ರೈತರನ್ನು ನಾವು ದೇಶದ ಬೆನ್ನಲು ಎನ್ನುತ್ತೇವೆ. ಆದರೆ ಅಂತಾ ಬೇನ್ನಲುಬು ಎನ್ನುವ ಅನ್ನದಾತರಿಗೆ ಈಗ ಮದುವೆಯಾಗಲು ಹೆಣ್ಣು ಮಕ್ಕಳು ಮುಂದೆ ಬರುತಿಲ್ಲ. ಹೆಣ್ಣು ಮಕ್ಕಳ ತಂದೆ-ತಾಯಂದಿರು ಸಹ ತಮ್ಮ ಹೆಣ್ಣು ಮಕ್ಕಳನ್ನ ಕೃಷಿಕರಿಗೆ ಕೊಟ್ಟು ಮದುವೆ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ರೈತರು ಈಗ ಆತಂಕದಲ್ಲಿ ಇದ್ದು  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಯಂತಹ ಕಾರ್ಯಕ್ರಮಗಳ ಮೊರೆ ಹೋಗಿದ್ದಾರೆ. 


COMMERCIAL BREAK
SCROLL TO CONTINUE READING

ಧಾರವಾಡ ಜಿಲ್ಲೆಯಲ್ಲಿ ಯುವ ರೈತರನ್ನು ಮದುವೆಯಾಗಲು ಹೆಣ್ಣು ಮಕ್ಕಳೇ ಸಿಗುತ್ತಿಲ್ಲವಂತೆ. ಈ ವಿಷಯ ಈಗ ಕೃಷಿಕರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಯುವ ರೈತರನ್ನು ಕೈ ಹಿಡಿಯಲು ಕನ್ಯಾಮಣಿಯರು ಸಿಗದೇ ಯುವಕರ ಮದುವೆಯ ವಯಸ್ಸು ಮೀರುತ್ತಿದೆ ಎಂದು ಪರಿತಪಿಸುತ್ತಿದ್ದಾರೆ. ಕೃಷಿಕರಾಗಿರುವ ಕಾರಣ ನಮಗೆ ಹೆಣ್ಣು ಕೊಡ್ತಿಲ್ಲ ಎಂಬ ಆತಂಕ ಒಂದು ಕಡೆ ಇದ್ದರೆ ಇನ್ನೊಂದು ಕಡೆ ಪೇಟೆ ಜೀವನ ಬಯಸುವ ಹೆಣ್ಣು ಮಕ್ಕಳೇ ಇಂದು ಹೆಚ್ಚಾಗಿದ್ದಾರೆ ಎಂದು ಹಲವರು ದೂರುತ್ತಾರೆ. 


ಇದನ್ನೂ ಓದಿ- ಐಸಿಸ್ ಟ್ರೈನಿಂಗ್ ಪಡೆದಿದ್ದ ಮಂಗಳೂರು ಸ್ಫೋಟದ ಆರೋಪಿಯಿಂದ 40 ಮಂದಿಗೆ ತರಬೇತಿ: ಶೋಭಾ ಕರಂದ್ಲಾಜೆ


ಗ್ರಾಮೀಣ ಭಾಗದಲ್ಲಿ ಚಿಕ್ಕ ಮತ್ತು ಮಧ್ಯಮ ವರ್ಗದ  ಹಿಡುವಳಿದಾರರಿಗೆ ಮದುವೆ ಭಾಗ್ಯವೇ ಇಲ್ಲದಂತಾಗಿದೆ. ಒಂದು ಸರ್ಕಾರಿ ಚಿಕ್ಕ ಕೆಲಸ ಇರಲಿ ಹೋಗಲಿ ಯಾವುದಾದರೂ ಗಾರ್ಮೆಂಟ್ಸ್​​​ಗಳಲ್ಲಿ  ಅಥವಾ ಮುನಿಸಿ ಪಾಲಿಟಿಯಲ್ಲಿ ಕಸ ಹೊಡೆಯುವ ಉದ್ಯೋಗ ಇದ್ದರೆ ಸಾಕು ಯುವಕರಿಗೆ ಹೆಣ್ಣು ಕೊಡಲು ನಾ ಮುಂದು ತಾ ಮುಂದು ಅಂತಾ ಹೆಣ್ಣೆತ್ತವರು ಮುಂದು ಬರ್ತಾರೆ. ಆದರೆ, ಕೃಷಿ ಕಾಯಕದಲ್ಲಿ ತೊಡಗಿರುವ ಯುವ ರೈತರಿಗೆ ಮದುವೆಯಾಗಲು ಹೆಣ್ಣೇ ಸಿಗುತ್ತಿಲ್ಲ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಹೆಣ್ಣು ಕೊಡಲು ಯಾರೂ ಮುಂದಾಗುತ್ತಿಲ್ಲ. ಹೆಣ್ಣು ಸಿಗದೇ ಪರದಾಡುತ್ತಿರುವ ಜಿಲ್ಲೆಯ ಕುಂದಗೋಳ  ತಾಲೂಕಿನ ಗುಡೇನಕಟ್ಟಿ, ಹೊಸಳ್ಳಿ ಹಾಗೂ ಮುಂತಾದ ಗ್ರಾಮಗಳ ಯುವಕರು ಈಗ ಸರ್ಕಾರದ ಯೋಜನೆಯಲ್ಲಿ ಹೆಣ್ಣು ಮಕ್ಕಳ ಮದುವೆಗೆ ಅವಕಾಶ ಮಾಡಿಕೊಡಲು ಇದನ್ನ ಒಂದು ಯಾವುದಾದರೂ ಭಾಗ್ಯದಲ್ಲಿ ತರಬೇಕು ಅಂತಾ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಯಂತಹ ಕಾರ್ಯಕ್ರಮಗಳಲ್ಲಿ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಈಗ ವಧು ಸಿಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಬೇಕಿದ್ದು ಅಂತಹವರಿಗೆ ಆರ್ಥಿಕ ಸಹಾಯ ಮಾಡಬೇಕಿದೆ ಎಂದು ಹಲವರು ಆಗ್ರಹಿಸಿದ್ದಾರೆ. ಎಷ್ಟು ಯುವಕರು ಇಂದು ಮದುವೆ ಇಲ್ಲದೇ ಮದ್ಯವ್ಯಸನಿ, ಖಿನ್ನತೆ ಹಾಗೂ ದುಶ್ಚಟಗಳಿಗೆ ದಾಸರಾಗುತಿದ್ದಾರೆ. ಇಡೀ ನಾಡಿಗೆ ಅನ್ನ ಹಾಕುವ ರೈತರು. ಅಂತಹ ರೈತರ ಮಕ್ಕಳು, ಯುವ ರೈತರಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗದೇ ಚಿಂತೆಯಲ್ಲಿದ್ದಾರೆ.‌ ರೈತರನ್ನ ಹೊಗಳಿ ಅಟ್ಟಕ್ಕೆ ಏರಿಸುತ್ತಾರೆ ವಿನಃ ಅವರ ಕಷ್ಟಕ್ಕೆ ಯಾರು ಸ್ಪಂದನೆ ಆಗುತಿಲ್ಲ ಎನ್ನುತ್ತಾರೆ ರೈತ ಮುಖಂಡ ಬಸವರಾಜ.


ಇದನ್ನೂ ಓದಿ- ಕಣ್ಣುತೆರೆದ ಶಿವಲಿಂಗ : ಶಿವನ ಪವಾಡ ನೋಡಲು ಹರಿದು ಬಂತು ಭಕ್ತ ಸಾಗರ..!


ಯುವ ರೈತರಿಗೆ ಮದುವೆಗಾಗಿ ವಧು ಸಿಗದಿರುವ ಬಗ್ಗೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿರುವ ರೈತ ಮುಖಂಡ ಬಸವರಾಜ, ಮೊದಲೇ ಕೃಷಿ ಕ್ಷೇತ್ರ ಸಾಕಷ್ಟು ಅವಸಾನದತ್ತ ಸಾಗುತಿದೆ. ಯುವಕರು ಕೃಷಿಯಿಂದ ವಿಮುಖರಾಗುತಿದ್ದು ಇಂತಹದರಲ್ಲಿ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತಿಲ್ಲ ಎಂಬ ಕೊರಗು ಸಹ ದೊಡ್ಡ  ಸಮಸ್ಯೆಯೇ ಸರಿ.‌ 
ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬಡತನ ಮತ್ತು ಅನಕ್ಷರತೆ ಹೆಚ್ಚು. ಆದ್ದರಿಂದ ಈ ಭಾಗದಲ್ಲಿನ ಹೆಣ್ಣು ಮಕ್ಕಳನ್ನ ದೂರದ ಗುಜರಾತ್, ರಾಜಾಸ್ಥಾನ, ‌ಮಧ್ಯಪ್ರದೇಶ, ಛತ್ತೀಸ್ ಗಢ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿನ ಶ್ರೀಮಂತರು,‌ ಉದ್ಯಮಿಗಳು, ಸರ್ಕಾರಿ ನೌಕರರು ಮದುವೆಯಾಗುತ್ತಿದ್ದಾರೆ. ಇನ್ನು ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಇದನ್ನೇ ಬಂಡವಾಳವಾಗಿಸಿಕೊಂಡು ಹೆಣ್ಣು ಮಕ್ಕಳನ್ನ ಮಾರಾಟ ಮಾಡುವ ದಂಧೆಗೆ ಇಳಿದು ಬಿಟ್ಟಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಹೆಣ್ಣು ಮಕ್ಕಳು ಐಷಾರಾಮಿ ಬದುಕಿಗೆ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು  ಕೆಲ ಯುವತಿಯರು ಮತಾಂತರ, ಹಣದ ಆಮಿಷೆ ಹಾಗೂ ಒತ್ತಡಕ್ಕೆ ಮಣಿದು ಅನ್ಯ ಕೋಮಿನ, ಅನ್ಯ ರಾಜ್ಯದವರನ್ನ ವರಿಸಲು ಮುಂದಾಗಿದ್ದಾರೆ.‌ ಇದರಿಂದಾಗಿ ಈಗ ಕೃಷಿಕ ಯುವಕರು ವಧುಗಳಿಗಾಗಿ ಪರದಾಡುವ ಸ್ಥಿತಿ ಬಂದೊಂದಿಗಿದೆ. ಆದ್ದರಿಂದ ಈ ಕುರಿತು  ಸರ್ಕಾರ  ಈಗಲೇ ಗಂಭೀರ ಚಿಂತನೆ ಮಾಡದ ಹೋದರೆ ಮುಂದೆ ಒಂದು ದಿನ ಕೃಷಿ ಅವಸಾನದ ಅಂಚಿಗೆ ಹೋಗಿ ಕೃಷಿ ಹೇಳ ಹೆಸರು ಇಲ್ಲದಂತಾಗಿ ದೊಡ್ಡ ಬೆಲೆ ತೆತ್ತಬೇಕಾಗುತ್ತದೆ ಎಂದಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.