ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಉಗ್ರರ ಪಾಲಿನ ಸ್ವರ್ಗವನ್ನಾಗಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
‘ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆದಿಯಾಗಿ ಎಲ್ಲರೂ ಸೆರೆಸಿಕ್ಕ ಉಗ್ರರಿಗೆ ಅಮಾಯಕ ಪಟ್ಟ ಕಟ್ಟಿದ ಕಾರಣ, ಇಂದು ಬೆಂಗಳೂರಿನ ಶಾಲೆಗಳು ಬಾಂಬ್ ಬೆದರಿಕೆಯನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದು ಬಿಜೆಪಿ ಟೀಕಿಸಿದೆ.
ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ ಪ್ರಕರಣ: ಕಟ್ಟೆಚ್ಚರಿಕೆ ವಹಿಸುವಂತೆ ಗೃಹ ಸಚಿವರ ಸೂಚನೆ
‘ಕಾಂಗ್ರೆಸ್ ಸರ್ಕಾರ ಬಂದ 6 ತಿಂಗಳಲ್ಲಿ ಬೆಲೆಯೇರಿಕೆ ಜೊತೆ ಮತಾಂಧರ ಸಂಖ್ಯೆ ಸಹ ಏರಿದೆ. ಶಾಂತಿ ನೆಮ್ಮದಿಯ ತವರೂರಾಗಿದ್ದ ಕರ್ನಾಟಕದಲ್ಲಿ ಭದ್ರತಾ ವೈಫಲ್ಯಗಳೇ ಜಾಸ್ತಿಯಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಹಿಡಿದ ಕೈಗನ್ನಡಿ’ ಎಂದು ಬಿಜೆಪಿ ಕುಟುಕಿದೆ.
ಬೆಂಗಳೂರು ವಾಸಿಗಳ ಗೋಳು ಹೇಳತೀರದು!
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಬೆಂಗಳೂರು ವಾಸಿಗಳ ಗೋಳು ಹೇಳತೀರದು. ರಸ್ತೆಗಳೆಲ್ಲಾ ಗುಂಡಿಮಯವಾಗಿವೆ, ಸ್ಕೈ ವಾಕ್‌ಗಳು ಕಸ ಹಾಕುವ ಡಂಪಿಂಗ್ ಯಾರ್ಡ್‌ಗಳಾಗಿ ದುರ್ನಾತ ಸೂಸುತ್ತಿವೆ. ಇದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಅಸಲಿ ಬ್ರ್ಯಾಂಡ್ ಬೆಂಗಳೂರು. ಡಿಸಿಎಂ ಡಿ. ಕೆ.ಶಿವಕುಮಾರ್ ಅವರೇ, ಬೆಂಗಳೂರನ್ನು ಅನ್ ಬಾಕ್ಸ್ ಮಾಡುವ ಮೊದಲು, ರಸ್ತೆಗಳ ಗುಂಡಿಗಳನ್ನು ಮುಚ್ಚಿಸಿ, ಸ್ಕೈ ವಾಕ್‌ಗಳಲ್ಲಿನ ಕಸ ತೆಗೆಸಿ’ ಎಂದು ಬಿಜೆಪಿ ಕಿಡಿಕಾರಿದೆ.
ರಾಜ್ಯದ @INCKarnataka ಸರ್ಕಾರದ ಆಡಳಿತದಲ್ಲಿ ಬೆಂಗಳೂರು ವಾಸಿಗಳ ಗೋಳು ಹೇಳತೀರದು.
ರಸ್ತೆಗಳೆಲ್ಲಾ ಗುಂಡಿಮಯವಾಗಿವೆ, ಸ್ಕೈ ವಾಕ್‌ಗಳು ಕಸ ಹಾಕುವ ಡಂಪಿಂಗ್ ಯಾರ್ಡ್‌ಗಳಾಗಿ ದುರ್ನಾತ ಸೂಸುತ್ತಿವೆ. ಇದು ಡಿಸಿಎಂ @DKShivakumar ಅವರ ಅಸಲಿ ಬ್ರ್ಯಾಂಡ್ ಬೆಂಗಳೂರು.
ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಬೆಂಗಳೂರನ್ನು ಅನ್ ಬಾಕ್ಸ್ ಮಾಡುವ… pic.twitter.com/BEbMc2V73W
— BJP Karnataka (@BJP4Karnataka) December 1, 2023
ಇದನ್ನೂ ಓದಿ: ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ತಪಾಸಣೆ ನಡೆಸಿದ ಭದ್ರತಾ ಪಡೆ..! ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.