ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಿಎಂ ಕಚೇರಿಯಲ್ಲಿ ಕೆಲಸ : ಬೊಮ್ಮಾಯಿ ಘೋಷಣೆ
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ದೊಡ್ಡಬಳ್ಳಾಪುರ : ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ತಮ್ಮ ಕಚೇರಿಯಲ್ಲಿ ಕೆಲಸ ನೀಡುವುದಾಗಿ ಬಿಜೆಪಿ ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಜಸಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ತಮ್ಮ ಕಚೇರಿಯಲ್ಲೇ ಉದ್ಯೋಗ ನೀಡುವ ಭರವಸೆ ನೀಡಿದರು. ನೊಂದ ಕುಟುಂಬದ ಕಣ್ಣೀರು ಒರೆಸುವುದಲ್ಲದೆ ಅವರ ಕುಟುಂಬದವರ ಭವಿಷ್ಯದ ಭದ್ರತೆಯನ್ನು ಖಾತರಿಗೊಳಿಸುವುದೇ ಬಿಜೆಪಿಯ ಜನಸ್ಪಂದನ ಎಂದು ಇದೆ ವೇಳೆ ಹೇಳಿದರು. ಅಲ್ಲದೆ, ಕಾಂಗ್ರೆಸ್ ದುರಾಡಳಿತದ ಬಗ್ಗೆ ರಾಜ್ಯದ ಜನರು ಬೇಸತ್ತಿದ್ದಾರೆ. ನಾವು ದೊಡ್ಡಬಳ್ಳಾಪುರದಿಂದ ಜನಸ್ಪಂದನ ಯಾತ್ರೆಯನ್ನ ಅರಂಭಿಸಿದ್ದೇವೆ ಇನ್ನು ರಾಜ್ಯಾದ್ಯಂತ ನಡೆಸುತ್ತೇವೆ.. ನಿಮಗೆ ತಾಕತ್ ಇದ್ದರೆ ನಮ್ಮ ಯಾತ್ರೆಯನ್ನು ನಿಲ್ಲಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ: ’ಎಡಗೈ ಅಪಘಾತಕ್ಕೆ ಕಾರಣ’ ಎನ್ನುತ್ತಾ ಸಿನಿಮಾ ಶೂಟಿಂಗ್ ಶುರು ಮಾಡಿದ ದೂದ್ ಪೇಡ ದಿಗಂತ್
ಕಾಂಗ್ರೆಸ್ ವಿರುದ್ಧ ಗುಡುಗಿದ ಸ್ಮೃತಿ ಇರಾನಿ, ಯಡಿಯೂರಪ್ಪ
ಕಾರ್ಯಕ್ರಮದಲ್ಲಿ ರಾಜಾಹುಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಘರ್ಜನೆ ಬಹಳ ಜೋರಾಗಿತ್ತು. ಸಿದ್ದು ಮತ್ತು ಡಿಕೆ ವಿರುದ್ದ ಬಿಎಸ್‌ವೈ ಹರಿಹಾಯ್ದರು. ಎಲ್ಲೀವರೆಗೆ ಪ್ರದಾನಿಯಾಗಿ ಮೋದಿ ಇರ್ತಾರೋ ಅಲ್ಲೀವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ ಎಂದು ಗುಡುಗಿದರು. ಕನ್ನಡದಲ್ಲಿ ಮಾತು ಆರಂಭಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಗಾಂಧಿ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದ್ರು. ಭಾರತವನ್ನ ಒಡೆದವರು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸವೆಂದರು.
ಕೋರ್ಟ್‌ನಲ್ಲಿ ಈಗ ರಾಹುಲ್ ಬಾ.. ಸೋನಿಯಾ ಬಾ...
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಬಿ ಎಸ್ ಯಡಿಯೂರಪ್ಪ ಮತ್ತು ಬೊಮ್ಮಯಿ ಆಡಳಿತವನ್ನು ಹೊಗಳಿದ್ರು.. ಅವರ ಮುಂದಾಳತ್ವದಲ್ಲಿ ಪಕ್ಷವನ್ನ ಇನ್ನು ಎತ್ತರಕ್ಕೆ ತರುತೇವೆ.. ಸದ್ಯ ಕಾಂಗ್ರೆಸ್ ಭ್ರಷ್ಟಾಚಾರ ಅರೋಪ ಮಾಡುತ್ತೆ.. ಆದ್ರೆ ಎಲ್ಲಾ ಭ್ರಷ್ಟಾಚಾರ ಮಾಡಿರೋದು ಅವರೇ ಅದಕ್ಕೆ ಇಂದು ಕೋರ್ಟ್ ನಲ್ಲಿ ರಾಹುಲ್ ಗಾಂಧಿ ಬಾ ಸೋನಿಯಾ ಗಾಂಧಿ ಬಾ ಡಿಕೆ ಬಾ ಕೂಗುತ್ತಾರೆ ಎಂದು ಕಾಂಗ್ರೆಸ್ ಗೆ ಕುಟುಕಿದ್ರು.
ಬಾಲ ಬಿಚ್ಚೋರಿಗೆ ಬೂಲ್ಡೋಜರ್ ದಾಳಿ ಎಚ್ಚರಿಕೆ ಕೊಟ್ಟ ಸಿಟಿ ರವಿ..!
ಇದೇ ವೇಳೆ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಸಿಟಿ ರವಿ, ಬಿಜೆಪಿ ಯಾವಾಗ ಅಧಿಕಾರಕ್ಕೆ ಬರುತ್ತವೊ ಆಗ ಕೊಡಿ ಬಿದ್ದು ಗಂಗೆ ಪೂಜೆ ಮಾಡುತ್ತೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಜ್ಯಕ್ಕೆ ಬರ ಬರುತ್ತದೆ. ಅದರಲ್ಲೂ ಕೆಲವರು ರಾಜ್ಯಕ್ಕೆ ಕಾಲು ಇಟ್ಟರೆ ಮಟಾಸ್ ಲೆಗ್ ಇದ್ದಂಗೆ ಎಂದು ಗುಡುಗಿದ್ರು. ಇನ್ನು ಕಾಂಗ್ರೆಸ್ ತುಕ್ಡೆ ಗ್ಯಾಂಗ್ ಬೆಂಬಲಿಸುತ್ತಿದೆ. ಬಾಲ ಬಿಚ್ಚೋರಿಗೆ ಬುಲ್ಡೋಜರ್ ಟ್ರೀಟ್‌ಮೆಂಟ್ ಕೊಡಬೇಕು. ರಾಜ್ಯದಲ್ಲಿ ರಿಡೂ ಪಿತಾಮಹ ಯಾರು, ಸೋಲಾರ್ ಹಗರಣದ ಖದೀಮ ಯಾರು ಎಂದು ಎಲ್ಲರಿಗೂ ಗೊತ್ತಿದೆ. ಕೆಂಪಣ್ಣ ಆಯೋಗದ ವರದಿ ಬಹಿರಂಗ ಪಡಿಸಿದರೆ ಕಳ್ಳಯಾರು, ಸುಳ್ಳು ಯಾರು ಎಂದು ಸದ್ಯದಲ್ಲಿಯೇ ಉತ್ತರ ಸಿಗಲಿದೆ ಎಂದು ವಾಗ್ದಾಳಿ ನಡೆಸಿದ್ರು.. ಇದರ ಜೊತೆ ಅರೋಗ್ಯ ಸಚಿವ ಸುದಾಕರ್ ಸಹ ಕಾಂಗ್ರೆಸ್ ವಿರುದ್ದ ಸಿಕ್ಕಪಟ್ಟೆ ಹರಿಹಾಯ್ದರು.
ಇನ್ನು ಕಳೆದೆರಡು ತಿಂಗಳ ಹಿಂದೆಯೇ ನಡಯಬೇಕಿದ್ದ ಜನೋತ್ಸವ ಕೊನೆಗೆ ಜನಸ್ಪಂದನವಾಗಿ ಯಶಸ್ವಿ ಅಂತ್ಯಕಂಡಿದೆ. ಇನ್ನು ಕಾರ್ಯಕ್ರಮವನ್ನ ಬಹಳ ಅಚ್ಚಕಟ್ಟಾಗಿ ನಿರ್ವಹಣೆ ಮಾಡಿದ ಸಚಿವ ಸುದಾಕರ್, ಮುನಿರತ್ನ ಹಾಗೂ ಎಂಟಿಬಿಗೆ ಇಡೀ ಪಕ್ಷ ಹಾಡಿಹೊಗಲಿದ್ದು ವಿಶೇಷ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.