ಬೆಂಗಳೂರು : ಕಾಂಗ್ರೆಸ್ ಪಕ್ಷದಿಂದ ಮುಂಬರುವ 2023 ರ ವಿಧಾನ ಸಭೆ ಚುನಾವಣೆ ಸ್ಪರ್ಧೆ ಮಾಡುವ ಆಕಾಂಕ್ಷಿಗಳಿಗೆ ₹5000 ಅರ್ಜಿ ಆಫರ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ತಲೆ ನೋವ್ವು ತಂದಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬ ಆಸಕ್ತಿ ಇರುವವರು, ಅರ್ಜಿ ಹಾಕಬಹುದು ಹಾಗೂ ಅರ್ಜಿಗೆ ₹ 5000 ಜೊತೆಗೆ ₹2 ಲಕ್ಷ ಬಾಂಡ್ ನೀಡಬೇಕು ಎಂದು ಹೇಳಿದ್ದರು. ಅನೇಕ ಟಿಕೆಟ್ ಆಕಾಂಕ್ಷಿಗಳು ಹಣ ನೀಡಿ ಅರ್ಜಿ ಸಲ್ಲಿಸಿದರು. ಆದರೆ ಈಗ ಕೈ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿರುವ ಕೆಲ ಆಕಾಂಕ್ಷಿಗಳ ನಡೆ ಬಗ್ಗೆ ಗರಂ ಆಗಿರುವುದು ಬಹಿರಂಗವಾಗಿದೆ. ಹೀಗಾಗಿ ಎಲ್ಲಾ ಆಕಾಂಕ್ಷಿಗಳಿಗೆ ಸುತ್ತೋಲೆ ನೀಡಿದ್ದಾರೆ ಡಿಕೆ ಶಿವಕುಮಾರ್.


ಇದನ್ನೂ ಓದಿ : BBMP Election : ಬಿಜೆಪಿಗೆ ಸೋಲಿನ ಭಯವೇ ಬಿಬಿಎಂಪಿ ಚುನಾವಣೆ ಮುಂದೂಡುಕೆಗೆ ಕಾರಣ!


ಕೆಪಿಸಿಸಿ ಕಚೇರಿಗೆ ಬಂದ ದೂರುಗಳ ಪ್ರಕಾರ ಅಂತಿಮಗೊಳಿಸುವುದಕ್ಕೂ ಮೊದಲೇ ಕ್ಷೇತ್ರದಲ್ಲಿ ತಾವೇ ಅಭ್ಯರ್ಥಿ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದಕ್ಕೆ ಅನೇಕ ಕ್ಷೇತ್ರ ಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕೆಲವೊಂದು ಖಡಕ್ ಸೂಚನೆ ನೀಡಲಾಗಿದೆ.


1. ಗುಂಪುಗಳನ್ನ ನಿರ್ಮಿಸಿಕೊಂಡು ಗುಂಪುಗಾರಿಕೆ ನಡೆಸಬಾರದು


2. ಗುಂಪು ಕಟ್ಟಿಕೊಂಡು ಕೆಲಸ ಮಾಡಿ ತಾವೇ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಬಾರದು


3. ಸಾರ್ವಜನಿಕವಾಗಿ ವೈಯಕ್ತಿಕ ಹೇಳಿಕೆಗಳನ್ನ ನೀಡಿ ಜನರಲ್ಲಿ ಗೊಂದಲ ಮೂಡಿಸಬಾರದು


4. ಬದಲಿಗೆ ಎಲ್ಲರೂ ಒಂದಾಗಿ ಪಕ್ಷದ ಬಲರ್ಧನೆ ಮಾಡಬೇಕು


5. ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯಗಳನ್ನ ಜನರಿಗೆ ಮುಟ್ಟಿಸಬೇಕು


6. ಪ್ರತಿಯೊಂದು ಬೂತ್ ಗೆ ತೆರಳಿ ಸರ್ಕಾರದ ಹಗರಣಗಳನ್ನ ಜನರಿಗೆ ತಲುಪಿಸಬೇಕು


7. ಬೆಲೆ ಏರಿಕೆ, ಕಾರ್ಮಿಕರು, ರೈತರ ಸಮಸ್ಯೆಗಳು, ಕೋವಿಡ್ ನಿರ್ವಹಣಾ ವೈಫಲ್ಯಗಳನ್ನ ಜನರಿಗೆ ತಿಳಿಸುವಂತೆ ಸೂಚನೆ.


ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಯಕರ್ತರು ತಾವು 2023 ಚುನಾವಣೆಗೆ ಸ್ಪರ್ಧೆ ಮಾಡುವ ಕನಸನ್ನು ಹೊಂದಿದ್ದು, ಈ ಕಾರಣಕ್ಕೆ ಕ್ಷೇತ್ರದಲ್ಲಿ ಆಪ್ತರ ಬಳಿ ತಾವೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಹಾಗೂ ನಮ್ಮವರು ಎಂದು ತಂಡ ಕಟ್ಟಿಕೊಂಡು ಸೂಕ್ಷ್ಮ ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬೇರೆ ಆಕಾಂಕ್ಷಿಗಳಿಗೆ ಇರುಸು ಮುರುಸಿನ ಜೊತೆಗೆ, ಮುಸುಕಿನ ಗುದ್ದಾಟ ಪ್ರಾರಂಭ ಆಗಿದೆ. ಒಟ್ಟಾರೆ ಕಾಂಗ್ರೆಸ್ ನ ಈ ನಡೆ ಪರಿಣಾಮ ಯಾವ ರೀತಿ ಬೆಳೆಯುತ್ತದೆ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ : ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅಂಬೇಡ್ಕರ್ ಹೆಸರು ಬಳಸಿಕೊಳ್ಳುತ್ತಿರುವ ಕಾಂಗ್ರೆಸ್: ಬಿಜೆಪಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.