ಬೆಂಗಳೂರು: ಪ್ರಯಾಣಿಕರಿಗೆ ಅನುಕೂಲವಾಗುವಂತಹ ಹಲವು ಹೊಸ ಹಂತವನ್ನು ರೈಲ್ವೆ ಇಲಾಖೆ ತೆಗೆದುಕೊಳ್ಳಲಾಗುತ್ತಿದೆ. ಇದು ಪ್ರಯಾಣಿಕರ ಸೌಲಭ್ಯಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಅಂತೆಯೇ ನೈಋತ್ಯ ರೈಲ್ವೆ ಮೈಸೂರು ವಿಭಾಗದ ಎಲ್ಲಾ 32 ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ ನೀಡಲು ಮುಂದಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ವೈ-ಫೈ ಸೌಲಭ್ಯವನ್ನುಆರಂಭಿಸಲಾಗುತ್ತಿದೆ. ಗೂಗಲ್ ಸಹಯೋಗದಲ್ಲಿ ವೈ-ಫೈ ಸೌಲಭ್ಯ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಎಲ್ಲಾ 115 ರೈಲ್ವೆ ನಿಲ್ದಾಣಗಳಲ್ಲಿ ಹೈ ಸ್ಪೀಡ್​ ವೈ-ಫೈ ನೆಟ್​ವರ್ಕ್​ ವ್ಯವಸ್ಥೆ ಮಾಡುವುದಾಗಿ ನೈಋತ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ. 


2016-17ರ ರೈಲ್ವೆ ಬಜೆಟ್​ನಲ್ಲಿ ಘೋಷಣೆ ಮಾಡಿರುವಂತೆ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ ನೀಡಲಾಗುವುದು. ಈಗಾಗಲೇ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಸೇರಿ ಮೈಸೂರು, ಹುಬ್ಬಳ್ಳಿಯ ನಿಲ್ದಾಣಗಲ್ಲಿ ಪ್ರಯಾಣಿಕರಿಗೆ ವೈ-ಫೈ ಸೇವೆ ಲಭ್ಯವಿದೆ.


30 ನಿಮಿಷಗಳ ಕಾಲ ಉಚಿತ ಮತ್ತು ಹೈಸ್ಪೀಡ್​ ವೈ-ಫೈ ಸಿಗಲಿದೆ. ಬಳಿಕ, 64 kb ವೇಗದಲ್ಲಿ ವೈ-ಫೈ ಲಭ್ಯವಾಗಲಿದೆ. ರೈಲ್ವೆ PNR ಮಾಹಿತಿ​, ರೈಲ್ವೆ ಮಾಹಿತಿ ಪಡೆಯಲು ಅನ್​ಲಿಮಿಟೆಡ್​ ಡಾಟಾ ಲಭ್ಯವಿದೆ.


ರೈಲ್ವೆ ಮಂಡಳಿ ಈಗಾಗಲೇ ಸರ್ಕಾರಿ ಸ್ವಾಮ್ಯದ ರೈಲ್​ಟೆಲ್​ ಕಾರ್ಪೋರೇಷನ್​ ಸಂಸ್ಥೆಗೆ ವೈ-ಫೈ ಕೆಲಸವನ್ನು ನೀಡಿದೆ. ಇದು ರೈಲ್ವೆ ನಿಲ್ದಾಣಗಳಿಗೆ ನೆಟ್​ವರ್ಕ್​ ಸಂಪರ್ಕವನ್ನು ಕಲ್ಪಿಸಲಿದ್ದು, ಗೂಗಲ್​ ಇದಕ್ಕೆ ತಾಂತ್ರಿಕ ಸಹಕಾರ ನೀಡುತ್ತದೆ.


ರೈಲ್ವೆ Wi-Fi ಅನ್ನು ಪ್ರವೇಶಿಸಲು, ನಾಲ್ಕು-ಅಂಕಿಯ ಕೋಡ್(OTP) ಅನ್ನು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವುದು. ಆ ಕೋಡ್ ಮೂಲಕ ಲಾಗ್ ಇನ್ ಆಗುವ ಮೂಲಕ ಅನಿಯಮಿತ ಡಾಟಾವನ್ನು ಪಡೆಯಬಹುದು.