Electricity Price Hike : ಏಪ್ರಿಲ್ 1 ರಿಂದ ವಿದ್ಯುತ್ ಗ್ರಾಹಕರಿಗೆ ಕಾದಿದೆಯಾ ಕರೆಂಟ್ ಶಾಕ್?

ಕೆಇಆರ್​ಸಿ(Karnataka Electricity Regulatory Commission) ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಿದೆ.

Written by - Channabasava A Kashinakunti | Last Updated : Mar 26, 2022, 01:27 PM IST
  • ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆ
  • ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ ಪರಿಷ್ಕರಣೆ ನಿರ್ಧಾರ
  • ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೆಇಆರ್​ಸಿ ದರ ಪರಿಷ್ಕರಣೆ
Electricity Price Hike : ಏಪ್ರಿಲ್ 1 ರಿಂದ ವಿದ್ಯುತ್ ಗ್ರಾಹಕರಿಗೆ ಕಾದಿದೆಯಾ ಕರೆಂಟ್ ಶಾಕ್? title=

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು(KERC) ಮುಂದಾಗಿದೆ. 

ಕೆಇಆರ್​ಸಿ(Karnataka Electricity Regulatory Commission) ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ವಿದ್ಯುತ್ ನಿಯಂತ್ರಣ ಆಯೋಗವು ಫೆಬ್ರವರಿಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಅದರಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರ ಪಟ್ಟಿ ಬಿಡುಗಡೆ ಮಾಡಲಿದೆ.ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೆಇಆರ್​ಸಿ ದರ ಪರಿಷ್ಕರಣೆ ಮಾಡುತ್ತೆದೆ. 

ಇದನ್ನೂ ಓದಿ : ‘ನಾನು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ; ನನ್ನ ಹೇಳಿಕೆ ತಿರುಚಲಾಗಿದೆ’

ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ(Bescom, Mescom, Cescom) ಸೇರಿದಂತೆ ಇತರೆ ವಿದ್ಯುತ್ ಸರಬರಾಜು ಕಂಪನಿಗಳಿಂದ ವಿದ್ಯುತ್ ದರ ಪರಿಷ್ಕರಣೆಗೆ ಒತ್ತಡ ಹೇರಿವೆ. ಕಂಪನಿಗಳ ನಿರ್ವಹಣೆ ವೆಚ್ಚ ಹೆಚ್ಚಳ ಹಿನ್ನಲೆ ದರ ಪರಿಷ್ಕರಣೆ ಪಟ್ಟು ಹಿಡಿದಿವೆ.  ಬೆಸ್ಕಾಂ ಪ್ರತಿ ಯೂನಿಟ್ ಗೆ 1.50 ರೂ. ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದೆ. ಕೆಇಆರ್​ಸಿ ಸಾರ್ವಜನಿಕರಿಗೆ ಹೊರೆಯಾಗದಂತೆ ವಿದ್ಯುತ್ ದರ ಪರಿಷ್ಕರಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

2022-23 ರ ಸಾಲಿನಲ್ಲಿ ಪ್ರತಿ ಯೂನಿಟ್ ಗೆ 35 ರಿಂದ 45 ಪೈಸೆ ಹೆಚ್ಚಳ(Electricity price Hike) ಸಾಧ್ಯತೆ ಇದೆ. ಈ ತಿಂಗಳ ಅಂತ್ಯದಲ್ಲಿ ಹೊಸ ವಿದ್ಯುತ್ ದರ ಪರಿಷ್ಕರಣೆ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : Bengaluru Karaga: 4 ಕೋಟಿ ರೂ. ವೆಚ್ಚದಲ್ಲಿ ಬಿಡಿಎ ಹಸಿಕರಗ ಮಂಟಪ ನಿರ್ಮಾಣ- ಎಸ್ ಆರ್ ವಿಶ್ವನಾಥ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News