ಬೆಂಗಳೂರು: ಸಾರ್ವಜನಿಕರ ವಿರೋಧದ ನಡುವೆಯೂ ನೈಟ್ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ(Weekend Curfew). ಶುಕ್ರವಾರ ರಾತ್ರಿ 10ರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೆಡ್ ಅಳವಡಿಸಿ ಕಟ್ಟುನಿಟ್ಟಿನ ವಾರಾಂತ್ಯ ಕರ್ಫ್ಯೂ ಜಾರಿಗೆ ಖಾಕಿಪಡೆ ಸಿದ್ಧವಾಗಿದೆ.


COMMERCIAL BREAK
SCROLL TO CONTINUE READING

COVID-19 ಮೊದಲ-2ನೇ ಸರಣಿ ಲಾಕ್ ಡೌನ್(Lockdown) ನಿಂದ ಈವರೆಗೆ ಚೇತರಿಕೆ ಆಗದ ಆರ್ಥಿಕ ಚಟುವಟಿಕೆಗಳಿಗೆ ಮತ್ತೆ 3ನೇ ಅಲೆ ತಡೆಗೆ ಹೇರಿರುವ ವಾರಾಂತ್ಯ ಕರ್ಫ್ಯೂ, ಲಾಕ್ ಡೌನ್ ಗೆ ಮುನ್ನಡಿಯಾಗಲಿದ್ಯಾ ಎಂದು ಉದ್ಯಮಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಡುವೆಯೂ ಸರ್ಕಾರ ಕರ್ಫ್ಯೂ ಜಾರಿ ಮಾಡಿದ್ದು, ಸಾರ್ವಜನಿಕರ ಅನಾವಶ್ಯಕ ಓಡಾಟ ತಡೆಯಲು ಪೊಲೀಸ್ ಹಿರಿಯ ಅಧಿಕಾರಿಗಳು ಫೀಲ್ಡ್ ಗೆ ಇಳಿದಿದ್ದಾರೆ.


ಇದನ್ನೂ ಓದಿ: BBMP ಚುನಾವಣೆಗೆ ಭಾರೀ ಸಿದ್ಧತೆ; ರಾಜಧಾನಿ ಟ್ರಾಫಿಕ್ ಸಮಸ್ಯೆಗೆ 'ಮಾಸ್ಟರ್ ಪ್ಲಾನ್'ಗೆ ಸಂಪುಟ ಒಪ್ಪಿಗೆ


ವೀಕೆಂಡ್ ಕರ್ಫ್ಯೂ(Weekend curfew) ಹಿನ್ನಲೆ ನಗರದ ಬಹುತೇಕ ರಸ್ತೆಗಳು ಖಾಲಿ ಆಗಿವೆ. ಎಲ್ಲಾ ಪ್ರಮುಖ ಸರ್ಕಲ್ ಗಳಲ್ಲೂ ಪೊಲೀಸರಿಂದ ವಾಹನ ತಪಾಸಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ 11 ಗಂಟೆಯ ನಂತರ ಸಿಟಿ ರೌಂಡ್ಸ್ ನಡೆಸಲಿದ್ದು, 10 ಗಂಟೆಯೊಳಗೆ ಬಹುತೇಕ ಬೆಂಗಳೂರು ಕಂಪ್ಲೀಟ್ ಸ್ತಬ್ಧ ಆಗಲಿದೆ.


ಅನಾವಶ್ಯಕ ಓಡಾಟ-ಗಾಡಿ ಸೀಜ್


ಅಗತ್ಯ ಸೇವೆಗಳನ್ನು ಹೊರತುಪಡಿಸಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಮಾಡುತ್ತಿರುವ ಖಾಕಿಪಡೆ(Bengaluru Police) ಈವರೆಗೆ ಬೆಂಗಳೂರು ಪಶ್ಚಿಮ ವಲಯದಲ್ಲಿ 125 ಗಾಡಿಗಳನ್ನು ವಶಕ್ಕೆ ಪಡೆದ್ದಿದ್ದಾರೆ. ಕರ್ಫ್ಯೂ ಉಲ್ಲಂಘಿಸಿ ರಸ್ತೆಯಲ್ಲಿ ಅಡ್ಡಾಡಿದ್ರೆ ವಾಹನ ಸೀಜ್ ಮಾಡೋದರ ಜೊತೆಗೆ NDMA (ರಾಷ್ಟೀಯ ವಿಪತ್ತು ನಿರ್ವಹಣಾ ಕಾಯ್ದೆ) ಅಡಿ ಪ್ರಕರಣ ಕೂಡ ದಾಖಲಾಗಲಿದೆ ಎಂದು ಕಮಲ್ ಪಂತ್(Kamal Pant) ಹೇಳಿದ್ದಾರೆ.


ಇದನ್ನೂ ಓದಿ: ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ


ಎಲ್ಲಾ ಡಿಸಿಪಿ ಗಳಿಗೂ ಆಯಾ ವಿಭಾಗದಲ್ಲಿ ರೌಂಡ್ಸ್ ಹಾಕಿ ಕಂಟ್ರೊಲ್ ಗೆ ತೆಗೆದುಕೊಳ್ಳಿ ಎಂದು ಪೊಲೀಸ್ ಕಮಿಷನರ್(Police Commissioner) ಸೂಚಿಸಿದ್ದಾರೆ. ಈ ಹಿನ್ನಲೆ ಬೆಳಗ್ಗೆಯಿಂದಲೇ ನಗರದ ಎಲ್ಲಾ ಡಿಸಿಪಿಗಳು, ಇನ್ಸ್'ಪೆಕ್ಟರ್, ಎಸಿಪಿಗಳಿಂದ ಸೂಕ್ಷ್ಮ-ಅತಿಸೂಕ್ಷ್ಮ ಪ್ರದೇಶಗಳಲ್ಲಿ ರೌಂಡ್ಸ್ ಹಾಕಿ ತಪಾಸಣೆ ನಡೆಸುತ್ತಿದ್ದಾರೆ. ಹೊಯ್ಸಳ ಚೀತಾ ವೆಹಿಕಲ್ ಗಳಿಂದ ಗಲ್ಲಿ ಗಲ್ಲಿಗಳಲ್ಲೂ ರೌಂಡ್ಸ್ ಹಾಕಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ನಗರದಲ್ಲಿ ಈಗಾಗಲೇ ಬಹುತೇಕ ಅಂಗಡಿ ಮುಂಗಟ್ಟುಗಳು ಕ್ಲೋಸ್ ಆಗಿರುವುದು ಕಂಡುಬರುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.