ಬೆಂಗಳೂರು: ಚಿಲುಮೆ ವೋಟರ್ ಐಡಿ ಅವ್ಯವಹಾರ ಪ್ರಕರಣ ದಿನಕ್ಕೊಂದು ಭಿನ್ನ ವಿಭಿನ್ನ  ತಿರುವು ಪಡೆಯುತ್ತಿದೆ.ಒಂದೆಡೆ ಪ್ರಕರಣದ ಆರೋಪಿಗಳು ಹಂತಹಂತವಾಗಿ ಪೊಲೀಸರ ಖೆಡ್ಡಾಗೆ ಬೀಳ್ತಿದ್ರೆ, ಇನ್ನೊಂದೆಡೆ, ಆರೋಪಿ ಸ್ಥಾನದಲ್ಲಿರೋ ಐಎಎಸ್ ಅಧಿಕಾರಿಗಳು ಸೇವೆಯಿಂದ ಅಮಾನತ್ತಾಗಿದ್ದಾರೆ. ಆರ್‌ಓ ಹಾಗು ಎಆರ್‌ಓಗಳು ಕೂಡ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ರಿಂದ ನಗರದ ಉಳಿದ ಆರ್‌ಓ ಹಾಗು ಎಆರ್‌ಓಗಳು ಅತಂತ್ರರಾಗಿದ್ದು, ಈ ಕುರಿತಂತೆ ತಮ್ಮದೇನು ತಪ್ಪಿಲ್ಲ ಎಂಬಂತೆ ಅಸಹಾಯಕತೆ ಕುರಿತು ಇವತ್ತು ಪತ್ರಿಕಾಗೋಷ್ಟಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಚಿಲುಮೆ ವೋಟರ್ ಐಡಿ ಪ್ರಕರಣಕ್ಕೂ ಆರ್‌ಓ - ಎಆರ್‌ಓಗಳಿಗೂ ನೇರವಾದ ಸಂಪರ್ಕ ಇಲ್ಲವೇ ಇಲ್ಲ.ಜಿಲ್ಲಾ ಚುನಾವಣಾಧಿಕಾರಿ ಹಾಗು ಪಾಲಿಕೆಯ ಮುಖ್ಯ ಆಯುಕ್ತರೇ ಚಿಲುಮಗೆ ಅನುಮತಿ ನೀಡಿದ್ದಾರೆ. Systematic Voters Education & Electoral Participation ಅಂದ್ರೆ ಸ್ವೀಪ್ ಪ್ರೋಗ್ರಾಂನಡಿ ಅನುಮತಿ ನೀಡಿದ್ದಾರೆ. ವೋಟರ್ ಐಡಿ ಮತ್ತು ಆಧಾರ್ ಲಿಂಕಿಂಗ್ ಮಾಡಿಸಲು ಹಾಗು ಮತದಾನದ ಅರಿವು ಮೂಡಿಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದ್ರೆ, ಚಿಲುಮೆಯಿಂದ ಅಧಿಕಾರ ದುರುಪಯೋಗವಾಗಿದೆ ಹೊರತು ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಂದಲ್ಲ. ಚಿಲುಮೆಯಿಂದ ಆಗಿರೋ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸಬೇಕು ಅಂತ ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಇಂದು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: ಕರುನಾಡಿನ ಕಿಚ್ಚ ಈಗ ಸಮಂತಾ ಜೊತೆ ಡ್ಯೂಯಟ್ ಹಾಡಲು ಫುಲ್ ರೆಡಿ!


ಒಂದೇ ಸಂಸ್ಥೆಯಿಂದ ವಿಚಾರಣೆ ನಡೆಸುವಂತೆ ಮನವಿ


ಇನ್ನು, ಮೇಲಧಿಕಾರಿಗಳು ನೀಡಿರೋ ಆದೇಶವನ್ನು ಪಾಲಿಸೋದು ಕೆಳಹಂತದ ಸಿಬ್ಬಂದಿಯ ಕರ್ತವ್ಯವಾಗಿದೆ. ಚಿಲುಮೆ ಸಂಸ್ಥೆಯೊಡನೆ ಕೋಆರ್ಡಿನೇಟ್ ಮಾಡಬೇಕಾದ ಅನಿವಾರ್ಯತೆಯನ್ನು ಹಿರಿಯ ಅಧಿಕಾರಿಗಳೇ ಸೃಷ್ಟಿಸಿದ್ದಾರೆ. ಹೀಗಿರೋವಾಗ ನಮ್ಮ ಆರ್‌ಓ ಹಾಗು ಎಆರ್‌ಓಗಳು ಚಿಲುಮೆಯವರ ಜೊತೆ ಫೋನ್‌ನಲ್ಲಿ ಮಾತನಾಡಿದ್ರೆ ತಪ್ಪೇನು? ಅವರನ್ನು ಬಂಧಿಸಿರೋ ಪೊಲೀಸರು ನಮ್ಮನ್ನು ಬಂಧಿಸೋದಿಲ್ಲ ಅಂತ ಏನು ಗ್ಯಾರೆಂಟಿ? ಇದೇ ಕಾರಣಕ್ಕಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಮತ್ತೊಂದೆಡೆ, ಮಹಿಳಾ ಸಿಬ್ಬಂದಿಯನ್ನು ರಾತ್ರಿ 9.30 ಆದ್ರೂ ವಿಚಾರಣೆಗೆ ಕರೆದಿದ್ದಾರೆ. ಏಕಕಾಲದಲ್ಲಿ ಮೂರ್ನಾಲ್ಕು ಠಾಣೆಗಳಿಂದ ವಿಚಾರಣೆಗೆ ಕರೆಯುತ್ತಾರೆ. ಇದ್ರಿಂದ ಅಧಿಕಾರಿಗಳು ಮಾನಸಿಕ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ನೋವನ್ನ ತೋಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಒಂದೇ ಸಂಸ್ಥೆ ಈ ಪ್ರಕರಣದ ವಿಚಾರಣೆಯನ್ನು ನಡೆಸಬೇಕು ಅಂತ ಪಟ್ಟು ಹಿಡಿದಿದ್ದಾರೆ.


ಇದನ್ನೂ ಓದಿ: Siddaramiah Biopic: ತೆರೆ ಮೇಲೆ ಸಿದ್ದರಾಮಯ್ಯ ಬಯೋಪಿಕ್: ಸಿದ್ದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ತಮಿಳಿನ ಈ ನಟ!


ಚುನಾವಣೆ ಆಯೋಗವೇ ಬಿಎಲ್‌ಓಗಳನ್ನು ನೇಮಿಸಲಿ ಎಂಬ ಬೇಡಿಕೆ


ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸಕಾಲ ಕೆಲಸ, ತೆರಿಗೆ ಸಂಗ್ರಹ ಕೆಲಸ ಸೇರಿದಂತೆ ಹಲವಾರು ಕೆಲಸಗಳನ್ನು ನೀಡಲಾಗ್ತಿದೆ. ಇದರ ನಡುವೆ ಚುನಾವಣೆ ಕೆಲಸ ಮಾಡಿಸೋದ್ರಿಂದಲೇ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿರೋದು. ಇದರ ಬದಲು ಚುನಾವಣಾ ಆಯೋಗವೇ ಬಿಎಲ್‌ಓಗಳನ್ನು ನೇಮಿಸಿದ್ರೆ ಯಾವ ಸಮಸ್ಯೆಗಳೂ ಆಗುತ್ತಲೇ ಇರಲಿಲ್ಲ ಅನ್ನೋದು ಕಂದಾಯ ಇಲಾಖೆಯ ಅಧಿಕಾರಿಗಳ ವಾದ. ಒಟ್ನಲ್ಲಿ, ತಮ್ಮ ಕಡೆಯಿಂದ ತಾವು ಕ್ಲೀನ್ ಚಿಟ್ ಹೊಂದಿದ್ದೇವೆ ಅಂತಿರೋ ಈ ಅಧಿಕಾರಿಗಳು ನಿಜವಾಗ್ಲೂ ಕ್ಲೀನ್ ಆಗಿದ್ದಾರಾ ಅನ್ನೋದೇ ಈಗ ಪ್ರಶ್ನಾತೀತವಾಗಿರೋದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.