ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಪಕ್ಷಾಂತರ ಪರ್ವ ಮತ್ತು ಅಸಮಾಧಾನದ ಕೂಗು ಕೇಳಿಬರುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದಾಗ ಅಷ್ಟೋಂದು ಸುದ್ದಿಯಾಗಿರಲಿಲ್ಲ. ಆದ್ರೆ, ನಿನ್ನೆ ರಾತ್ರಿ ಬಿಡುಗಡೆಯಾದ ಬಿಜೆಪಿ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ರಾಜ್ಯದಲ್ಲಿ ಕೋಲಾಹಣ ಎಬ್ಬಿಸುವಂತಿದೆ. ಇದಕ್ಕೆ ಕಾರಣ ಕಮಲ ಪಾಳಯದ ದಿಗ್ಗಜರ ಕಡೆಗಣನೆ.


COMMERCIAL BREAK
SCROLL TO CONTINUE READING

ಹೌದು.. ಈಗಾಗಲೇ 189 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಗೊಳಿಸಿದೆ. ಅಲ್ಲದೆ, ಈ ಬಾಗಿ ಬರೋಬ್ಬರಿ 52 ಹೊಸ ಮುಖಗಳಿಗೆ ಕಮಲ ಪಾಳಯ ಮಣೆ ಹಾಕಿದೆ. ಇದರ ನಡುವೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸ್ಥಾನ ತುಂಬಿದ್ದ ದಿಗ್ಗಜ ನಾಯಕರಿಗೆ ಟಿಕೆಟ್‌ ನೀಡದೇ ಹೈಕಮಾಂಡ್‌ ಶಾಕ್‌ ನೀಡಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಹಾಗೂ ಈಶ್ವರಪ್ಪ ಅವರಿಗೆ ಈ ಬಾರಿ ಟಿಕೆಟ್‌ ಸಿಕ್ಕಿಲ್ಲ.


ಇದನ್ನೂ ಓದಿ: ಎರಡೂ ಕ್ಷೇತ್ರಗಳಲ್ಲಿ ವಿ ಸೋಮಣ್ಣಗೆ ಸೋಲು : ಕೈ ಅಭ್ಯರ್ಥಿ ಪುಟ್ಟರಂಗಶೆಟ್ಟಿ ವಿಶ್ವಾಸ


ಈ ನಡುವೆ ನಿನ್ನೆ ಈಶ್ವರಪ್ಪ ನಿವೃತ್ತಿ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ, ಇಂದು ದೆಹಲಿಗೆ ಜಗದೀಶ್‌ ಶೆಟ್ಟರ್‌ ಅವರು ದೆಹಲಿಗೆ ತೆರಳಿದ್ದು, ಟಿಕೆಟ್‌ ಗಿಟ್ಟಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ರೆ, ವಿಚಾರ ಏನಪ್ಪಾ ಆಂದ್ರೆ, ಹುಬ್ಬಳ್ಳಿ ಸೆಂಟ್ರಲ್‌ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ. ಇದರಿಂದ ಎಲ್ಲೋ ಒಂದು ಕಡೆ ಇಬ್ಬರು ನಾಯಕರಿಗೆ ಟಿಕೆಟ್‌ ಸಿಗುವ ವಿಶ್ವಾಸ ಇದೆ. ಆದ್ರೆ, ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ಸಿಕ್ಕದ್ದು, ಲಕ್ಷ್ಮಣ್‌ ಸವದಿ ಪಕ್ಷೇತರ ಇಲ್ಲವೆ ಪಕ್ಷಾಂತರವಾಗುವ ಸೂಚನೆ ನೀಡಿದ್ದಾರೆ.


ಹೀಗಾಗಿ ಒಂದು ವೇಳೆ ಈ ಮೂವರು ನಾಯಕರಿಗೆ ಟಿಕೆಟ್‌ ಸಿಗದಿದ್ದರೇ ಪಕ್ಷೇತರವಾಗಿ ನಿಲ್ಲುವ ಇಲ್ಲವೇ ಪಕ್ಷಾಂತರವಾದ್ರೆ, ಬಿಜೆಪಿ ಮತಗಳಿಗೆ ಹೊಡೆತ ಬಿಳುವ ಸಾಧ್ಯತೆ ಇದೆ. ಇದನ್ನು ಬಿಜೆಪಿ ಹೈಕಮಾಂಡ್‌ ನೆನೆಪಿನಲ್ಲಿಟ್ಟುಕೊಂಡು ಈ ಗೊಂದಲವನ್ನು ಬಗೆಹರಿಸಬೇಕಿದೆ. ಒಂದು ವೇಳೆ ಈ ಮೂರು ಜನ ನಾಯಕರನ್ನು ಸಾಮಾಧಾನಗೊಳಿಸಿದ್ದೇ ಆದ್ರೆ, ಅವರ ಕ್ಷೇತ್ರದಲ್ಲಿ ಕಮಲ ಅರಳಲಿದೆ ಇಲ್ಲದಿದ್ದರೇ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತಾಗುತ್ತದೆ.


ಇದನ್ನೂ ಓದಿ:ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ : ಬೆಂಗಳೂರಿನಲ್ಲಿ 34.3ಗೆ ಉಷ್ಣಾಂಶ ಏರಿಕೆ


ಮತ್ತೊಂದು ಶಾಕಿಂಗ್‌ ವಿಚಾರ ಅಂದ್ರೆ, ಜನಾರ್ಧನ ರೆಡ್ಡಿ ಪಕ್ಷಕ್ಕೆ ಈ ಮೂರು ನಾಯಕರು ಸಾಥ್‌ ನೀಡಿದ್ರೆ, ಉತ್ತರ ಕರ್ನಾಟಕ ಭಾಗದಲ್ಲಿ ಕಮಲ ಅರಳುವುದು ಬಹಳ ಕಷ್ಟ, ಆದ್ರೆ, ರೆಡ್ಡಿ ಈ ಬಗ್ಗೆ ವಿಚಾರ ಮಾಡ್ತಾರಾ ಇಲ್ವಾ ಅನ್ನೋದೇ ಅನುಮಾನ. ಒಂದು ವೇಳೆ ಇವರೆಲ್ಲರೂ ಒಂದಾದ್ರೆ, ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಿಡಿತ ಸಾಧಿಸುವುದರಲ್ಲಿ ಯಾವುದೇ ಸಂಶಯ ವಿಲ್ಲ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.