ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮತ ಬ್ಯಾಂಕ್ ಪಾಕಿಸ್ತಾನದ ಬಾಲಾಕೊಟ್ ದಲ್ಲಿದೆ ಎಂದು ಹೇಳಿದ್ದ ಪ್ರಧಾನಿ ಮೋದಿಗೆ ತಿರುಗೇಟು ನೀಡಿರುವ ಸಿಎಂ ಕುಮಾರಸ್ವಾಮಿ "ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ಸ್ಪೋಟ ಸಂಭವಿಸಿರಲಿಲ್ಲ "ಎಂದು ಹೇಳಿದರು.


COMMERCIAL BREAK
SCROLL TO CONTINUE READING

"ನಾನು ದೇಶಭಕ್ತನಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಮೋದಿಯಿಂದ ನಾನು ದೇಶಭಕ್ತಿ ಕಲಿಯಬೇಕಾಗಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಕಾಶ್ಮೀರದಲ್ಲಿ ಒಂದೇ ಒಂದು ಸ್ಪೋಟ ಸಂಭವಿಸಿರಲಿಲ್ಲ ಅದು ನಮ್ಮ ಪರಂಪರೆ.ಆದ್ದರಿಂದ ನಮ್ಮನ್ನು ಬ್ರ್ಯಾಂಡ್ ಮಾಡಬೇಡಿ ನಿಮಗೆ ಯಾವುದೇ ಹಕ್ಕು ಇಲ್ಲವೆಂದು ಪ್ರಧಾನಿ ವಿರುದ್ದ ಕುಮಾರಸ್ವಾಮಿ ಹರಿಹಾಯ್ದರು. 


ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ ಅವರು "ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಾವು ಭ್ರಷ್ಟಮುಕ್ತ ಸರ್ಕಾರವನ್ನು ನಡೆಸುತ್ತೇವೆ ಎಂದು ಹೇಳುತ್ತಾರೆ, ಭ್ರಷ್ಟ ಮುಕ್ತವೆಂದರೇನು? ಮೋದಿ ಏನಾದರೂ ದೇಶಾದ್ಯಂತ ಚಹಾ ಮಾರಿ ಬಿಜೆಪಿಯನ್ನು ಶ್ರೀಮಂತಗೊಳಿಸಿದ್ದಾರೆಯೇ ? ಭ್ರಷ್ಟ ಮುಕ್ತ ಸರ್ಕಾರ ಎನ್ನುವುದೆಲ್ಲಾ ನಕಲಿ ಎಂದರು. ಇನ್ನು ಮುಂದುವರೆದು ಕಾರವಾರದಲ್ಲಿ ಬಿಜೆಪಿ ನಾಯಕನಿಂದ ಸುಮಾರು 78 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೆಲ್ಲವೂ ಎಲ್ಲಿಂದ ಬಂತು? ಎಂದು ಸಿಎಂ ಪ್ರಶ್ನಿಸಿದರು.