ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ಡ್ರಗ್ಸ್ ಮಾಫಿಯಾದಲ್ಲಿ (Drug Mafia) ಪ್ರಚಾರ ಪಡೆಯಲು ಬಾಯಿಗೆ ಬಂದಂತೆ ಮಾತನಾಡುತ್ತಿದ್ದ, ತಾನು ಕೂಡ ಚಿತ್ರರಂಗಕ್ಕೆ ಸಂಬಂಧಿಸಿದವನು ಎಂದು ಸುಳ್ಳು ಹೇಳುತ್ತಿದ್ದ ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಡ್ರಗ್ಸ್ ಧಂಧೆಯಲ್ಲಿ ನಾನಿರುವುದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟುಬಿಡುತ್ತೇನೆ: ಜಮೀರ್ ಅಹಮದ್


COMMERCIAL BREAK
SCROLL TO CONTINUE READING

ಪ್ರಶಾಂತ್ ಸಂಬರಗಿ ದಿಢೀರನೆ ತಾನು ಚಿತ್ರರಂಗಕ್ಕೆ ಸಂಬಂಧಿಸಿದವನು ಎಂದು ಹೇಳಿಕೊಂಡು ನಟಿ ಸಂಜನಾ ಗುಲ್ರಾನಿ (Sanjana Gulrani) ಬಗ್ಗೆ ಮಾತನಾಡಿದ್ದರು. ಸಂಜನಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಂತೆ ತೆಪ್ಪಗಾಗಿದ್ದರು. ಇದಾದ ಬಳಿಕ ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ  ಜಮೀರ್ ಅಹಮದ್ (Zameer Ahamad) ಅವರ ಪಾತ್ರವೂ ಇದೆ ಎಂದು ಹೇಳಿದ್ದರು. ಇದೀಗ ಶಾಸಕ ಜಮೀರ್ ಅಹಮದ್, ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ‌ರಾಗಿಣಿ ಸಂಜನಾಗೆ ಹೇರ್ ಪಾಲಿಕಲ್ ಟೆಸ್ಟ್ ಮಾಡಿಸುವ ಸಾಧ್ಯತೆ


ಐಪಿಸಿ ಸೆಕ್ಷನ್ 120/B, 504, 463, 465, 506  ಅಡಿಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಾಸಕ ಜಮೀರ್ ಅಹಮದ್ ಅವರು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಮೀರ್ ಅಹಮದ್ ಡ್ರಗ್ಸ್ ಮಾಫಿಯಾದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡ್ತಿದ್ದಾರೆ ಎಂದೇ ದೂರು ದಾಖಲಿಸಿದ್ದಾರೆ. ಜೊತೆಗೆ ಒಳಸಂಚು ರೂಪಿಸಿ, ಮಾನಹಾನಿ ಮಾಡುತ್ತಾ ಇದ್ದಾರೆ ಎಂದು ಕೂಡ ದೂರು ನೀಡಿದ್ದಾರೆ.


ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ‌


ಜಮೀರ್ ಅಹಮದ್ ಅವರು ನೀಡಿದ ದೂರಿನ ಅನ್ವಯ ಎನ್ ಸಿ ಆರ್ ದಾಖಲು ಮಾಡಿಕೊಳ್ಳಲಾಗಿತ್ತು. ಬಳಿಕ ಎಫ್ ಐ ಆರ್ ದಾಖಲು ಮಾಡಿಕೊಳ್ಳಲು ನ್ಯಾಯಾಲಯದ ಅನುಮತಿ ಕೇಳಲಾಗಿತ್ತು. ನ್ಯಾಯಾಲಯದ ಅನುಮತಿ ಮೇರೆಗೆ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರಿಂದ ಬಿಟ್ಟಿ ಪ್ರಚಾರಕ್ಕಾಗಿ ಹಪಹಪಿಸುತ್ತಿದ್ದ ಪ್ರಶಾಂತ್ ಸಂಬರಗಿಗೆ ಸಂಕಷ್ಟ ಶುರುವಾದಂತಾಗಿದೆ.