Number 2 Numerology Horoscope 2023 : ಇನ್ನು 25 ದಿನ ಕಳೆದರೆ ಹೊಸ ವರ್ಷಕ್ಕೆ ಕಾಲಿಡುತ್ತೇವೆ. ಕಳೆದ ಎರಡು ವರ್ಷ ಸಾಂಕ್ರಾಮಿಕ ರೋಗಗಳ ಆತಂಕದಲ್ಲಿದ್ದ ಜನರು, ಹೊಸ ವರ್ಷ ನೆಮ್ಮದಿ ಸಮೃದ್ದಿಯ ಜೀವನ ತರಲಿ ಎನ್ನುವ ಆಶಯದಿಂದಲೇ  ನವ ವರ್ಷವನ್ನು ಎದುರು ನೋಡುತ್ತಿದ್ದಾರೆ. ಇನ್ನು ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ನಮ್ಮ ಭವಿಷ್ಯ ಹೇಗಿರಲಿದೆ ಎಂದು ನೋಡುವ ಕುತೂಹಲ ಕೂಡಾ ಜನರಲ್ಲಿ ಇರುತ್ತದೆ. ವೃತ್ತಿ, ಆರ್ಥಿಕ ಸ್ಥಿತಿ, ಸಂಪತ್ತು, ಆರೋಗ್ಯ, ಪ್ರೇಮ ಜೀವನ, ವೈವಾಹಿಕ ಜೀವನ ಇತ್ಯಾದಿಗಳ ವಿಷಯದಲ್ಲಿ ಹೊಸ ವರ್ಷವು ಹೇಗಿರಲಿದೆ ಎಂದು ತಿಳಿದುಕೊಳ್ಳುವ ತವಕ ಸಾಮಾನ್ಯ. ಜ್ಯೋತಿಷ್ಯದ ರೀತಿಯೇ ಸಂಖ್ಯಾಶಾಸ್ತ್ರವನ್ನು ಅನುಸರಿಸಿ ವಾರ್ಷಿಕ ಜಾತಕ ಫಲವನ್ನು ನೋಡುವುದಾದರೆ, ಮೂಲಾಂಕ 2ರ ಜನರ ವೃತ್ತಿಜೀವನ 2023 ವರ್ಷವು ಉತ್ತಮವಾಗಿರುತ್ತದೆ. ಯಾವುದೇ ತಿಂಗಳ 2, 11 ಅಥವಾ 20 ರಂದು ಜನಿಸಿದ ಜನರು ಮೂಲಾಂಕ 2 ಹೊಂದಿರುತ್ತಾರೆ. 


COMMERCIAL BREAK
SCROLL TO CONTINUE READING

ಹೆಚ್ಚಾಗಲಿದೆ ಮೂಲಾಂಕ 2 ರ ಪ್ರಭಾವ ಮತ್ತು ಗೌರವ : 
2023ರಲ್ಲಿ ಮೂಲಾಂಕ 2 ರ ಜನರ ಗೌರವ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ.  ನಿಮ್ಮ ಕೆಲಸವನ್ನು ಚೆನ್ನಾಗಿ ನಿಭಾಯಿಸುವಿರಿ. ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಒಂದರ ಹಿಂದೆ ಒಂದರಂತೆ ಸುವರ್ಣಾವಕಾಶಗಳು ಸಿಗುತ್ತವೆ. ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸಿನ ಉತ್ತುಂಗಕ್ಕೆ ಏರುವುದು ಖಚಿತ.   ವರ್ಷದ ಮಧ್ಯದಲ್ಲಿ, ಅತ್ಯಂತ ಪ್ರಭಾವಶಾಲಿ ಸ್ಥಾನವನ್ನು ಹೊಂದಿರುತ್ತೀರಿ. ಸಮಾಜದಲ್ಲಿ ಗೌರವ ಸಿಗಲಿದೆ. ಬಹಳ ದಿನಗಳಿಂದ ವಿದೇಶದಲ್ಲಿ ನೆಲೆಸಲು ಯೋಜಿಸುತ್ತಿದ್ದವರ ಬಯಕೆ ಈಡೇರುವುದು.  


ಇದನ್ನೂ ಓದಿ : Samudrik Shastra : ಕನ್ನಡಿಯಲ್ಲಿ ನಿಮ್ಮನ್ನ ನೀವು ನೋಡಿಕೊಂಡರೆ ಶ್ರೀಮಂತರಾಗುತ್ತೀರಿ!


ಆರೋಗ್ಯ ಬಗ್ಗೆ ಕಾಳಜಿ ವಹಿಸಿ : 
ಮೂಲಾಂಕ ಎರಡರ ಜನರ ಆದಾಯವು 2023 ರಲ್ಲಿ ಉತ್ತಮವಾಗಿರುತ್ತದೆ. ಆದರೆ, ವೆಚ್ಚಗಳು ಸಹ ಅಧಿಕವಾಗಿರುತ್ತದೆ. ಬಜೆಟ್ ಅನ್ನು ಸರಿಯಾಗಿ ಅನುಸರಿಸಿದರೆ, ಹಣ ಉಳಿಸುವುದು ಸಾಧ್ಯವಾಗುತ್ತದೆ. ಈ ವರ್ಷ ಆರೋಗ್ಯದಲ್ಲಿ ಏರಿಳಿತಗಳು ಕಂಡು ಬರಬಹುದು.  ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. 


ಪ್ರೀತಿ ಮತ್ತು ವೈವಾಹಿಕ ಜೀವನ  :
2023 ರಲ್ಲಿ, ಮೂಲಾಂಕ ಎರಡರ ಜನರ ಪ್ರೇಮ ಜೀವನ ಮತ್ತು ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. ಪ್ರೇಮವಿವಾಹವಾಗಬೇಕು ಎಂದು ಕೊಂಡವರಿಗೆ ಸಂಗಾತಿ ಸಿಗಬಹುದು. ಮತ್ತೊಂದೆಡೆ, ವಿವಾಹಿತರ ಜೀವನವು ಸಂತೋಷವಾಗಿರುತ್ತದೆ. ಸಂಬಂಧವು ಬಲವಾಗಿರುತ್ತದೆ. ಕುಟುಂಬದಲ್ಲಿ ಕೆಲವು ಒತ್ತಡದ ಸಂದರ್ಭಗಳು ಉಂಟಾಗಬಹುದಾದರೂ,  ಅವುಗಳನ್ನು ಗೆಲ್ಲುತ್ತೀರಿ. 


ಇದನ್ನೂ ಓದಿ : Vastu Tips : ದೇವರಮನೆಯಲ್ಲಿ ಈ 7 ತಪ್ಪು ಎಂದಿಗೂ ಮಾಡಬೇಡಿ! ಲಕ್ಷ್ಮಿ ಕೋಪಗೊಳ್ಳುವಳು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.