ವರ್ಕೌಟ್ ಮಾಡುವಾಗ್ಲೆ ಕುಸಿದು ಬಿದ್ದು ಮಹಿಳೆ ಸಾವು..!
ಸಾವು ಯಾರಿಗೆ ಯಾವಾಗ ಬರುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ, ಈಗ ಇದ್ದವರು ಮತ್ತೊಂದು ಕ್ಷಣದಲ್ಲಿ ಇರೋದಿಲ್ಲ.ಅಂತಹದ್ದೆ ಒಂದು ಘಟನೆ ಈಗ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಬೆಂಗಳೂರು: ಸಾವು ಯಾರಿಗೆ ಯಾವಾಗ ಬರುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ, ಈಗ ಇದ್ದವರು ಮತ್ತೊಂದು ಕ್ಷಣದಲ್ಲಿ ಇರೋದಿಲ್ಲ.ಅಂತಹದ್ದೆ ಒಂದು ಘಟನೆ ಈಗ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಇದನ್ನೂ ಓದಿ: Electricity Price Hike : ಏಪ್ರಿಲ್ 1 ರಿಂದ ವಿದ್ಯುತ್ ಗ್ರಾಹಕರಿಗೆ ಕಾದಿದೆಯಾ ಕರೆಂಟ್ ಶಾಕ್?
ನಗರದ ಮಲ್ಲೇಶ್ ಪಾಳ್ಯ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಮಹಿಳೆಯೊಬ್ಬರು ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.ಮೃತಪಟ್ಟಿರುವ ಮಹಿಳೆ ವಿನಯ ಕುಮಾರಿ (44) ಎಂದು ತಿಳಿದುಬಂದಿದೆ.[[{"fid":"233908","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ: CSK vs KKR Prediction: ಇರ್ವರ ನಡುವೆ ಗೆಲ್ಲುವವರು ಯಾರು?
ಐಡಿಸಿ ಕಂಪನಿಯಲ್ಲಿ ಬ್ಯಾಗ್ರೌಂಡ್ ವೆರಿಫಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿನಯಕುಮಾರಿ ನಿನ್ನೆ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ರು, ಇಂದು ಮುಂಜಾನೆ ಎಂದಿನಂತೆ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ 8 ಗಂಟೆ ಸುಮಾರಿಗೆ ದಿಢೀರ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆ ಸಾಗಿಸುವ ಕೆಲಸ ಮಾಡಿದ್ರೂ ಪ್ರಾಣಪಕ್ಷಿ ಹಾರಿ ಹೋಗಿತ್ತು, ವಿನಯ ಕುಮಾರಿ ಜಿಮ್ನಲ್ಲಿ ವರ್ಕೌಟ್ ಮಾಡುವ ಅಂತಿಮ ಕ್ಷಣಗಳು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.ಸದ್ಯ ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.