ಬೆಂಗಳೂರು: ದಾವಣಗೇರಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯೊಬ್ಬಳು ಮೊದಲು ಮೆಸೇಜ್ ಮಾಡಿ ಆಮೇಲೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬೆದರಿಕೆ ನೀಡಿದ್ದಾಳೆ ಎನ್ನಲಾಗಿದೆ.ಈ ಕುರಿತಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಯೋಜನೆ/ ಆಕರ್ಷಕ ಬೆಂಗಳೂರಿಗಾಗಿ ಪ್ರತ್ಯೇಕ ಸಮಿತಿ ಜೊತೆ ಸಭೆ


71 ವರ್ಷದ ಜಿ.ಎಂ. ಸಿದ್ದೇಶ್ವರ್ ರಿಗೆ ಅಪರಿಚಿತ ಮಹಿಳೆ ವಿಡಿಯೋ ಕಾಲ್ ಮಾಡಿ ನಗ್ನವಾಗಿ ಪೋಟೋ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.ಕಳೆದ 20 ರ ರಾತ್ರಿ 10.16ಕ್ಕೆ ಅಪರಿಚಿತ ಮಹಿಳೆಯಿಂದ  Hi How Are You ಎಂದು ಮೆಸೇಜ್ ಬಂದಿದೆ. ಇದಾದ ನಂತರ ಸಂಸದರು ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ, ಆದರೆ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಮಾಡಿದ್ದಾರೆ.


ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ


ಯಾರು.. ಏನು ಅಂತ ಕೇಳುತ್ತಿದ್ದಂತೆ ಹಿಂದಿಯಲ್ಲಿ ಮಾತನಾಡಿದ್ದು,ಬಳಿಕ ಮತ್ತೆ ರಾತ್ರಿ 10.24ಕ್ಕೆ ವಾಟ್ಸ್ ಆಪ್ ಆಡಿಯೋ ಕಾಲ್ ಮಾಡಿ ಮತ್ತದೇ ಮಾತು ಮುಂದುವರೆಸಿದ್ದಾರೆ. ಕರೆಯನ್ನು ಕಟ್ ಮಾಡಿದ್ರು ಕೂಡ ಆಕೆ ಪದೇ ಪದೇ ಕರೆ ಮಾಡಲು ಮುಂದಾಗಿದ್ದಾರೆ.10.27ಕ್ಕೆ ಏಕಾಏಕಿ ಬೆತ್ತಲೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ವಿಡಿಯೋ ರೆಕಾರ್ಡ್ ನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ್ದಾರೆ ಎಂದು ಸಂಸದರು ದೂರು ನೀಡಿದ್ದಾರೆ.


ಈಗ ಈ ಘಟನೆಯ ವಿಚಾರವಾಗಿ ಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕರೆಯು ಕರ್ಮಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ಬಂದಿದೆ ಎನ್ನಲಾಗಿದೆ.ಈಗ ಪ್ರಕರಣ ದಾಖಲಿಸಿಕೊಂಡು ಪೋಲಿಸರು ತನಿಖೆ ನಡೆಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.