ಬೆಂಗಳೂರು: ಇವತ್ತು ಸಿಲಿಕಾನ್‌ ಸಿಟಿ ಬೆಚ್ಚಿಬಿದ್ದಿತ್ತು. ಪಕ್ಕಾ ಟೆರರಿಝುಂ ಭಾಷೆಯಲ್ಲಿರುವ ಬಳಸಿದ್ದ ಶಬ್ದಗಳು ನಗರ ಪೊಲೀಸರ ನಿದ್ದೆಗೆಡಿಸಿದೆ.. ಶಾಲೆಗಳಿಗೆ ಮಕ್ಕಳನ್ನು ಇನ್ಮುಂದೆ ಕಳುಹಿಸಬೇಕಾ ಬೇಡ್ವಾ ಅಂತಾ ಪೋಷಕರು ಯೋಚಿಸುವಂತೆ ಮಾಡಿದೆ.


COMMERCIAL BREAK
SCROLL TO CONTINUE READING

48 ಶಾಲೆಗಳು ಇಂದು ಅಕ್ಷರಶಃ ನಡುಗಿ ಹೋಗಿದ್ದವು. ಮಾಸ್ ಮೇಲ್ ಗಳು ಬಂದ ಕೂಡಲೇ ಏನು ಮಾಡಬೇಕೆಂದು ತಿಳಿಯದೆ ಶಾಲಾ ಆಡಳಿತ ಮಂಡಳಿ ಶಾಲೆಗೆ ಬಂದ ಮಕ್ಕಳನ್ನ ವಾಪಾಸ್ ಕಳಿಸೋದಕ್ಕೆ ಮುಂದಾಗಿದ್ರು. ಬೆದರಿಕೆ ಸಂದೇಶ ಬಂದ ಕೂಡಲೇ ಮೊದಲು ಮಕ್ಕಳನ್ನ ಹೊರ ಕಳಿಸಿ ಅವರ ಪೋಷಕರಿಗೆ ವಿಚಾರ ಮುಟ್ಟಿಸಲಾಯ್ತು. 


ಇದನ್ನೂ ಓದಿ:ಜಗದೀಶ ಶೆಟ್ಟರ್ DNA ಸಂಘ ಪರಿವಾರದ್ದು, ಕಾಂಗ್ರೆಸ್ಸಿನದ್ದಲ್ಲ: ಸಿಟಿ ರವಿ


ಬಸವೇಶ್ವರನಗರ, ಸದಾಶಿವನಗರ, ಚಾಮರಾಜಪೇಟೆ, ಹಲಸೂರು, ಶಿವಾಜಿನಗರ ಸೇರಿ ವಿವಿಧೆಡೆ ಬಾಂಬ್‌ ಬೆದರಿಕೆ ಮೇಲ್‌ ಬಂದಿರುವ ವಿಷಯ ತಿಳಿದು ದೌಡಾಯಿಸಿದ ಪೋಷಕರು ಮಕ್ಕಳನ್ನ ಕರೆದೊಯ್ಯಲು ಮುಗಿ ಬಿದ್ದಿದ್ದರು. ಶಾಲಾ ಆಡಳಿತ ಮಂಡಳಿ ಸಹ ವಿದ್ಯಾರ್ಥಿಗಳನ್ನು ಸೇಫಾಗಿ ಪೋಷಕರಿಗೆ ಒಪ್ಪಿಸುವವರೆಗೆ ನಿಗಾ ವಹಿಸಿದ್ದರು. ಇನ್ನು ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ದೌಡಾಯಿಸಿ ಪರಿಶೀಲನೆ ಕೂಡ ನಡೆಸಿದ್ರು ಕೊನೆಗೆ ಅದೊಂದು ಫೇಕ್ ಥ್ರೆಟ್ ಮೇಸೆಜ್ ಎಂಬುದು ತಿಳಿದುಬಂದಿದೆ. 


ಇನ್ನು ಬೆದರಿಕೆ ಮೇಲ್‌ನಲ್ಲಿ ಪಕ್ಕಾ ಟೆರರಿಝಂ ಶಬ್ಧಗಳೇ ಉಲ್ಲೇಖವಾಗಿತ್ತು. ನಿಮ್ಮ ಶಾಲಾ ಮೈದಾನದಲ್ಲಿ ಬಾಂಬ್ ಇಟ್ಟಿದ್ದೇವೆ. ನೀವು ಕನ್ಪರ್ಟ್ ಆಗಿ ಇಲ್ಲ ಇಸ್ಲಾಂ ಕತ್ತಿಗೆ ಬಲಿಯಾಗಿ. ಮುಸ್ಲಿಮೇತರರು ಅಲ್ಲಾಹುಗೆ ಶತ್ರುಗಳು. ಮುಸ್ಲಿಂ ಎಂಬ ಪ್ಯೂರ್ ರಿಲಿಜೀಯನ್ ನ ನಾವು ಬಿತ್ತುತ್ತೆವೆ. ನಿಮ್ಮನ್ನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇವೆ ಎಂದು ಬರೆಯಲಾಗಿದೆ. ಇನ್ನು ವಿಚಾರ ತಿಳಿದು ಸ್ಥಳೀಯ ಶಾಸಕರಾದ ಸುರೇಶ್ ಕುಮಾರ್ ಅವರು ಆಗಮಿಸಿ ಪೊಲೀಸರಿಂದ ಮಾಹಿತಿ ಪಡೆದಿದ್ದರು.


ಇದನ್ನೂ ಓದಿ:ಶಾಲೆಗಳಿಗೆ ಬಂದಿರುವುದು ಹುಸಿ ಬಾಂಬ್ ಕರೆ, ಆತಂಕ ಪಡುವ ಅಗತ್ಯವಿಲ್ಲ : ಡಿಸಿಎಂ ಡಿಕೆಶಿ


ಪರಿಶೀಲನೆಯ ಸಂಧರ್ಭದಲ್ಲಿ ಖುದ್ದು ಸ್ಥಳದಲ್ಲಿದ್ದು ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇದೇ ವಿಚಾರವಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ ಇದೊಂದು ಸುಜ್ಜಿತವಾದಂತಹ ಕೃತ್ಯ. ಇವೆಲ್ಲಾವೂ ಟೆರರಿಸ್ಟ್ ಜಿಹಾದಿಗಳು ಕೊಡುವಂತಹ ಸಂದೇಶ. ಸಮಾಜವನ್ನ ಭಯಪಡಿಸುವ ಉದ್ದೇಶದಿಂದ ಈ ರೀತಿ ಕೃತ್ಯ ನಡೆಸಲಾಗಿದೆ.‌ ಬೆಳಗ್ಗೆನೆ ಪೊಲೀಸ್ ಆಯುಕ್ತರ ಜೊತೆ ಕೂಡ ಮಾತನಾಡಿ ಚರ್ಚೆ ಮಾಡಿದ್ದೇವೆ ಎಂದರು.


ಹೌದು.. ಬೆದರಿಕೆ ಮೇಲ್‌ ಬಂದ ತಕ್ಷಣ ಪೊಲೀಸರು ತನಿಖೆಗೆ ಇಳಿದಿದ್ದರು. ಆಗ ಹುಸಿ ಬಾಂಬ್ ಇ ಮೇಲ್ ನ ಮೂಲ ಯಾವ್ದು ಗೊತ್ತಾಗಿದೆ. ಸೈಪ್ರಸ್ ದೇಶದ ಬೀಬಲ್.ಕಾಮ್ ಮೇಲ್ ನಿಂದ ದುಷ್ಕರ್ಮಿಗಳು ಸಂದೇಶ ರವಾಣೆ ಮಾಡಿರುವುದು ಗೊತ್ತಾಗಿದೆ. ಈ ಹಿಂದೆ ಮಲೇಶ್ಯಾ, ಟ್ರಿನಿಡಾಡ್ ಅಂಡ್ ಟೊಬ್ಯಾಗೊ ಸೇರಿ ಹಲವು ದೇಶಗಳಿಗೆ ಈ ಬೀಬಲ್‌ ನಿಂದಲೇ ಬೆದರಿಕೆ ಮೇಲ್ ಹೋಗಿತ್ತು. ಹೀಗಾಗಿ ಬೀಬಲ್ ಕಂಪನಿಗೆ ಬೆಂಗಳೂರು ಪೊಲೀಸರು ಪತ್ರ ಬರೆದು ಮಾಹಿತಿ ಕೇಳಿದ್ದಾರೆ.. 


ಇದನ್ನೂ ಓದಿ:ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ: ಬಿಜೆಪಿ ಆರೋಪ


ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್‌ ದಯಾನಂದ್‌ ಎಲ್ಲಾ ಶಾಲೆಗಳಿಗೂ ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಇದರ ಹಿಂದಿನ ಹುನ್ನಾರ ಏನು ಅನ್ನೋದರ ತನಿಖೆ ನಡೀತಿದೆ. ಮಾಧ್ಯಮಗಳ ಮೂಲಕ ಈ ವಿಚಾರ ಗೊತ್ತಾಗಿದೆ.. ಇಮೇಲ್ ಮೂಲಕ ಬೆದರಿಕೆ ಬಂದಿರುವ ಕಾರಣ ತನಿಖೆ ಕೊಂಚ ತಡವಾಗುತ್ತೆ.. ಯಾರು ಇದರ ಹಿಂದೆ ಇದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.


ಒಟ್ಟಿನಲ್ಲಿ ಇವತ್ತು ಬಂದ ಫೇಕ್‌ ಮೇಲ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ..  ಭಯದ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ದುಷ್ಕರ್ಮಿಗಳು ಆಟವಾಡುತ್ತಿದ್ದಾರ ಎಂಬ ಪ್ರಶ್ನೆ ಹುಟ್ಟುಹಾಕಿದೆ.. ಪೊಲೀಸರು ಸಹ ಈ ಕೇಸ್‌ ಮುಕ್ತಿ ಕೊಡುವ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ್ದು, ಗಾಢ ತನಿಖೆಯ ನಂತರವೇ ಈ ಮೇಲ್‌ ಅಸಲಿಯತ್ತು ಬಯಲಾಗಲಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.