BS Yediyurappa : ಕಾಂಗ್ರೆಸ್ ನಾಯಕರ ಮನ ಒಲಿಕೆ ಯತ್ನ ವಿಫಲ ; ನಾಳೆ ಮತ್ತೆ ಸಂದಾನ ಸಭೆ

ಕಾಂಗ್ರೆಸ್ ಶಾಸಕರು ಸಚಿವ ಈಶ್ವರಪ್ಪ(KS Eshwarappa) ರಾಜೀನಾಮೆ ಕೊಡುವವರೆಗೆ ತನ್ನ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಅಚಲ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊರೆಹೋಗಿದ್ದಾರೆ. ಹೇಗಾದರೂ ಮಾಡಿ ಕೈ ಪಕ್ಷದವರ ಮನವೊಲಿಸಲು ವಿನಂತಿಯನ್ನು ಮಾಡಿದ್ದಾರೆ.

Written by - Prashobh Devanahalli | Last Updated : Feb 17, 2022, 09:25 PM IST
  • ಕೆಎಸ್ ಈಶ್ವರಪ್ಪ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಅಹೋರಾತ್ರಿ ಧರಣಿ
  • ಕೈ ನಾಯಕರ ಮನವೊಲಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎರಡು ತಾಸುಗಳ ಸಂಧಾನ ಸಭೆ
  • ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊರೆಹೋದ ಕಮಲ ನಾಯಕರು
BS Yediyurappa : ಕಾಂಗ್ರೆಸ್ ನಾಯಕರ ಮನ ಒಲಿಕೆ ಯತ್ನ ವಿಫಲ ; ನಾಳೆ ಮತ್ತೆ ಸಂದಾನ ಸಭೆ title=

ಬೆಂಗಳೂರು : ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸಭೆ ಹಾಗೂ ಪರಿಷತ್ ನಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿರುವ ಹಿನ್ನೆಲೆಯಲ್ಲಿ, ಕೈ ನಾಯಕರ ಮನವೊಲಿಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎರಡು ತಾಸುಗಳ ಸಂಧಾನ ಸಭೆ ಮಾಡಿದರು ವಿಫಲಗೊಂಡಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜತೆ ದೀರ್ಘಕಾಲ ಸಂಧಾನ ಸಭೆ ನಡೆಸಿದ ಮಾಜಿ ಸಿಎಂ ಯಡಿಯೂರಪ್ಪ(BS Yediyurappa), ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಅಶೋಕ್ ಡಿ ಕೆ ಶಿವಕುಮಾರ್ ಮನ ಒಲಿಸಲು ಪ್ರಯತ್ನ ಪಟ್ಟರು, ಆದರೆ ಸಂಧಾನ ಸಭೆಯಲ್ಲಿ ಮಾತನ್ನಾಡಿದ ಡಿಕೆ ಶಿವಕುಮಾರ್ ಈಶ್ವರಪ್ಪನವರು ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಇದರ ಜೊತೆಗೆ ನನ್ನ ತಂದೆ ತಾಯಿಯನ್ನು ನಿಂದಿಸಿದ್ದಾರೆ ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Siddaramaiah Funny Talking : ಇಲ್ಲಿ ಇಲಿಗಳು ಇವೆ.. ನಾನ್ ಬಿಟ್ಟೆ ಎಂದು ಹೇಳಬೇಡಿ; ಸ್ಪೀಕರ್-ಸಿದ್ದು ಸ್ವಾರಸ್ಯ ಮಾತು ಇಲ್ಲಿದೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೊರೆಹೋದ ಕಮಲ ನಾಯಕರು:

ಕಾಂಗ್ರೆಸ್ ಶಾಸಕರು ಸಚಿವ ಈಶ್ವರಪ್ಪ(KS Eshwarappa) ರಾಜೀನಾಮೆ ಕೊಡುವವರೆಗೆ ತನ್ನ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಅಚಲ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೊರೆಹೋಗಿದ್ದಾರೆ. ಹೇಗಾದರೂ ಮಾಡಿ ಕೈ ಪಕ್ಷದವರ ಮನವೊಲಿಸಲು ವಿನಂತಿಯನ್ನು ಮಾಡಿದ್ದಾರೆ.

ಸಂಧಾನ ಸಭೆ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಅಶೋಕ್ ಸೇರಿ ಎರಡು ಗಂಟೆಗಳ ಕಾಲ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah), ಡಿಕೆಶಿ, ಹಾಗೂ ಕಾಂಗ್ರೆಸ್ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ.ರಾತ್ರಿ ಇಲ್ಲಿ ಧರಣಿ ಮಾಡುವುದು ಬೇಡ , ಆ ರೀತಿ ವಿಶೇಷವಾದ ಘಟನೆ ನಡೆದಿಲ್ಲ ಎಂದಿದ್ದೇವೆ.ಆದರೂ ಮುಂದುವರಿಸುದಾದರೆ ನಾಳೆ ನಿಮ್ಮದೇ ಆದ ರೀತಿಯಲ್ಲಿ ಮುಂದುವರಿಸಿ.ರಾತ್ರಿ ಮಾತ್ರ ಇಲ್ಲಿ ಮಲಗೋದು ಬೇಡ ಇದು ಒಳ್ಳೆಯ ಪದ್ದತಿ ಆಗಲ್ಲ ಎಂದು ಮನವೋಲಿಕೆ ಮಾಡಿದ್ದೇವೆ.ಆದರೆ ಅವರು ಮನಸ್ಸಿನಲ್ಲಿ ತೀರ್ಮಾನ ಮಾಡಿ ಆಗಿದೆ. ರಾತ್ರಿ ಇಲ್ಲೇ ಇರುತ್ತೇವೆ ಎಂದು ಸ್ಪೀಕರ್ ಕೂಡಾ ಮನವೋಲಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.ನಮ್ಮ ಪ್ರಯತ್ನ ನಾವು ಮಾಡಿದ್ದೇವೆ,ನಾಳೆ ಮತ್ತೆ ಮಾತನಾಡುತ್ತೇವೆ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News