ಸಂಬಂಧ ಕಡಿದುಕೊಳ್ಳಲು ಬಯಸಿದ ಪತ್ನಿ.. ಸೇಡು ತೀರಿಸಿಕೊಳ್ಳಲು ಹೆಚ್ಐವಿ ಪೀಡಿತ ಪತಿ ಮಾಡಿದ್ದೇನು?
ಇಲ್ಲೊಬ್ಬ ಪತಿರಾಯ ತನ್ನ ಹೆಂಡತಿಯ (Wife) ಮೇಲೆ ಸೇಡು ತೀರಿಸಿಕೊಳ್ಳಲು ವಿಶಿಷ್ಟವಾದ ಮಾರ್ಗವನ್ನು ಆರಿಸಿಕೊಂಡಿದ್ದಾನೆ. ಆರೋಪಿ ಎಚ್‌ಐವಿ (HIV) ಪಾಸಿಟಿವ್ ಆಗಿದ್ದ. ಇದನ್ನೇ ಬಳಸಿಕೊಂಡ ಆರೋಪಿ ಪತ್ನಿಗೂ ಸೋಂಕು ತಗುಲಿಸಲು ಯತ್ನಿಸಿದ್ದಾನೆ.
ಬೆಂಗಳೂರು: ಸೇಡು ತೀರಿಸಿಕೊಳ್ಳಲು ವ್ಯಕ್ತಿ ಯಾವ ಮಟ್ಟಕ್ಕೂ ಇಳಿಯಬಹುದು. ಕೌಟುಂಬಿಕ ಸಂಬಂಧಗಳ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ. ಇಂತಹದೊಂದು ಪ್ರಕರಣ ಕರ್ನಾಟಕದಲ್ಲಿ ಮುನ್ನೆಲೆಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ತನ್ನ ಹೆಂಡತಿಯ (Wife) ಮೇಲೆ ಸೇಡು ತೀರಿಸಿಕೊಳ್ಳಲುಮಾಡಿದ ಕೆಲಸ ಕೇಳಿದರೆ ನೀವು ಆಶ್ಚರ್ಯಪಡುತ್ತೀರಿ.
ಆರೋಪಿಯು ಕ್ಯಾಬ್ ಚಾಲಕನಾಗಿದ್ದು, ಆತ ಎಚ್‌ಐವಿ (HIV) ಸೋಂಕಿತನಾಗಿದ್ದ. 2015 ರಲ್ಲಿ 28 ವರ್ಷದ ಯುವತಿಯನ್ನು ವಿವಾಹವಾಗಿದ್ದ. ಆರೋಪಿ ಎಚ್‌ಐವಿ ಸೋಂಕಿತನಾಗಿದ್ದರೂ, ಸಂತ್ರಸ್ತೆ ಆತನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಹಿಂದ ನಾಯಕರ ಏಳಿಗೆ ಸಹಿಸದ ಸಿದ್ದರಾಮಯ್ಯರಿಂದ ಕುಟುಂಬ ರಾಜಕಾರಣ: ಬಿಜೆಪಿ
ಈ ಸಮಯದಲ್ಲಿ, ಇಬ್ಬರೂ ಸುರಕ್ಷಿತ ದೈಹಿಕ ಸಂಪರ್ಕ ಹೊಂದಿದ್ದರು. ಈ ಸಮಯದಲ್ಲಿ, ಇಬ್ಬರೂ ಸುಮಾರು 6 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದಾರೆ. ಈ ಸಮಯದಲ್ಲಿ, ಮಹಿಳೆಯು ಎಚ್ಐವಿ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಆಕೆ ಸೋಂಕಿಗೆ ಒಳಗಾಗಿಲ್ಲ.
ಪತಿಗೆ ಅಕ್ರಮ ಸಂಬಂಧ, ದೂರವಾದ ಪತ್ನಿ:
ಈ ಎಲ್ಲದರ ಮಧ್ಯೆ ಆರೋಪಿಯು ಮತ್ತೋರ್ವ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಪತಿಯು (Husband) ಆ ಮಹಿಳೆಯನ್ನು ಮನೆಗೆ ಕರೆತಂದಿರುವ ವಿಷಯ ತಿಳಿದ ಪತ್ನಿ ಆತನಿಂದ ದೂರ ಹೋಗಿದ್ದಾಳೆ. ಇದಾದ ಬಳಿಕ ಆರೋಪಿ ಕ್ಯಾಬ್ ಚಾಲಕ ತನ್ನ ಪತ್ನಿಯನ್ನು ಕಳೆದ ವಾರ ಸಕಾರಣ ಭೇಟಿಯಾಗಿದ್ದಾನೆ. ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ಮಹಿಳೆಗೆ ಮಾದಕ ವಸ್ತು ಸೇವಿಸುವಂತೆ ಮಾಡಿ, ಅಸುರಕ್ಷಿತ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆಯಿಂದ ಪೊಲೀಸರಿಗೆ ದೂರು:
ಅದೇ ಸಮಯದಲ್ಲಿ, ಸಂತ್ರಸ್ತ ಮಹಿಳೆ ತನ್ನ HIV ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾಳೆ ಮತ್ತು ವರದಿಗಾಗಿ ಕಾಯುತ್ತಿದ್ದಾಳೆ. ಪತ್ನಿ ತನ್ನೊಂದಿಗೆ ಸಂಬಂಧ ಕಡಿದುಕೊಳ್ಳಲು ಮುಂದಾದ ಕಾರಣ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ಮಹಿಳೆ ಸಹಾಯಕ್ಕಾಗಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಹಿಳೆಗೆ ಈಗ ವನಿತಾ ಸಹಾಯವಾಣಿ (ಮಹಿಳಾ ಸಹಾಯವಾಣಿ) ಉದ್ಯೋಗಿಗಳು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ: BS Yediyurappa : ಕಾಂಗ್ರೆಸ್ ನಾಯಕರ ಮನ ಒಲಿಕೆ ಯತ್ನ ವಿಫಲ ; ನಾಳೆ ಮತ್ತೆ ಸಂದಾನ ಸಭೆ
ಮದುವೆಯ ನಂತರ ಮಹಿಳೆಗೆ ತನ್ನ ಪತಿ ಅಂದರೆ ಆರೋಪಿ ಎಚ್‌ಐವಿ ಪಾಸಿಟಿವ್ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಷ್ಟೆಲ್ಲಾ ಆದರೂ ಆರೋಪಿ ಆಕೆಯ ಮನವೊಲಿಸಿ ತನ್ನೊಂದಿಗೆ ಇರುವಂತೆ ಮಾಡಿದ್ದ.
ಇದೀಗ ಪರಾರಿಯಾದ ಆರೋಪಿಗಾಗಿ ಈಗ ಪೊಲೀಸರು ಹುಡುಕಾಟ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.