ಬೆಂಗಳೂರು: ರಾಜ್ಯದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಸಮಗ್ರ ತನಿಖೆ ನಡೆಸುವ ಯೋಗ್ಯತೆ ಬಿಜೆಪಿಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು 'ಬಿಜೆಪಿಗರೇ ನಿಮ್ಮದೇ ಸಂಪುಟದ ಸಚಿವ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿರುವ ವಾಸನೆ ಬರುತ್ತಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಸಹ ಇದು ನಿಮಗೆ ಆಧಾರ ರಹಿತವಾಯಿತೇ? ಎಂದು ಅವರು ಪ್ರಶ್ನಿಸಿದರು.Delhi-Meerut RRTS: ರೆಡಿಯಾಯ್ತಯು ದೇಶದ ಅತಿ ವೇಗದ ರೈಲು! ಫಸ್ಟ್ ಲುಕ್ ಇಲ್ಲಿದೆ ನೋಡಿ


ಇನ್ನೂ ಮುಂದುವರೆದು ವಿಧಾನ ಪರಿಷತ್ ಸದಸ್ಯರು ಕೂಡಾ ಪತ್ರ ಬರೆದಿದ್ದು ನಿಮಗೆ ಆಧಾರ ರಹಿತವಾಯಿತೇ?ಬಿಜೆಪಿಗರೇ ಸಾಮಾಜಿಕ ಜಾಲತಾಣದಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸಾಕ್ಷಿ ಪರಿಗಣಿಸಲಾಗುವುದಿಲ್ಲವೆಂದರೆ ತನಿಖೆ ದಳ ಇರುವುದೇಕೆ? ದಕ್ಷ ಅಧಿಕಾರಿಗಳು ಇರುವುದೇಕೆ?ಸಮಗ್ರ ತನಿಖೆ ನಡೆಸುವ ಯೋಗ್ಯತೆ ಇಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.


ಇದನ್ನು ಓದಿ:'ಕೆಜಿಎಫ್' ಮುಟ್ಟಿದ್ದೆಲ್ಲಾ ಚಿನ್ನ: ಭಾರತದ ನಂ.1 ಚಿತ್ರವಾಗಲು ಒಂದೇ ಹೆಜ್ಜೆ ಬಾಕಿ..!


ಬಿಜೆಪಿಗರೇ ನಾನು ಕೊಟ್ಟಿರುವ ಸಾಕ್ಷಿಗಳ ಸತ್ಯಾಸತ್ಯತೆಯನ್ನ ಪರಿಶೀಲಿಸಿ ನನ್ನ ಆರೋಪ ಸರಿ ಎನ್ನುವ ನೀವು ಗೃಹಮಂತ್ರಿಗಳನ್ನು ಬಂಧಿಸಿ,ಮುಖ್ಯಮಂತ್ರಿಗಳನ್ನು ಬಂಧಿಸಿ,ಇಂತಹ ಹಾಸ್ಯಾಸ್ಪದ ಸರ್ಕಾರ ಮತ್ತು ದುರಾಡಳಿತ ಅಧಿಕಾರಿಗಳನ್ನ ಕರ್ನಾಟಕ ಇತಿಹಾಸದಲ್ಲೇ ಕಂಡಿರಲಿಲ್ಲ ಎಂದು ಅವರು ಕಿಡಿ ಕಾರಿದರು.


ಈ ಬಿಜೆಪಿ ಸರ್ಕಾರಕ್ಕೆ ಸಮಗ್ರ ತನಿಖೆ ನಡೆಸದೆ ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸುತ್ತಿರುವುದು ನೋಡಿದರೆ ಕುಣಿಯಲಾರದವರು ನೆಲ ಡೊಂಕು ಎಂಬಂತಿದೆ ಎಂದು ಅವರು ರಾಜ್ಯ ಸರ್ಕಾರವನ್ನು ಕುಟುಕಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.