ಆಯುಧಪೂಜೆ ದಿನ ಪುಟ್ಟ ರಾಜನ ಆಗಮನ...! ಎರಡನೇ ಮಗುವಿನ ತಂದೆಯಾದ ಯದುವೀರ್ ಒಡೆಯರ್
Yaduveer Wadiyar son : ನಾಡಹಬ್ಬ ದಸರಾ ನಿಮಿತ್ತ ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ. ಇನ್ನು ಇದೇ ವೇಳೆ ಮೈಸೂರು ಸಂಸಾಸ್ಥನಕ್ಕೆ ಪುಟ್ಟ ರಾಜಕುಮಾರನ ಆಗಮನವಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಎರಡನೇ ಮಗುವಿಗೆ ತಂದೆಯಾಗಿದ್ದಾರೆ..
Yaduveer Wadiyar Trishika Kumari Devi : ದಸರಾದ ಸಂಭ್ರಮದ ನಡುವೆಯೇ ಮೈಸೂರು ರಾಜವಂಶದಲ್ಲಿ ಮತ್ತೊಂದು ಸಡಗರ ಆರಂಭವಾಗಿದೆ. ಆಯುಧ ಪೂಜೆ ದಿನದಂದೇ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ದಂಪತಿ ಎರಡನೇ ಪುತ್ರನನ್ನು ಸ್ವಾಗತಿಸಿದ್ದಾರೆ.
ಹೌದು.. ದಸರಾ ಹಬ್ಬದ ಸಂಭ್ರಮದಲ್ಲಿರುವ ಮೈಸೂರು ಯದುವೀರ್ ರಾಜಮನೆತನಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಣಿ ತ್ರಿಷಿಕಾ ಕುಮಾರಿ ಅವರು ಆಯುಧ ಪೂಜೆ ದಿನವಾದ ಇಂದು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.. ರಾಣಿ ತ್ರಿಷಿಕಾ ಕುಮಾರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ:ಚೆಂದುಳ್ಳ ಚೆಲುವಿ ನಿನ್ನ ಅಂದ ಅಳದ ಮ್ಯಾಗಿನ ಬ್ರಹ್ಮ ಕಳಿಸ್ಯಾನ ಸುರದ..! ಫೊಟೋಸ್ ನೋಡಿ..
ಒಂದೆಡೆ ಅರಮನೆಯಲ್ಲಿ ಸಂಭ್ರಮದ ವಾತಾವರಣ ಇದೆ. ಮತ್ತೊಂದೆಡೆ ಸೂತಕದ ಹಿನ್ನಲೆ ಪೂಜಾ ಕೈಂಕರ್ಯಗಳಿಗೆ ಅಡ್ಡಿಯಾಗಲಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಏಕೆಂದರೆ, ಅರಮನೆಯಲ್ಲಿ ಆಯುಧ ಪೂಜೆ ಮತ್ತು ದಸರಾ ಆಚರಣೆಯ ಭಾಗವಾಗಿ ಈಗಾಗಲೇ ಯದುವೀರ್ ರವರು ಕಂಕಣ ತೊಟ್ಟಿದ್ದಾರೆ.
ಇನ್ನು ಮಗು ಹುಟ್ಟಿದಾಗ ಸಂಪ್ರದಾಯವಾಗಿ ಸೂತಕ ಆಚರಿಸುವ ವಾಡಿಕೆ ಇದೆ. ಇದರ ನಡುವೆ ಅರಮನೆಯಲ್ಲಿ ಹೇಗೆ ಪೂಜಾ ಕೈಂಕರ್ಯಗಳು ನಡೆಯುತ್ತದೆ ಎಂಬ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅರಮನೆ ಪುರೋಹಿತರು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ರಾಜಮನೆತನದ ಮೂಲಗಳು ತಿಳಿಸಿವೆ..
ಇದನ್ನೂ ಓದಿ:ಪತ್ನಿ ಜೊತೆ NTR ಜಗಳ..! ಆ ವಿಚಾರದಲ್ಲಿ ಹೆಂಡತಿ ಜೊತೆ ನೋ ಕಾಂಪ್ರಮೈಸ್ ಎಂದ ಯಂಗ್ ಟೈಗರ್
ರಾಜಮಾತೆ ಪ್ರಮೋದಾದೇವಿ ಅವರು 2015ರಲ್ಲಿ ಯದುವೀರ್ ಅವರನ್ನು ದತ್ತು ಸ್ವೀಕರಿಸುವ ಮೂಲಕ ಮೈಸೂರು ಒಡೆಯರ್ ಸಂಸ್ಥಾನದ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದರು. 2016ರ ಜೂನ್ 27ರಂದು ರಾಜಸ್ಥಾನ ರಾಜಮನೆತನದ ತ್ರಿಷಿಕಾ ಕುಮಾರಿ ಅವರನ್ನು ಯದುವೀರ್ ವಿವಾಹವಾಗಿದ್ದರು. 2017ರ ಡಿ 6ರಂದು ಈ ದಂಪತಿಗೆ ಮೊದಲ ಮಗು ಜನಿಸಿತ್ತು. ಏಳು ವರ್ಷಗಳ ಬಳಿಕ ಈ ದಂಪತಿ ಎರಡನೇ ಪುತ್ರನನ್ನು ಸ್ವಾಗತಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.