’ಎಡಗೈ ಅಪಘಾತಕ್ಕೆ ಕಾರಣ’ ಎನ್ನುತ್ತಾ ಸಿನಿಮಾ ಶೂಟಿಂಗ್ ಶುರು ಮಾಡಿದ ದೂದ್ ಪೇಡ ದಿಗಂತ್

ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಲಿದ್ದಾರೆ.

Written by - YASHODHA POOJARI | Edited by - Bhavishya Shetty | Last Updated : Sep 10, 2022, 05:13 PM IST
    • ದೂದ್ ಪೇಡ ದಿಗಂತ್ ಅಭಿನಯದ ’ಎಡಗೈ ಅಪಘಾತಕ್ಕೆ ಕಾರಣ’ ಹೊಸ ಸಿನಿಮಾ
    • ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ಚಿತ್ರ
    • ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಮುಹೂರ್ತ
’ಎಡಗೈ ಅಪಘಾತಕ್ಕೆ ಕಾರಣ’ ಎನ್ನುತ್ತಾ ಸಿನಿಮಾ ಶೂಟಿಂಗ್ ಶುರು ಮಾಡಿದ ದೂದ್ ಪೇಡ ದಿಗಂತ್ title=
Edgai Apaghathakke Karana

ಗಾಳಿಪಟ-2 ಭರ್ಜರಿ ಯಶಸ್ಸಿನ ಬಳಿಕ ದೂದ್ ಪೇಡ ದಿಗಂತ್ ’ಎಡಗೈ ಅಪಘಾತಕ್ಕೆ ಕಾರಣ’ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶ್ವ ಎಡಚರ ದಿನದಂದು ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿದ್ದ ಚಿತ್ರತಂಡ ಇವತ್ತು ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಮುಹೂರ್ತ ನೆರವೇರಿಸಿದೆ. 

ಇದನ್ನೂ ಓದಿ: ಇಂದು ಶಕ್ತಿಧಾಮದ ಮಕ್ಕಳ ಕಣ್ಣಲ್ಲಿ ದೇವರ ಕಂಡೆ : ಅಪ್ಪು ಸ್ಮರಿಸಿದ ತಮಿಳು ನಟ ವಿಶಾಲ್‌

ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ ನಟಿಸಲಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ. 

ಇದನ್ನೂ ಓದಿ: Lucky Man: "ಅಪ್ಪು ಕುಳಿತಿದ್ದ ಆ ಚೇರ್‌ ಕೊಡಿ ಸಾಕು" - ಗಳಗಳನೇ ಅತ್ತ ರಾಘಣ್ಣ!

ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿ ಮಾಡಲಾಗಿರುತ್ತದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದ್ದು, ಶೀರ್ಘದಲ್ಲಿ ಚಿತ್ರತಂಡ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News