Lokasabha Election 2024 : ರಾಜ್ಯದಲ್ಲಿ ಎರಡನೇ ಮತ್ತು ಕೊನೆ ಹಂತದ ಮತದಾನ ನಡೆಯುತ್ತಿದೆ.ಬಿಸಿಲ ಬೇಗೆಯ ಮಧ್ಯೆಯೇ ಜನರು ಮತದಾನದಲ್ಲಿ ತೊಡಗಿದ್ದಾರೆ.ಈ ನಡುವೆ, ಶಿವಮೊಗ್ಗದಲ್ಲಿ ಪತಿಯ ಸಾವಿನ ಮಧ್ಯೆಯೂ ಮಹಿಳೆ ಮತದಾನದಲ್ಲಿ ಭಾಗಿಯಾಗಿರುವ ಘಟನೆ ನಡೆದಿದೆ.ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ವಾಪ್ತಿಯ ಆಡುಗೋಡಿಯಲ್ಲಿ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ತೀರ್ಥಹಳ್ಳಿ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ವಾಪ್ತಿಯ ಆಡುಗೋಡಿಯ ಕಲಾವತಿ ಎನ್ನುವವರ ಪತಿ ವೆಂಕಟೇಶ್ ಇಂದು ಬೆಳಗ್ಗೆ ಸಾವನಪ್ಪಿದ್ದಾರೆ. ವೆಂಕಟೇಶ್  ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾರೆ. ಆದರೆ, ಕಲಾವತಿ ವೋಟ್ ಹಾಕಲು ಹೊರಡುವುದಕ್ಕಿಂತ ಮುನ್ನವೇ ವಿಷಯ ತಿಳಿದಿತ್ತು. ಗಂಡ ತೀರಿಕೊಂಡ ಸುದ್ದಿ ತಿಳಿದ ನಂತರವೂ ಮಹಿಳೆ ಮತದಾನ ಮಾಡಿ ಬಂದಿದ್ದಾರೆ. 


ಇದನ್ನೂ ಓದಿ : Bengaluru Rain: ವರ್ಷದ ಮೊದಲ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ


ಪತಿಗಾಗಿಯೇ ವೋಟ್ ಹಾಕಿರುವ ಮಹಿಳೆ : 
ಕಲಾವತಿ ಪತಿ ವೆಂಕಟೇಶ್ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರು.ಈ ಹಿನ್ನೆಲೆಯಲ್ಲಿ ತನ್ನ ಗಂಡನ ತೃಪ್ತಿಗಾಗಿ ಮತ ಹಾಕಲೇ ಬೇಕು ಎನ್ನುವ ಕಾರಣಕ್ಕಾಗಿ ತಮ್ಮ ಪತಿಯ ಮೇಲಿನ ಪ್ರೀತಿಗಾಗಿ ವೋಟ್ ಮಾಡಲೇ ಬೇಕು ಎಂದು ಕಲಾವತಿ ತಮ್ಮ ಹಕ್ಕು ಚಲಾಯಿಸಿದ್ದಾರೆ.  


ಮತ್ತೊಂದೆಡೆ, ಒಂದೇ ಕುಟುಂಬದ ತೊಂಬತ್ತಾರು ಸದಸ್ಯರು ಜೊತೆಯಾಗಿ ಮತದಾನದ ಹಕ್ಕನ್ನು ಚಲಾಯಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.  ಕುಟುಂಬದ 96 ಮಂದಿ ಜೊತೆಯಾಗಿ ಬಂದು ಮತದಾನ ಮಾಡಿದ್ದಾರೆ. 


ಇದನ್ನೂ ಓದಿ : Lok Sabha Election: ಮೂರು ತಲೆಮಾರಿನ ಮಹಿಳೆಯರಿಂದ ಒಟ್ಟಿಗೆ ಮತದಾನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.