ಡಾ.ರಾಜಾ ರಾಮಣ್ಣ ಪ್ರಶಸ್ತಿ ಸ್ಥಾಪನೆಗೆ ನಿರ್ಧರಿಸಿದ ಜೀ ಕನ್ನಡ ನ್ಯೂಸ್ ಅಂಕಣಕಾರ ಗಿರೀಶ್ ಲಿಂಗಣ್ಣ
ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.
ಬೆಂಗಳೂರು: ವಾರ್ತಾ ಇಲಾಖೆ ಕೊಡ ಮಾಡುವ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗೆ ಭಾಜನರಾಗಿರುವ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಪ್ರಶಸ್ತಿ ಮೊತ್ತ ಒಂದು ಲಕ್ಷ ರೂಗಳನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದ್ತತಿನಿಧಿ ಪ್ರಶಸ್ತಿಗೆ ನೀಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಸಂಘಕ್ಕೆ ಅಧಿಕೃತವಾಗಿ ಪತ್ರ ಬರೆದು ತಮ್ಮ ನಿರ್ಧಾರ ತಿಳಿಸಿರುವುದನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸ್ವಾಗತಿಸಿದ್ದಾರೆ.ಕರ್ನಾಟಕದಲ್ಲಿ ವಿಜ್ಞಾನ ಬರಹಗಾರರಿಗೆ, ವಿಜ್ಞಾನ ಸಂವಾಹಕರಿಗೆ ಹೆಚ್ಚಿನ ಉತ್ತೇಜನ, ಬೆಂಬಲ ನೀಡುವ ನಿಟ್ಟಿನಲ್ಲಿ, ನಾನು ಈ ಪ್ರಶಸ್ತಿಯೊಡನೆ ನೀಡಲಾಗುವ ಒಂದು ಲಕ್ಷ ರೂ ಮೊತ್ತವನ್ನು ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘಕ್ಕೆ (ಕೆಯುಡಬ್ಲ್ಯುಜೆ) ಹಸ್ತಾಂತರಿಸುತ್ತೇನೆ. ಈ ಮೊತ್ತದಿಂದ ನಮ್ಮ ರಾಜ್ಯದ ಪ್ರಸಿದ್ಧ ವಿಜ್ಞಾನಿ ಡಾ. ರಾಜಾ ರಾಮಣ್ಣನವರ ಹೆಸರಿನಲ್ಲಿ ದತ್ತಿ ನಿಧಿ ಪ್ರಶಸ್ತಿಯನ್ನು ಸ್ಥಾಪಿಸಬೇಕೆಂದು ಗಿರೀಶ್ ಲಿಂಗಣ್ಣ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರಾಜಾ ರಾಮಣ್ಣ: ಭಾರತದ ಅಣುಶಕ್ತಿ ಯುಗದ ನಿರ್ಮಾತೃವಿನ ಸ್ಮರಣೆ
ವಿಜ್ಞಾನ, ರಕ್ಷಣೆ, ಬಾಹ್ಯಾಕಾಶದಂತಹ ಸಂಕೀರ್ಣ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ (ಕನ್ನಡ ಅಥವಾ ಇಂಗ್ಲೀಷ್) ಪತ್ರಕರ್ತರು, ಅಂಕಣಕಾರರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಬೇಕು. ಹೆಚ್ಚು ಬರಹಗಾರರು ಇಂತಹ ಪ್ರಮುಖ ವಿಚಾರಗಳ ಕುರಿತು ಬರೆಯುವಂತೆ ಮಾಡುವುದು ಮತ್ತು ಯುವ ಮನಸ್ಸುಗಳನ್ನು ಆಸಕ್ತಿಕರ ವೈಜ್ಞಾನಿಕ ಬರಹಗಳಿಂದ ಸೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಡಾ.ರಾಜರಾಮಣ್ಣ ಪ್ರಶಸ್ತಿ
ಕೆಯುಡಬ್ಲೂಜೆ ಅಭಿನಂದನೆ:
ಅಂಕಣಕಾರ ಗಿರೀಶ್ ಲಿಂಗಣ್ಣ ಅವರ ಆಶಯದಂತೆಯೇ ಕೆಯುಡಬ್ಲೂಜೆ ಡಾ.ರಾಜರಾಮಣ್ಣ ಹೆಸರಿನಲ್ಲಿ ದತ್ತಿನಿಧಿಯನ್ನು ಸ್ಥಾಪಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.ಕರ್ನಾಟಕದ ಹೆಮ್ಮೆಯ ಪುತ್ರರಾದ ಡಾ. ರಾಜಾ ರಾಮಣ್ಣ ಜಗತ್ತು ಕಂಡ ಶ್ರೇಷ್ಠ ಪರಮಾಣು ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ವೈಜ್ಞಾನಿಕ ಪ್ರಗತಿಯ ಹಿಂದೆ ಡಾ. ರಾಜಾ ರಾಮಣ್ಣನವರ ಕೊಡುಗೆ ಅಪಾರವಾಗಿದೆ.ಈ ಬಹುಮಾನವನ್ನು ವಿಜ್ಞಾನ ವಿಚಾರಗಳು ಎಲ್ಲರಿಗೂ ತಲುಪುವಂತೆ ಮಾಡುವ ಪತ್ರಕರ್ತರಿಗೆ ಪ್ರತಿ ವರ್ಷವೂ ನೀಡಲಾಗುವುದು ಎಂದು ತಿಳಿಸಿರುವ ತಗಡೂರು ಅವರು, ಗಿರೀಶ್ ಲಿಂಗಣ್ಣ ಅವರನ್ನು ಅಭಿನಂದಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.