ಯಡಿಯೂರಪ್ಪನವರು ನೈತಿಕ ಹೊಣೆ ಹೊತ್ತು ರಾಜಕೀಯಯಿಂದ ನಿವೃತ್ತಿ ಪಡೆಯಬೇಕು: ಶಾಸಕ ಜೆಟಿ ಪಾಟೀಲ ಒತ್ತಾಯ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಕಾರ್ಯಕರ್ತರು ಉಸ್ತುಕರಾಗಿ ಕೆಲಸ ಮಾಡಿದರಿಂದ ಮೂರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವುವಾಗಿದೆ. ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯ ನೇತೃತ್ವವನ್ನು ವಹಿಸಿದ ಸತೀಶ್ ಜಾರಕಿಹೊಳಿ ಅವರಿಗೂ ಈ ಗೆಲುವಿನ ಶ್ರೇಯಸ್ಸು ತಟ್ಟುತ್ತದೆ ಎಂದರು.
ಬಾಗಲಕೋಟೆ: ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ ಟಿ ಪಾಟೀಲ ಹೇಳಿದರು.
ಇದನ್ನೂ ಓದಿ: ಮೋಕ್ಷಿತಾ ಡ್ರೆಸ್ಸಿಂಗ್ ರೂಮ್ ನಲ್ಲಿ ರೆಡಿಯಾಗುತ್ತಿರುವ ಫೋಟೋಸ್ ಲೀಕ್.. ಗಂಡಹೈಕ್ಳ ಎದೆ ಬಡಿತ ಹೆಚ್ಚಿಸುವ ಸೌಂದರ್ಯದ ಚಿಲುಮೆ!
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರು ಹಾಗೂ ಶಾಸಕರು ಕಾರ್ಯಕರ್ತರು ಉಸ್ತುಕರಾಗಿ ಕೆಲಸ ಮಾಡಿದರಿಂದ ಮೂರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಿಗೆ ಅಭೂತಪೂರ್ವ ಗೆಲುವುವಾಗಿದೆ. ಅತ್ಯಂತ ಶಿಸ್ತುಬದ್ಧವಾಗಿ ಚುನಾವಣೆಯ ನೇತೃತ್ವವನ್ನು ವಹಿಸಿದ ಸತೀಶ್ ಜಾರಕಿಹೊಳಿ ಅವರಿಗೂ ಈ ಗೆಲುವಿನ ಶ್ರೇಯಸ್ಸು ತಟ್ಟುತ್ತದೆ ಎಂದರು.
ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ, ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಯಡಿಯೂರಪ್ಪನವರು ಚಾಲೆಂಜ್ ಹಾಕಿದ್ದರು. ಇವತ್ತು ಯಡಿಯೂರಪ್ಪನವರೇ ನೀವು ನೈತಿಕ ಹೊಣೆ ಹೊತ್ತು ರಾಜಕೀಯಯಿಂದ ನಿವೃತ್ತಿಯಾಗಿ ಎಂದು ನಾನು ಒತ್ತಾಯ ಮಾಡುತ್ತೇನೆ ಎಂದರು.
ಸುಳ್ಳು ಹೇಳುವುದು, ಅಪಪ್ರಚಾರ ಮಾಡುವುದು, ಬಿಜೆಪಿಯವರ ಮನೆದೇವರು. ಇದನ್ನು ಬಿಟ್ಟು ಅವರಿಗೆ ಏನು ಬಂಡವಾಳ ಇಲ್ಲ. ಇವರದೆ ಹಗರಣಗಳ ಸರಮಾಲೆ ಇದೆ. ದುರುದ್ದೇಶದಿಂದ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಪ್ರಯತ್ನದಲ್ಲಿದ್ದಾರೆ. ಆರ್ ಅಶೋಕ್ ಅವರು ಸಹ ಮುಡಾ ಸೈಟ್ ಪಡೆದಿದ್ದಾರೆ. ಸಿದ್ದರಾಮಯ್ಯನವರನ್ನ ಯಾವುದೇ ಕಾರಣಕ್ಕೂ ಟಚ್ ಮಾಡಲು ಸಾಧ್ಯವಿಲ್ಲ. ಅಲ್ಪಸಂಖ್ಯಾತರನ್ನ ಗುರಿಯಾಗಿಟ್ಟುಕೊಂಡು ರಾಜ್ಯಾದ್ಯಂತ ವಕ್ಫ್ ಬಗ್ಗೆ ಇರಲಾರದ ವಿಷಯವನ್ನು ಉದ್ಭವ ಮಾಡಿಕೊಂಡು ತಾವು ಮಾಡಿದ ತಪ್ಪನ್ನ ಮುಚ್ಚಿಕೊಂಡು ಮತ್ತೊಬ್ಬರ ಮೇಲೆ ಆರೋಪ ಮಾಡುವುದು ಇವರ ಜನ್ಮಸಿದ್ಧ ಹಕ್ಕು. ಹೆಚ್ಚಿನ ನೋಟಿಸ್‌ಗಳು ಬಿಜೆಪಿ ಅವಧಿಯಲ್ಲಿ ಬಂದಿವೆ ಎಂದರು.
ಕುಮಾರ ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ2900 ಎಕರೆ ನೋಟಿಸ್ ಅವಧಿಯಲ್ಲಿ ಬಂದಿವೆ. ಕಾಂಗ್ರೆಸ್ ನೇತೃತ್ವದ ಅವಧಿಯಲ್ಲಿ 300 ಎಕರೆಗೆ ನೋಟಿಸ್ ಬಂದಿದೆ. ಸುಳ್ಳನ್ನು ನೂರು ಬಾರಿ ಹೇಳಿ ಸತ್ಯವನ್ನ ಮಾಡುವ ಮೂಲಭೂತ ತತ್ವವನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಮೋದಿಯವರು ಎಲ್ಲರನ್ನು ಒಗ್ಗೂಡಿಸಬೇಕು ಅಂತ ಒಂದು ಕಡೆ ಹೇಳಿದರೆ, ಇನ್ನೊಂದು ಕಡೆಗೆ ಅವರದೆ ಪಕ್ಷದವರು ಹಿಂದೂ ಮುಸ್ಲಿಂ ಎಂದು ಒಡಕನ್ನು ಹುಟ್ಟಿಸಿ ದೇಶವನ್ನು ಆಡಳಿತ ಮಾಡಲು ಮುಂದಾಗಿರುವುದನ್ನ ಖಂಡಿಸುತ್ತೇನೆ ಎಂದರು.
ಇದನ್ನೂ ಓದಿ: ಆ ಖ್ಯಾತ ನಿರ್ದೇಶಕ ಸ್ಟುಡಿಯೋ ಒಳಗೆ ಬಂದು.. ನನ್ನ ಆ ತರ ಕರೆದ..! ನೋವು ತೋಡಿಕೊಂಡ ಸ್ಟಾರ್ ಗಾಯಕಿ
ಶೀಘ್ರದಲ್ಲಿ ಸಭೆ ಕರೆದು ಇನ್ನೂ ಯಾರಿಗೆ ಮಾಶಾಸನ ಸಿಕ್ಕಿಲ್ಲ ಎಲ್ಲವನ್ನ ಕೂಡಿಸಿ ಕರೆಸಿಕೊಂಡು, ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಕಾರ್ಯಕರ್ತರಿಗೆ ಸೂಚಿಸಲಾಗುತ್ತದೆ. ಅನವಾಲ ಮತ್ತು ಕಾಡರಕೊಪ್ಪ ಏತ ನೀರಾವರಿಗೆ ಅಪ್ರೂವಲ್ ಇಲ್ಲದೆ ನಿರಾಣಿಯವರು ಪೂಜೆ ಮಾಡಿದ್ದರು. ಈಗ ನಾನು ಕಾಡರಕೊಪ್ಪ ಏತ ನೀರಾವರಿಗೆ ಅಪ್ರೂವಲ್ ಕೊಡಿಸಿದ್ದೇನೆ. ಅನವಾಲ 1ನೇ ಹಂತ ಟೆಂಡರ್ ಆಗಿದೆ. 2ನೇ ಹಂತ 270 ಕೋಟಿ ಟೆಂಡರ್ ಆಗಿದೆ, 5 ವರ್ಷದ ಅವಧಿಯಲ್ಲಿ ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಮಾಡುವುದರ ಕುರಿತು ಈ ಬಾರಿ ಬಜೆಟ್ ನಲ್ಲಿ ಸೇರಿಸುವುದಕ್ಕೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ