್ರಾಯಕ್ಕೆ ಗೌರವ ಕೊಟ್ಟು ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ.ಈ ಹೋರಾಟ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ, ಜನರಿಗೆ ಕುಡಿಯುವ ನೀರು ನೀಡುವ ಬದ್ಧತೆಯನ್ನು ಪಕ್ಷ ಕಾಯ್ದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇದೇ ರಾಮನಗರದಿಂದ ಪಾದಯಾತ್ರೆ ಮುಂದುವರಿಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ನಿನ್ನೆ ರಾತ್ರಿ ಅಧಿಕಾರಿಗಳು ಬಂದು ಜಿಲ್ಲಾಧಿಕಾರಿಗಳ ಪತ್ರ ಎಂದು ಕೊಡಲು ಬಂದರು. ಜಿಲ್ಲಾಧಿಕಾರಿಗೆ ಕೊವಿಡ್ ಬಂದಿದೆಯಲ್ಲ, ಈಗ ಯಾಕೆ ಬಂದಿದ್ದೀರಿ ಎಂದು ಹೇಳಿ ಕಳುಹಿಸಿದೆ. ನಮ್ಮ ಮಾಜಿ ಮೆಯರ್ ಪಿ.ಆರ್ ರಮೇಶ್ ಅವರು ಬೆಳಗ್ಗೆ ಕರೆ ಮಾಡಿ ಬಸವನಗುಡಿಯ ಮೈದಾನದಲ್ಲಿ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿದೆ ಎಂದರು.


ಇದನ್ನೂ ಓದಿ: JOBS: ಆಡಳಿತ ಸಹಾಯಕ ಹುದ್ದೆ ಭರ್ತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ


ನಂತರ ಸರ್ಕಾರದ ನೊಟೀಸ್ ನೋಡಿದೆ. ಅದರಲ್ಲಿ ಪಾದಯಾತ್ರೆ ರದ್ದು ಮಾಡಬೇಕು ಎಂದು ಹೇಳಿದೆ. ಇನ್ನು ನಮ್ಮ ಜಿಲ್ಲಾಧ್ಯಕ್ಷರಿಗೆ ನೀಡಿದ ಅನುಮತಿಯಲ್ಲಿ ಜನರಿಗೆ ತೊಂದರೆಯಾಗದಂತೆ ಪಾದಯಾತ್ರೆ ಮಾಡಿ ಎಂದು ಹೇಳಲಾಗಿತ್ತು. ಪೊಲೀಸರಿಗೆ ಬರೆದ ಪತ್ರದಲ್ಲಿ ವ್ಯವಸ್ಥಿತವಾಗಿ ಅವಕಾಶ ಮಾಡಿಕೊಡಿ ಎಂದೂ ಹೇಳಿತ್ತು. ಆ ಮೂಲಕ ಈ ಪಾದಯಾತ್ರೆ ನಡೆಯಲಿ ಎಂಬ ಆಸೆ ಸರ್ಕಾರಕ್ಕೂ ಇದೆ. ಆದರೂ ನಿಮ್ಮ ಮುಂದೆ ಬೇರೆಯದೇ ಹೇಳುತ್ತಿದ್ದಾರೆ. ಈಗ ಆ ವಿಚಾರ ಬಿಡಿ ಎಂದು ಹೇಳಿದರು.


ಗಂಡಸ್ತನ ತೋರಿಸುವುದಕ್ಕೆ ಹೋಗಿ ಮೇಕೆದಾಟನ್ನು ಮಸಣ ಮಾಡುವುದು ಬೇಡ- ಎಚ್.ಡಿ.ಕುಮಾರಸ್ವಾಮಿ


ಹೆಚ್ಚಿನ ಜನ ಭಾಗವಹಿಸಲು ಅವಕಾಶವಾಗದಿದ್ದರೂ ನಾವಿಬ್ಬರೇ ನಡೆಯಬೇಕು ಎಂದು ಮೊದಲು ಅಂದುಕೊಂಡಿದ್ದೆವು. ನಾವು ಹೋಗುವಾಗ ಜನ ಸೇರುತ್ತಿದ್ದಾರೆ. ಇದರಿಂದ ಮತ್ತೆ ಗುಂಪು ಸೃಷ್ಟಿಯಾಗುತ್ತದೆ. ಕಾಂಗ್ರೆಸ್ ಗೆ ಹೋರಾಟದ ಬದ್ಧತೆ ಇದೆ. ಈ ನೋಟೀಸ್, ಕೇಸ್, ಜೈಲಿಗೆ ನಾವು ಹೆದರುವುದಿಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಬಿಜೆಪಿಯವರು ತಮ್ಮ ತಪ್ಪನ್ನು ನಮ್ಮ ಮೇಲೆ ಹಾಕಲು ಪಿತೂರಿ ಮಾಡುತ್ತಿದ್ದಾರೆ. ಈ ಯಾತ್ರೆಯನ್ನು ನಾವು ನಿಲ್ಲಿಸುತ್ತಿಲ್ಲ, ಕೇವಲ ಮುಂದೂಡುತ್ತಿದ್ದೇವೆ. ಮುಂದೆ ಇದೇ ರಾಮನಗರದಿಂದಲೇ ಆರಂಭಿಸುತ್ತೇವೆ. ಇದು ತಾತ್ಕಾಲಿಕ ವಿರಾಮ ಅಷ್ಟೇ ಎಂದು ಅವರು ಹೇಳಿದರು.


ಸರ್ಕಾರಕ್ಕೆ ನ್ಯಾಯ, ಕಾನೂನು ಎಲ್ಲರಿಗೂ ಒಂದೇ ಎಂಬ ಬದ್ಧತೆ ಇದ್ದರೆ, ಕೋವಿಡ್ ಆರಂಭವಾದಾಗಿನಿಂದ ನಿಮ್ಮ ಶಾಸಕರು, ಸಚಿವರು, ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಧಾರ್ಮಿಕವಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಕಾನೂನು, ನ್ಯಾಯ ಅನ್ವಯ ಆಗುತ್ತದೆಯೇ?.ಈಗಲಾದರೂ ಕಾನೂನು ಉಲ್ಲಂಘನೆ ಮಾಡಿರುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಿ, ನಿಮ್ಮ ಧೈರ್ಯ ಪ್ರದರ್ಶಿಸಿ ಎಂದು ಡಿಕೆಶಿ ಸವಾಲು ಹಾಕಿದರು.


ಇದನ್ನೂ ಓದಿ: Accindent Viral Video: ಸಾವಿನ ಬಾಯಿಗೆ ಬಂದ ವ್ಯಕ್ತಿ 'ಯಮರಾಜ'ನಿಂದ ತಪ್ಪಿಸಿಕೊಂಡಿದ್ದು ಹೀಗೆ!


ಕೋವಿಡ್ ಗಂಭೀರ ಸ್ಥಿತಿ ತಲುಪಿದಾಗ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಸರ್ಕಾರಕ್ಕೆ ಸಹಕರಿಸಿದೆ. ಅವರಿಗಿಂತ ಹೆಚ್ಚಾಗಿ ಜನರ ಸೇವೆ ಮಾಡಿದೆ. ತರಕಾರಿ ಖರೀದಿ ಮಾಡಿ, ಅದನ್ನು ಜನರಿಗೆ ಉಚಿತವಾಗಿ ಹಂಚಿದ್ದೇವೆ. ಔಷಧಿ, ಹಣ್ಣು, ಆಹಾರ, ದಿನಸಿ, ಆಕ್ಸಿಜನ್ ಕೊಟ್ಟಿದ್ದೇವೆ.ಅಲ್ಪಸಂಖ್ಯಾತರು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಎಲ್ಲ ಧರ್ಮಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ನಮ್ಮ ಧ್ಯೇಯ.ಈ ಹೋರಾಟದಲ್ಲಿ ಮಹಿಳೆಯರು, ಮಕ್ಕಳು, ಎಲ್ಲ ವರ್ಗದ ಜನ ಕೊಟ್ಟಿರುವ ಪ್ರೀತಿ ಬೆಂಬಲ ಅಪಾರ. ಅವರಿಗೆ ಶುದ್ಧ ಕುಡಿಯುವ ನೀರು ನೀಡುವುದೇ ನಮ್ಮ ಗುರಿ" ಎಂದು ಅವರು ಸ್ಪಷ್ಟಪಡಿಸಿದರು.


Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.