Basavaraj Bommai : ಯುದ್ದ ನೆಡೆದಾಗ ಕಾಂಗ್ರೆಸ್ ಒಬ್ಬರನ್ನು ಕರೆತರಲಿಲ್ಲ ; ನವೀನ್ ಕುಟುಂಬಕ್ಕೆ ಪರಿಹಾರ ಸಿಎಂ
ಯುದ್ದದ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಅಂದ್ರೆ ಯೋಚನೆ ಮಾಡಿ ಕಾಂಗ್ರೆಸ್ ಎಷ್ಟು ತಳ ಮಟ್ಟಕ್ಕೆ ಹೊಗಿದೆ ಅನ್ನೋದು ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ರಾಜಕಾರಣ ಮುಖ್ಯ, ಜನರ ಸಮಸ್ಯೆ ಮುಖ್ಯ ಅಲ್ಲ ಎಂದು ಹೇಳಿದರು.
ಬೆಂಗಳೂರು : ಯೂಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಭಾರತಿಯರನ್ನ ತಾಯ್ನಾಡಿಗೆ ಸರ್ಕಾರ ಕರೆತರಲು ವಿಫಲವಾಗಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಯುದ್ದ ನೆಡೆದಾಗ ಯುಪಿಎ ಒಬ್ಬರನ್ನು ಕರೆತರಲಿಲ್ಲ ಎಂದು ಟೀಕಿಸಿದರು.
ಆರ್ ಟಿ ನಗರದ ನಿವಾಸದ ಬಳಿ ಮಾತನಾಡಿದ ಸಿಎಂ ಬೊಮ್ಮಾಯಿ(Basavaraj Bommai), ಯುದ್ದದ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಅಂದ್ರೆ ಯೋಚನೆ ಮಾಡಿ ಕಾಂಗ್ರೆಸ್ ಎಷ್ಟು ತಳ ಮಟ್ಟಕ್ಕೆ ಹೊಗಿದೆ ಅನ್ನೋದು ಗೊತ್ತಾಗುತ್ತದೆ. ಕಾಂಗ್ರೆಸ್ ಗೆ ರಾಜಕಾರಣ ಮುಖ್ಯ, ಜನರ ಸಮಸ್ಯೆ ಮುಖ್ಯ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ : ಬೆಟ್ಟದಷ್ಟು ನೋವು ಹೊತ್ತಿರುವ ನವೀನ್ ಕುಟುಂಬ, ಸರ್ಕಾರಕ್ಕೆ ಮಾಡಿರುವ ಒಂದು ಮನವಿ ಇದು
ನವೀನ್ ಕುಟುಂಬಕ್ಕೆ ಪರಿಹಾರ ಕೊಡ್ತಿವಿ ; ಮೊದಲು ಮೃತದೇಹ ತರಬೇಕು ಸಿಎಂ
ಇನ್ನು ಯೂಕ್ರೇನ್ ಶೆಲ್ ದಾಳಿಗೆ ಒಳಗಾಗಿ ಹಾವೇರಿ ಜಿಲ್ಲೆಯ ನವೀನ್(Naveen) ದುರ್ಮರಣ ಹಿನ್ನಲೆಯಲ್ಲಿ, ಮೃತನ ಕುಟುಂಬಕ್ಕೆ ಪರಿಹಾರ ನೀಡಲಿದ್ದೇವೆ. ಆದರೆ ಮೊದಲು ಮೊದಲು ಮೃತ ದೇಹ ತರವು ಕೆಲಸ ಆಗಬೇಕು. ವಾರ್ ಜೂನ್ ಆಗಿರುವುದರಿಂದ ಸ್ವಲ್ಪ ಕಷ್ಟ ಆಗ್ತಾಯಿದೆ. ನವೀನ್ ಕುಟುಂಬ ಬಹಳ ನೋವಿನಲ್ಲಿ ಇದೆ ಎಂದು ತಿಳಿಸಿದರು.
ನವೀನ್ ಜೊತೆ ಇದ್ದ ಗಾಯಳು ಸ್ನೇಹಿತರ ವಿಚಾರ:
ಇದ್ರ ಬಗ್ಗೆ ಮಾಹಿತಿ ಕಲೆಹಾಕಲಾಗ್ತಿದೆ,ಎರಡು ತರಹದ ಮಾಹಿತಿ ಬರುತ್ತಿದೆ.ಒಂದು ವರದಿಯ ಪ್ರಕಾರ ನವೀನ್(Naveen Friends) ಜೊತೆ ಇದ್ರು, ಅಂತ ಇನ್ನೊಂದು ವರದಿ ಪ್ರಕಾರ ಜೊತೆ ಇರಲಿಲ್ಲ ಅಂತ. ಈ ರೀತಿಯ ಎರಡು ತರಹದ ಮಾಹಿತಿಗಳಿವೆ ಎಂದು ಹೇಳಿದರು.
ಇದನ್ನೂ ಓದಿ : ನವೀನ್ ಸಾವಿಗೆ ರಷ್ಯಾ ಸೇನೆ ಎಷ್ಟು ಹೊಣೆಯೋ, ಬಿಜೆಪಿ ಸರ್ಕಾರವೂ ಅಷ್ಟೇ ಹೊಣೆ: ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.