ರೈತರಿಗೆ `ಕನ್ಯಾಭಾಗ್ಯ` ನೀಡುವಂತೆ ಸಿಎಂಗೆ ಪತ್ರ...!
Kanya Bhagya: ದೇಶದ ಬೆನ್ನೆಲುಬು ಅನ್ನೋ ರೈತರಿಗೆ ವರುಣ ದೇವ ಸರಿಯಾದ ಸಮಯಕ್ಕೆ ಮಳೆ ನೀಡ್ದೆ, ರೈತರ ಬಾಳಿನಲ್ಲಿ ಆಟವಾಡಿದ್ರೆ. ಇತ್ತ ಗಟ್ಟಿಮುಟ್ಟಾಗಿದ್ದು ಪ್ರತಿದಿನ ಭೂ ತಾಯಿ ಮಡಲಲ್ಲಿ ದುಡಿಯುವ, ಸದೃಢ ದೇಹದ ಯುವ ರೈತರಿಗೆ ಜನರಿಗೆ ಮದುವೆಯಾಗಲು ಕನ್ಯೆ ನೀಡ್ತಿಲ್ಲ ಎಂಬುದು ಬಹುದೊಡ್ಡ ದುರಂತ.
Kanya Bhagya: ದೇಶದ ಬೆನ್ನೆಲುಬು ಅಂತಾ ಕರೆಯೋ ಅನ್ನದಾತರಿಗೆ ಮುಂಬಾರು ಮಳೆ ಕೈಕೊಟ್ಟಿತ್ತು. ಇದರಿಂದ ಕಂಗೆಟ್ಟ ರೈತರು ಆತಂಕದಲ್ಲಿ ಕಣ್ಣಿರು ಹಾಕ್ತಿದ್ದರು. ಈ ಬೆನ್ನಲ್ಲೇ ದೈವಾನುಗ್ರಹದಿಂದ ಮಳೆಗೆ ಕೊಂಚ ತಡವಾಗಿ ಬಂತು. ಇದರಿಂದ ಸಂತೋಷದಲ್ಲಿ ತೆಲುತ್ತಿದ್ದ ಅನ್ನದಾತರಿಗೆ ಈಗ ಮತ್ತೊಂದು ಮಹಾಸಂಕಷ್ಟ ಎದುರಾಗಿದೆ. ಅದ್ಹೇನ ಅಂತೀರಾ ಈ ಸ್ಟೋರಿ ಓದಿ...
ಹೀಗೆ ಲೇಟರ್ ಪ್ಯಾಡ್ ಹಿಡಿದು ನಿಂತಿರೋ ಯುವ ಅನ್ನದಾತರು. ಮತ್ತೊಂದೆಡೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ವಿಳಾಸಕ್ಕೆ ಪತ್ರ ಬರೆದಿದ್ದಾರೆ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ.
ಇದನ್ನೂ ಓದಿ- Stone pelting on Basava Express: ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ!
ಹಾವೇರಿ ಜಿಲ್ಲೆಯ ಬ್ಯಾಡಗಿಯ ಯುವ ರೈತರು ಸಿಎಂಗೆ ಪತ್ರ ಬರೆಯುವ ವೇಳೆ ಕಂಡು ಬಂದಿದೆ. ಹೌದು, ತಿಂಗಳಿಡೀ ಸಾಲ ಸೋಲ ಮಾಡಿ ಮಣ್ಣಿನ ಮಗನಾಗಿ ಮುಡಿಯುವ ರೈತರಿಗೆ ನೆಮ್ಮದಿ ಜೀವನ ಇಲ್ಲದಂತಾಗಿದೆ. ದೇಶದ ಬೆನ್ನೆಲುಬು ಅನ್ನೋ ರೈತರಿಗೆ ವರುಣ ದೇವ ಸರಿಯಾದ ಸಮಯಕ್ಕೆ ಮಳೆ ನೀಡ್ದೆ, ರೈತರ ಬಾಳಿನಲ್ಲಿ ಆಟವಾಡಿದ್ರೆ. ಇತ್ತ ಗಟ್ಟಿಮುಟ್ಟಾಗಿದ್ದು ಪ್ರತಿದಿನ ಭೂ ತಾಯಿ ಮಡಲಲ್ಲಿ ದುಡಿಯುವ, ಸದೃಢ ದೇಹದ ಯುವ ರೈತರಿಗೆ ಜನರಿಗೆ ಮದುವೆಯಾಗಲು ಕನ್ಯೆ ನೀಡ್ತಿಲ್ಲ ಎಂಬುದು ಬಹುದೊಡ್ಡ ದುರಂತ.
ಹೌದು, ಈ ಕಾಲದಲ್ಲಿ ಅತೀ ಹೆಚ್ಚು ಸ್ತ್ರೀಯರು ಜಾಬ್ ಇರೋ ಗಂಡಾ ನೇ ಬೇಕು ಅಂತಾ ಬಯಸುತ್ತಿದ್ದಾರೆ. ಇನ್ನು ಹೊಲದಲ್ಲಿ ದುಡಿಯೋ ರೈತರಿಗೆ ಮದುವೆಯಾದ್ರೆ ತಮ್ಮ ಮಗಳ ಮುಂದಿನ ಭವಿಷ್ಯ ಏನು ಅನ್ನೋ ಪ್ರಶ್ನೆ ಹೆಣ್ಣೆತ್ತವರನ್ನು ಕಾಡುತ್ತಿದ್ದು ಪಾಲಕರು ತಮ್ಮ ಮಕ್ಕಳ್ಳನ್ನ ರೈತರ ಮನೆಗೆ ನೀಡಲು ಹಿಂದೇಟು ಹಾಕ್ತಿದ್ದಾರಂತೆ. ಈ ಹಿನ್ನಲೆ ಕಂಗೆಟ್ಟ ಯುವ ಅನ್ನದಾತರು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತಮ್ಮ ನೋವನ್ನ ತೊಡಿಕೊಂಡಿದ್ದಾರೆ.
ಇದನ್ನೂ ಓದಿ- ದಲಿತ ಪ್ರೇಮ ಇದ್ದರೆ ದಲಿತರನ್ನೇ ಸಿಎಂ ಮಾಡಲಿ: ಕಾಂಗ್ರೆಸ್‍ಗೆ ಎಚ್.ಡಿ.ಕುಮಾರಸ್ವಾಮಿ ಸವಾಲು
ರೈತರು ಅಂದ್ರೆ ಜನರು ಲಾಭ ಇಲ್ಲದ ಕೃಷಿ ಅಂತಾ ಮಾತಾಡುತ್ತಿದ್ದಾರೆ. ಆದ್ರೆ, ಅವರು ಪ್ರತಿ ತಿಂಗಳು 50 ರಿಂದ 1 ಲಕ್ಷದ ವೆರೆಗೂ ಆದಾಯ ತೆಗೆಯುವ ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುತ್ತಾರೆ ಎಂಬುದು ಜನರಿಗೆ ಗೊತ್ತಿಲ್ಲ. ಜನರು ತಮ್ಮ ಹೆಣ್ಣು ಮಕ್ಕಳಿಗೆ ರೈತರಿಗೆ ನೀಡ್ದೆ ದೂರದ ಊರಿನಲ್ಲಿ 15 ಸಾವಿರ, 20 ಸಾವಿರ ದುಡಿದು ಟಿಪ್ ಟಾಪ್ ಆಗಿರೋ ಹುಡಗರಿಗೆ ನೀಡ್ತಾರೆ. ಇನ್ನೊಂದೆಡೆ ಮದುವೆ ಮಾಡಿಕೊಳ್ಳುವ ಹೆಣ್ಣು ಮಗಳು ಮತ್ತು ಪಾಲಕರು ತಮ್ಮ ಭವಿಷ್ಯದ ಯೋಚನೆ ಮಾಡಿ ರೈತರಿಗೆ ಕನ್ಯೆ ನೀಡುತ್ತಿಲ್ಲ ಎಂದು ರೈತ ಸಮೂಹ ಬೇಸರ ವ್ಯಕ್ತಪಡಿಸಿದೆ.
ಈ ಹಿನ್ನಲೆಯಲ್ಲಿ ಭಾಗ್ಯರಾಮಯ್ಯ ಎಂದೇ ಖ್ಯಾತಿ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹಾವೇರಿಯ ಯುವ ರೈತರು, ತಮಗೆ 'ಕನ್ಯಾಭಾಗ್ಯ' ನೀಡುವಂತೆ ಮನವಿ ಮಾಡಿದ್ದಾರೆ. ಹೌದು, ಕೃಷಿಕರಿಗೆ ಕನ್ಯೆ ನೀಡಿದರೆ ಸಹಾಯ ಧನವಾಗಿ 2 ಲಕ್ಷದ ವರೆಗೂ ಹಣ ನೀಡಬೇಕು. ರೈತರಿಗೆ ಮದುವೆಯಾದ ಯುವತಿಗೆ ಸರ್ಕಾರಿ ಕೆಲಸದಲ್ಲಿ ಇಂತಿಷ್ಟು ಅಂತಾ ಪ್ರಾಶಸ್ತ್ಯ ನೀಡಬೇಕು. ಇನ್ನು ಪ್ರತಿ ತಿಂಗಳು ರೈತರಿಗೆ ವಿವಾಹವಾದ ಯುವತಿಗೆ ಮಾಸಿಕ ಸಹಾಯಧನ ನೀಡಬೇಕೇಂದು ಯುವ ರೈತರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.