ಚಾಮುಂಡಿ ಬೆಟ್ಟ ಉಳಿಸಿ ಸಹಿ ‘ಆಂದೋಲನ’ಕ್ಕೆ ಕೈಜೋಡಿಸಿ: ಯದುವೀರ್ ಮನವಿ
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ‘ಸೇವ್ ಚಾಮುಂಡಿ ಮೂಮೆಂಟ್’ ಎಂಬ ಹೆಸರಿನಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ ಶುರುವಾಗಿದೆ.
ಮೈಸೂರು: ನಿಮ್ಮ ಒಂದೇ ಒಂದು ಸಹಿ ಚಾಮುಂಡಿಬೆಟ್ಟವನ್ನು ಉಳಿಸಬಹುದು. ಹೀಗಾಗಿ ಬೆಟ್ಟ ಉಳಿಸಿ ಸಹಿ ‘ಆಂದೋಲನ’ಕ್ಕೆ ಕೈಜೋಡಿಸಿ ಎಂದು ಮೈಸೂರು ರಾಜವಂಶಸ್ಥ, ಯದುವಂಶದ 27ನೇ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Krishnadatta Chamaraja Wadiyar) ಮನವಿ ಮಾಡಿಕೊಂಡಿದ್ದಾರೆ.
ಮಿತಿ ಮೀರಿರುವ ಅಭಿವೃದ್ಧಿ ಕಾರ್ಯದಿಂದ ನಶಿಸಿಹೋಗುವ ಹಂತದಲ್ಲಿರುವ ಚಾಮುಂಡಿ ಬೆಟ್ಟವನ್ನು ಉಳಿಸಬೇಕಾಗಿರುವುದು(Save Chamundi Hill Movement) ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಿರಂತರ ಮಳೆಯಿಂದಾಗಿ ಚಾಮುಂಡಿ ಬೆಟ್ಟ ಕುಸಿಯುತ್ತಿದೆ. ಈ ನಡುವೆ ಸರ್ಕಾರ ಕಾಮಗಾರಿ ಮಾಡಲು ಹೊರಟಿದೆ. ಇದರಿಂದ ಐತಿಹಾಸಿಕ ಬೆಟ್ಟಕ್ಕೆ ಹಾನಿಯಾಗಬಹುದು ಎಂಬ ಕಳಕಳಿ ವ್ಯಕ್ತಪಡಿಸಿರುವ ಯದುವೀರ್ ಪ್ರಾಚೀನ ಇತಿಹಾಸ ಹೊಂದಿರವು ಬೆಟ್ಟವನ್ನು ಉಳಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Bitcoin scam: ನಲಪಾಡ್ ಹೆಸರು ಪ್ರಸ್ತಾಪಿಸಿ 'ಕಾಂಗ್ರೆಸ್ ಫೇಕ್ ನ್ಯೂಸ್ ಫ್ಯಾಕ್ಟರಿ' ಎಂದ ಬಿಜೆಪಿ..!
[[{"fid":"222295","view_mode":"default","fields":{"format":"default","field_file_image_alt_text[und][0][value]":"Chamund-Hills.jpg","field_file_image_title_text[und][0][value]":"Chamund-Hills.jpg"},"type":"media","field_deltas":{"1":{"format":"default","field_file_image_alt_text[und][0][value]":"Chamund-Hills.jpg","field_file_image_title_text[und][0][value]":"Chamund-Hills.jpg"}},"link_text":false,"attributes":{"alt":"Chamund-Hills.jpg","title":"Chamund-Hills.jpg","class":"media-element file-default","data-delta":"1"}}]]
‘ಮೈಸೂರಿನ ಮುಕುಟಪ್ರಾಯದಂತಿರುವ ಚಾಮುಂಡಿ ಬೆಟ್ಟ(Chamundi Hills)ವನ್ನು ಭವಿಷ್ಯದ ಮೈಸೂರಿನ ಸುರಕ್ಷತೆಗಾಗಿಯಾದರೂ ಉಳಿಸಬೇಕು ಎನ್ನುವ ಪ್ರಯತ್ನ ಹಲವು ರೂಪದಲ್ಲಿ ನಡೆದಿದೆ. ಮಿತಿ ಮೀರಿರುವ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿ ಪರಿಸರ ಸಮತೋಲನವನ್ನು ಬೆಟ್ಟದಲ್ಲಿ ಕಾಪಾಡಿಕೊಳ್ಳಬೇಕು ಎನ್ನುವುದು ಕಳಕಳಿ. ಈ ನಿಟ್ಟಿನಲ್ಲಿ ಮೈಸೂರಿನ ಹಲವು ಸಂಘಟನೆಗಳು, ಮೈಸೂರು ಗ್ರಾಹಕರ ಪರಿಷತ್ ಸೇರಿದಂತೆ ಹಲವರು ಇದಕ್ಕೆ ಬಲ ನೀಡಿದ್ದು, ಸಂವಾದ, ಅಭಿಯಾನದ ಮೂಲಕ ಜನರನ್ನು ಜಾಗೃತಗೊಳಿಸಿ ಆಡಳಿತವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಈ ಸಹಿ ‘ಆಂದೋಲನ’ಕ್ಕೆ ನಾನು ಕೈಜೋಡಿಸಿದ್ದೇನೆ; ನೀವೂ ಕೈಜೋಡಿಸಿ ಬೆಟ್ಟ ಉಳಿಸಿ’ ಎಂದು ಯದುವೀರ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣ(Social Media))ದಲ್ಲಿ ‘ಸೇವ್ ಚಾಮುಂಡಿ ಮೂಮೆಂಟ್’ ಎಂಬ ಹೆಸರಿನಲ್ಲಿ ಚಾಮುಂಡಿ ಬೆಟ್ಟ ಉಳಿಸಿ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಬೆಂಬಲ ಸೂಚಿಸಿದ್ದಾರೆ. https://chng.it/5BGqCk7r ಲಿಂಕ್ ಹಂಚಿಕೊಂಡಿರುವ ಅವರು, ಈ ಸಹಿ ‘ಆಂದೋಲನ’ಕ್ಕೆ ಕೈಜೋಡಿಸಿ ಬೆಟ್ಟ ಉಳಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಹಾಡಹಗಲೇ ಬೈಕ್ ಗೆ ಅಡ್ಡಬಂದ ಚಿರತೆ, ಆಮೇಲೇನಾಯ್ತು ನೋಡಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.