ಬೆಂಗಳೂರು: ಹೆಗಡೆವಾರ್ ಅವರ ಲೇಖನವನ್ನು ಪಠ್ಯದಲ್ಲಿ ಸೇರಿಸಿರುವ ಸರ್ಕಾರದ ನಡೆಗೆ ವಿಧಾನ ಪರಿಷತ್ ನ ವಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಆದರ್ಶ ಪುರುಷರು ಸಂವಿಧಾನ, ಪ್ರಜಾಪ್ರಭುತ್ವದ ಬಗ್ಗೆ ಗೌರವ ಕೊಡುವುದಿಲ್ಲವೇಕೆ?" ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೆಡಗೇವಾರ್ ರವರ ಲೇಖನ ಎಳೆಯ ಮಕ್ಕಳಿಗೆ ಉತ್ತೇಜಕವೆಂದು ಪಠ್ಯದಲ್ಲಿ ಸೇರಿಸಲಾಗಿದೆ. ಪಠ್ಯದಲ್ಲಿಯೇ ವಿರೋಧಾಭಿಪ್ರಾಯ ಮೊದಲ ನೋಟಕ್ಕೆ ಕಾಣುವುದಲ್ಲದೇ ಹೆಡಗೇವಾರರು ಬೆಳೆಸಿರುವವರು ಮತ್ತು ಅವರನ್ನೇ ಆದರ್ಶವಾಗಿಟ್ಟುಕೊಂಡು ಬೆಳೆದವರ ವ್ಯಾಖ್ಯೆ, ನಡೆ ನುಡಿಗಳು ಪ್ರಶ್ನಾತ್ಮಕವಾಗಿವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಕದ್ದುಮುಚ್ಚಿ ಥಿಯೇಟರ್‌ಗೆ ಬಂದು ‘ಕೆಜಿಎಫ್-2’ ನೋಡಿದ್ರಾ ನಟಿ ಸಾಯಿ ಪಲ್ಲವಿ..?


1. "ನಾವು ಆದರ್ಶವೆಂದು ಭಾವಿಸುವ ಎಲ್ಲಾ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು", "ನಾವು ಯಾರ ಗುಣಗಳನ್ನು ಅನುಸರಿಸಲು ಸಾಧ್ಯವೋ ಅಂಥ ನಿರ್ದಿಷ್ಟ ವ್ಯಕ್ತಿಯನ್ನೇ ಆದರ್ಶವಾಗಿ ಭಾವಿಸಬೇಕಾಗಿದೆ",  "ದೋಷ ರಹಿತ ವ್ಯಕ್ತಿಯನ್ನು ಆರಿಸುವುದೇ ಯೋಗ್ಯ. ಆದರ್ಶವೆಂದು ಭಾವಿಸಲ್ಪಟ್ಟ ವ್ಯಕ್ತಿಯಿಂದ ಏನಾದರೂ ತಪ್ಪಾದರೆ ನಾವು ಬೇರೊಬ್ಬನನ್ನು  ಹುಡುಕಬೇಕಾಗುತ್ತದೆ",


"ಯಾರೇ ಆಗಲೀ ಅವರು ತಮ್ಮ ಮಾರ್ಗದಲ್ಲಿ ಅಚಲರಾಗಿಯೇ ಇದ್ದಾರು ಎಂಬ ಭರವಸೆಯಾದರೂ ಏನು?", ಇಷ್ಟೆಲ್ಲವನ್ನೂ ಹೇಳಿದ ನಂತರ, "ಯಾರ ಧ್ಯೇಯವು ಶಾಶ್ವತ ಸತ್ಯವಾಗಿದೆಯೋ ಅಂಥ ವ್ಯಕ್ತಿಯನ್ನೇ ನಾವು ಆದರ್ಶವಾಗಿ ಸ್ವೀಕರಿಸಬೇಕು" ಎಂದು ಉಪದೇಶ ಮಾಡಿವುದರಲ್ಲೇ ದ್ವಂದ್ವವಿದೆಯಲ್ಲವೇ?  ಈ ದ್ವಂದ್ವವನ್ನು ಎಳೆಯ ಮಕ್ಕಳು ಬಿಡಿಸಬಲ್ಲರೇ?
2. ಅಷ್ಟೇ ಅಲ್ಲ. ಇದರ ಜೊತೆಗೆ, "ನಾವು ಧ್ವಜವನ್ನೇ ಗುರುವೆಂದು ಭಾವಿಸಿ ಅದನ್ನು ಪೂಜಿಸುತ್ತೇವೆ, ನಾವು, ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ" ಎಂದೂ ಸ್ಪಷ್ಠೀಕರಣ ನೀಡುತ್ತಾರೆ, ಆದರ್ಶವಾಗಿರಬೇಕಾದವರೇ ದ್ವಂದ್ವದಲ್ಲಿ ಮುಳುಗಿದ್ದರೆ, ಮಕ್ಕಳ ಪಾಡೇನು?
3. "ನಾವು ಆದರ್ಶವೆಂದು ಭಾವಿಸುವ ಎಲ್ಲಾ ಗುಣಗಳೂ ಆ ವ್ಯಕ್ತಿಯಲ್ಲಿ ನಮಗೆ ಎದ್ದು ಕಾಣಬೇಕು" ಎಂದು ಬೋಧಿಸುವವರು, ಸನಾತನ ಕಾಲದಿಂದ ಅನುಮೋದಿಸುತ್ತಿರುವ, ಗೌರವಿಸುತ್ತಿರುವ, ಒಂದು ನಂಬಿಕೆಯನ್ನು ಪಾಲಿಸಿ, ತಮಗೆ ಮನಸ್ಸಿಗೆ ನೆಮ್ಮದಿ ಕಾಣುತ್ತಿರುವ ಕೋಟ್ಯಾಂತರ ತಲೆಮಾರುಗಳ ವ್ಯಕ್ತಿಗಳ  "ಶ್ರೇಷ್ಟ ಗ್ರಂಥಗಳನ್ನು ಪಠಿಸುವುದು",  "ಕೇವಲ ಪುಣ್ಯಸಂಚಯಕ್ಕಾಗಿ", "ಮೋಕ್ಷ ಪ್ರಾಪ್ತಿಗಾಗಿ" ಎಂಬ ಭಾವನೆಗಳನ್ನು "ಎಂಥ ಸಂಕುಚಿತ  ಯೋಜನೆ ಇದು?" ಎಂದು ಹೇಳುವುದು ಆದರ್ಶಕ್ಕೆ ಪಾತ್ರರಾಗುವವರು ಹೀಯಾಳಿಸುವ ಸಂಕುಚಿತ ಮಾತುಗಳಲ್ಲವೇ?
4. "ದೇವರನ್ನು ಅನುಕರಣೆಯನ್ನು ಮಾಡಲು ಸಾಧ್ಯವೇ?" ಎಂದು ಹೇಳುವ ಇವರು ಪ್ರಾಜ್ಞರೇ? ವಿದ್ವತ್ ಪುರುಷರೇ,? ಹೀಗೆಂದು, "ದೇವರೆಂದು ನಂಬಿರುವವರು ಅನುಕರಣೆ ಮಾಡಲು" ಅರ್ಹರಲ್ಲ ಎಂದು ಪ್ರಮಾಣ ಪತ್ರ ಕೊಡುವುದಕ್ಕೆ ಇವರ ಅರ್ಹತೆಯಾದರೂ  ಏನು? "ದೇವರನ್ನು ಅನುಕರಿಸಲಾಗದಿದ್ದವರು, ಇವರ ಆದರ್ಶವನ್ನು  ಪಾಲಿಸಬಲ್ಲರೇ?
5. ಇಡೀ ವಿಶ್ವದಲ್ಲಿರುವ ಕೋಟ್ಯಾಂತರ ಜನರು  ಅವರವರ ನಂಬಿಕೆಗೆ ತಕ್ಕಂತೆ ಪೂಜಾರ್ಹರನ್ನು ಆಯ್ಕೆ ಮಾಡುವುದನ್ನು, ಗೌರವಿಸುವುದನ್ನು ಬಿಟ್ಟು ಇವರ ನಂಬಿಕೆಯನ್ನು ಉಳಿದವರ ಮೇಲೆ ಹೇರುವುದಕ್ಕೆ , ಈ ಆದರ್ಶ ಪುರುಷರು, ಎಲ್ಲರಿಗಿಂತ ಮಿಗಿಲಾದವರೇ?https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.