ನಿಜವಾಗಿಯೂ ಇದೆಯಾ ಸಾವಿನ ನಂತರದ ಜಗತ್ತು..! ಮಹಿಳೆಗಾದ ಅನುಭವ ಏನು..?

ಸಾವಿನ ನಂತರ ಏನಾಗಬಹುದು ? ಸಾವಿನ ನಂತರ ದೇಹ ಇಲ್ಲಿಯೇ ಉಳಿಯುತ್ತದೆ,  ಆದರೆ ಆತ್ಮ ಎಲ್ಲಿಗೆ ಹೋಗತ್ತದೆ ಎಂದು ಕೇಳಿದರೆ, ಈ ಪ್ರಶ್ನೆಗೆ ಸದ್ಯಕ್ಕೆ ವಿಜ್ಞಾನದಲ್ಲೂ ಉತ್ತರವಿಲ್ಲ. 
 

 Life After Death : ಸಾವಿನ ನಂತರ ಏನಾಗಬಹುದು ? ಸಾವಿನ ನಂತರ ದೇಹ ಇಲ್ಲಿಯೇ ಉಳಿಯುತ್ತದೆ,  ಆದರೆ ಆತ್ಮ ಎಲ್ಲಿಗೆ ಹೋಗತ್ತದೆ ಎಂದು ಕೇಳಿದರೆ, ಈ ಪ್ರಶ್ನೆಗೆ ಸದ್ಯಕ್ಕೆ ವಿಜ್ಞಾನದಲ್ಲೂ ಉತ್ತರವಿಲ್ಲ. ಸಾಮಾನ್ಯವಾಗಿ ಈ ಪ್ರಶ್ನೆಗೆ ಸಿಗುವ  ಉತ್ತರ ಅಂದರೆ ಅವರವರ ಕರ್ಮಕ್ಕನುಸಾರವಾಗಿ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾರೆ ಅನ್ನುವುದು. ಸ್ವರ್ಗ ಅಥವಾ ನರಕ ಅನ್ನುವುದು ನಂಬಿಕೆಗೆ ಬಿಟ್ಟದ್ದು..

1 /5

 ಸಾವಿನ ನಂತರದ ಕಥೆ ಏನು ಎಂಬುದಕ್ಕೆಇಲ್ಲಿಯವರೆಗೆ ವಿಜ್ಞಾನದಲ್ಲಿ ಯಾವುದೇ ಉತ್ತರ ಇಲ್ಲ. ಪ್ರತಿಯೊಂದು ಧರ್ಮವೂ ಅದರ ನಂಬಿಕೆಗೆ ಅನುಗುಣವಾಗಿ ಅದರದೇ ಆದ ಉತ್ತರ ನೀಡಬಹುದು. ಆದರೆ ಬ್ರಿಟನಿನ ಒಬ್ಬ ಮಹಿಳೆ ತಾನು ಸಾವಿನ ನಂತರದ ಜಗತ್ತನ್ನು ನೋಡಿದ್ದೇನೆ ಎನ್ನುತ್ತಾರೆ..

2 /5

ಈ ಮಹಿಳೆಯ ಹೆಸರು ರೋನ್ಡಾ. ಇವರು ಹೊಸ ವರ್ಷಾಚರಣೆ ವೇಳೆ ಅತಿಯಾಗಿ ಮದ್ಯಪಾನ ಮಾಡಿದ್ದರು. ಇದಾದ ನಂತರ ರೋನ್ಡಾ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇದಾದ ನಂತರ ಕೆಲ ದಿನಗಳ ನಂತರ ಇವರಿಗೆ ಪ್ರಜ್ಞೆ ಬಂದಿದ್ದು, ಈ ಮಹಿಳೆ ಹೇಳುತ್ತಿದ್ದ ಮಾತು ಕೇಳಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಈ ಮಹಿಳೆಯ ಪ್ರಕಾರ ಅವರ ಆತ್ಮ ದೇಹವನ್ನು ಬಿಟ್ಟು ಬೇರೊಂದು ಜಗತ್ತನ್ನು ಪ್ರವೇಶಿಸಿತ್ತಂತೆ..ಆ ಜಗತ್ತು ಸಂಪೂರ್ಣ ಭಿನ್ನವಾಗಿತ್ತಂತೆ. ಇಲ್ಲಿನ ಅನುಭವವೇ ಬೇರೆ ಎಂದು ವಿವರಿಸಿದ್ದಾರೆ ಈ ಮಹಿಳೆ. ನಿಯರ್ ಡೆತ್ ಎಕ್ಸ್ ಪೀರಿಯನ್ಸ್ ರಿಸರ್ಚ್ ಫೌಂಡೇಶನ್ ಜೊತೆ  ಮಾತನಾಡಿದ ಮಹಿಳೆ ತನ್ನ ಅನುಭವಗಳನ್ನು ಹೇಳಿದ್ದಾರೆ.

3 /5

ರೋನ್ಡಾಅವರಿಗೆ ದೊಡ್ಡದಾದ ಸುರಂಗದಲ್ಲಿ ಬಿದ್ದ ಅನುಭವವಾಗಿತ್ತಂತೆ. ಕಣ್ಣು ಬಿಡುತ್ತಿದ್ದಂತೆ ಸುತ್ತಲೂ ಕತ್ತಲೆ ಆವರಿಸಿತ್ತಂತೆ.. ಆದರೆ ಸ್ವಲ್ಪ ದೂರದರಲ್ಲೇ ಮತ್ತೆ ಬಣ್ಣಗಳಿಂದ ಕೂಡಿದ ಸುರಂಗವೊಂದು ಅವರ ಕಣ್ಣಿಗೆ ಬಿದ್ದಿದೆ. ಸಂಪೂರ್ಣ ಗೋಲಾಕಾರದಲ್ಲಿದ್ದ ಈ ಸುರಂಗ ರೋನ್ಡಾ ಅವರ ಹತ್ತಿರಕ್ಕೆ ಬರುತ್ತಿತಂತೆ.. ಈ ಸುರಂಗದ ಗೋಡೆಗಳು ತಿರುಗುತ್ತಿದ್ದು, ಈ ಸುರಂಗದ ಕೊನೆ ಭಾಗದಿಂದ ಬೆಳಕು ಹೊರಹೊಮ್ಮುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.  

4 /5

ಈ ಸುರಂಗದೊಳಗೆ ಕಾಲಿಡುತ್ತಿದ್ದಂತೆ, ಸುರಂಗದ ಮೇಲ್ಬಾಗಕ್ಕೆ ನೋಡಿದಾಗ ಅಲ್ಲಿ ಎಲ್ಲರೂ ಪಿಸುಗುಟ್ಟುತ್ತಿರುವ ಅನುಭವವಾಗಿದೆ ಎನ್ನುತ್ತಾರೆ ರೋನ್ಡಾ.. ಆದರೆ ಅವರೆಲ್ಲಾ ಏನು  ಮಾತನಾಡಿಕೊಳ್ಳುತ್ತಿದ್ದರು ಎನ್ನುವುದು ಅರ್ಥವಾಗುತ್ತಿರಲಿಲ್ಲ ಎಂದು  ಅವರು ಹೇಳಿದ್ದಾರೆ.   

5 /5

ಇಷ್ಟಾದ ನಂತರ ಸುರಂಗದ ಗೋಡೆಗಳಿಂದ ಕಪ್ಪಗಿನ ಕೈಗಳು ಹೊರಬಂದಿದ್ದು, ತನ್ನತ್ತ ಬರುತ್ತಿತ್ತು. ಆದರೆ ಆ ಕೈಗಳು ನನ್ನನ್ನು ತಲುಪುವ ಮುನ್ನವೇ ಯಾರೋ ಆ ಸುರಂಗದಿಂದ ಹೊರಗೆಳೆದಿದ್ದಾರೆ. ಒಳಗಡೆ ಏನಾಗುತ್ತಿತ್ತು ಎಂದು ನೋಡುವುದು ನನ್ನಿಂದ ಸಾಧ್ಯವಾಗಿಲ್ಲ. ಯಾಕೆಂದರೆ ಅಷ್ಟರಲ್ಲಿ ನನ್ನ ಆತ್ಮ ಮತ್ತೆ ನನ್ನ ದೇಹವನ್ನು ಪ್ರವೇಶಿಸಿತ್ತು ಎಂದಿದ್ದಾರೆ. ಈ ಅನುಭವವಾದ ನಂತರ ಶಾಂತಿಯಿಂದ ಇರಲು ಸಾಧ್ಯವಾಗುತ್ತಿಲ್ಲ.. ಆದರೆ ಅದು ಸಾವಿನ ನಂತರ ಜಗತ್ತು ಎನ್ನುವುದು ಸತ್ಯ ಎಂಬುವುದು ರೋನ್ಡಾ ಅವರ ವಾದ..