21 Gram Theory Of Soul - ಜಗತ್ತಿನಲ್ಲಿ ಆತ್ಮಗಳಿವೆಯೇ? ದೇಹದ ಅಂತ್ಯದ ನಂತರ ಆತ್ಮಗಳು (Soul) ಇನ್ನೊಂದು ದೇಹವನ್ನು ಪ್ರವೇಶಿಸುತ್ತವೆಯೇ? ಈ ಪ್ರಶ್ನೆಗಳಿಗೆ ಪ್ರಪಂಚದಲ್ಲಿ ಇದುವರೆಗೆ ಉತ್ತರ ಕಂಡು ಹಿಡಿಯಲು ಸಾಧ್ಯವಾಗಿಲ್ಲ.


COMMERCIAL BREAK
SCROLL TO CONTINUE READING

ಸಾವಿನ ಬಳಿಕ ಆತ್ಮ ದೇಹ ತೊರೆಯುತ್ತದೆ
ಸನಾತನ (Sanatan Sanskriti) ಸಂಸ್ಕೃತಿಯ ಪ್ರಕಾರ, ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗೂ ಒಂದು ಆತ್ಮವಿದೆ. ಆ ಶರೀರದ ಅಂತ್ಯದ ನಂತರ, ಆ ಆತ್ಮವು ವೈಕುಂಠವನ್ನು ಪ್ರವೇಶಿಸುತ್ತವೆ ಅಥವಾ ತನ್ನ ಪೂರ್ವ ಕರ್ಮಗಳ ಆಧಾರದ ಮೇಲೆ  ಹೊಸ ದೇಹವನ್ನು ಪ್ರವೇಶಿಸುತ್ತವೆ. ವಿಜ್ಞಾನದ ಥರ್ಮೋಡೈನಾಮಿಕ್ಸ್ (Thermodynamics) ಸಿದ್ಧಾಂತವೂ ಕೂಡ ಇದನ್ನು ಸಾಬೀತುಪಡಿಸುತ್ತದೆ.


ಈ ಸಿದ್ಧಾಂತದ ಪ್ರಕಾರ, ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಮಾಡಲು ಸಾಧ್ಯವಿಲ್ಲ. ಅದು ತನ್ನ ರೂಪವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮಾತ್ರ ಬದಲಾಯಿಸುತ್ತದೆ. ಅಂತೆಯೇ, ಆತ್ಮವು ಎಂದಿಗೂ ನಾಶವಾಗುವುದಿಲ್ಲ. ಆತ್ಮ ನಷ್ಟವಾಗುವುದಿಲ್ಲ ಎಂದರೆ ಅದು ಏನಾಗುತ್ತದೆ?


ತೂಕದಲ್ಲಿ 21 ಗ್ರಾಂ. ಅಂತರ 
1907 ರಲ್ಲಿ, ಅಮೆರಿಕದ ಮ್ಯಾಸಚೂಸೆಟ್ಸ್‌ನ (Massachusetts) ಡಾಕ್ಟರ್ ಡಂಕನ್ ಮ್ಯಾಕ್‌ಡೌಗಲ್ ( Duncan MacDougall) ಈ ರಹಸ್ಯವನ್ನು ಭೇದಿಸಲು ಪ್ರಯೋಗವನ್ನು ನಡೆಸಿದ್ದರು. ಈ ಪ್ರಯೋಗದ ಸಮಯದಲ್ಲಿ, ಅವರು ಸಾವಿನ ಮೊದಲು ಮತ್ತು ನಂತರ ವ್ಯಕ್ತಿಯ ತೂಕವನ್ನು ಅಳೆಯುತ್ತಾರೆ. ಪ್ರಯೋಗದಲ್ಲಿ, ಆ ವ್ಯಕ್ತಿಯ ಸಾವಿಗೆ ಮೊದಲು ಮತ್ತು ನಂತರ ತೂಕದಲ್ಲಿ ಸುಮಾರು 21 ಗ್ರಾಂ (21 Gram Theory Of Soul) ವ್ಯತ್ಯಾಸವಿದೆ ಎಂದು ಅವರು ಕಂಡು ಕಂಡುಕೊಂಡಿದ್ದಾರೆ.


ಇದನ್ನೂ ಓದಿ-What Happens After Death: ಸಾವಿನ ನಂತರ ಏನಾಗುತ್ತದೆ? ಸತ್ತು 20 ನಿಮಿಷಗಳ ಬಳಿಕ ಮತ್ತೆ ಜೀವಂತವಾದ ವ್ಯಕ್ತಿ ಹೇಳಿದ್ದೇನು?


ಅಂದ್ರೆ ಆತ್ಮದ ತೂಕ 21 ಗ್ರಾಂ ಇರುತ್ತದೆಯಾ?
Duncan MacDougall ಅವರು ಸಾಯುತ್ತಿರುವ (Death) ಇತರ ವ್ಯಕ್ತಿಗಳ ಮೇಲೂ ಕೂಡ ಈ ಪ್ರಯೋಗವನ್ನು ನಡೆಸುತ್ತಾರೆ. ಪ್ರತಿ ಬಾರಿಯೂ ಎರಡೂ ವಿಧದ ತೂಕದಲ್ಲಿ 21 ಗ್ರಾಂ ವ್ಯತ್ಯಾಸ ಅವರಿಗೆ ಕಂಡುಬಂದಿದೆ. ಈ ಪ್ರಯೋಗದ ಮೂಲಕ ಖಂಡಿತವಾಗಿಯೂ ದೇಹದೊಳಗೆ ಏನೋ ಇದೆ ಎಂದು ಸಾಬೀತಾಗುತ್ತದೆ ಎಂದು ಅವರು ಹೇಳಿದ್ದಾರೆ. ಸಾವಿನ ಬಳಿಕ ಅದು ತಕ್ಷಣ ದೇಹದಿಂದ ಹೊರಬರುತ್ತದೆ ಮತ್ತು ಅದರ ತೂಕ 21 ಗ್ರಾಂ ಇರುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ.


ಇದನ್ನೂ ಓದಿ-ನಿಜವಾಗಿಯೂ ಇದೆಯಾ ಸಾವಿನ ನಂತರದ ಜಗತ್ತು..! ಮಹಿಳೆಗಾದ ಅನುಭವ ಏನು..?


ಆದರೆ ವೈಜ್ಞಾನಿಕವಾಗಿ ಅದು ಇನ್ನೂ ಸಾಬೀತಾಗಿಲ್ಲ
ಹಲವು ಜನರು ಹೇಳುವ ಪ್ರಕಾರ, ಸಾವಿನ (Death) ಬಳಿಕ ಶರೀರದಿಂದ ತಕ್ಷಣ ಹೊರಹೋಗುವ ಈ ರಹಸ್ಯಮಯ ತತ್ವ ಬೇರೇನೂ ಅಲ್ಲ ಅದು ಆತ್ಮವಾಗಿದೆ. ಹಲವು ಸಮಾಜ ಶಾಸ್ತ್ರಜ್ಞರು ಕೂಡ ಇದನ್ನೇ ಹೇಳಿದ್ದಾರೆ. ಆದರೆ, 21 ಗ್ರಾಂ ತೂಕದ  (21 Gram Theory) ಈ ತತ್ವ ನಿಜವಾಗಲೂ ಆತ್ಮವೇ ಆಗಿದೆಯಾ? ಅಥವಾ ಇನ್ನೇನೋ? ಈ ಕುರಿತು ಇದುವರೆಗೆ ವೈಜ್ಞಾನಿಕ ಸ್ಪಷ್ಟತೆ ಇಲ್ಲ. ಈ ಹಿನ್ನೆಲೆ ಜಗತ್ತಿನಲ್ಲಿ ಆತ್ಮದ ಕುರಿತಾದ ಈ ರಹಸ್ಯ (Mystery Of Soul) ಇದುವರೆಗೆ ರಹಸ್ಯವಾಗಿಯೇ ಉಳಿದಿದೆ.


ಇದನ್ನೂ  ಓದಿ -Death Indications - ಸಾವಿಗೂ ಮುನ್ನ ಸಿಗುತ್ತವೆ ಈ 6 ಸಂಕೇತಗಳು, ಶರೀರದಲ್ಲಿಯೂ ಕೂಡ ಬದಲಾವಣೆಗಳಾಗುತ್ತವೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.