Lalbagh Flower Show: 75ನೇ ವರ್ಷದ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ 215ನೇ ಫಲಪುಷ್ಪ  ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಫಲಪುಷ್ಪ  ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು. ನಿನ್ನೆ (ಜನವರಿ 24, ಬುಧವಾರ) ಸಿದ್ದಗಂಗಾ ಮಠದ ಶ್ರೀಗಳು ಕೂಡ ಭೇಟಿ ನೀಡಿ ಫಲಪುಷ್ಪ  ಪ್ರದರ್ಶನ ವೀಕ್ಷಿಸಿದರು. 


COMMERCIAL BREAK
SCROLL TO CONTINUE READING

75ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ  ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ 12ನೇ ಶತಮಾನದ ಕೂಡಲ ಸಂಗಮ ಶ್ರಿಬಸವಣ್ಣನವರ ಅನುಭವ ಮಂಟಪ ಈ ಬಾರಿ ಹೈಲೈಟ್ ಆಗಿತ್ತು. ಇನ್ನೂ ಫಲಪುಷ್ಪ  ಪ್ರದರ್ಶನಕ್ಕೆ ಸಿದ್ದಗಂಗಾ ಶ್ರೀಗಳು ಲಾಲ್‌ಬಾಗ್‌ಗೆ ಭೇಟಿ ನೀಡಿ ಪುಷ್ಪ ಪ್ರದರ್ಶನವನ್ನು ವೀಕ್ಷಿಸಿದರು. 


ಇದನ್ನೂ ಓದಿ- Republic Day 2024: ಗಣರಾಜ್ಯೋತ್ಸವ ಆಚರಣೆಗಾಗಿ ಹೀಗಿರಲಿ ನಿಮ್ಮ ಸ್ಟೈಲ್


ಈ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನಿಗೆ ಪುಷ್ಪಾರ್ಚನೆ ಮಾಡಿದ ಶ್ರೀಗಳಿಗೆ  ತೋಟಗಾರಿಕೆ ಇಲಾಖೆಯಿಂದ ಸನ್ಮಾನ ಮಾಡಿದರು. ಈ ವೇಳೆ ಮಾತನಾಡಿದ ಶ್ರೀಗಳು, ಬೆಂಗಳೂರಿನ ಲಾಲ್‌ಬಾಗ್‌ಗೆ ದೊಡ್ಡ ಇತಿಹಾಸವಿದೆ. ವರ್ಷಕ್ಕೆ ಲಾಲ್‌ಬಾಗ್‌ನಲ್ಲಿ 2 ಬಾರಿ ಜಾತ್ರೆ ನಡೆಯುತ್ತೆ. ಒಂದು ಸ್ವಾತಂತ್ರ್ಯೋತ್ಸವ ದಿನ ಇನ್ನೊಂದು ಗಣರಾಜ್ಯೋತ್ಸವ ದಿನ. ನಮ್ಮ ಜನಗಳು ಈ ದಿನಕ್ಕಾಗಿ‌ ಕಾಯುತ್ತಿರುತ್ತಾರೆ. ಈ ಬಾರಿ ಲಾಲ್‌ಬಾಗ್‌ ಫಲಪುಷ್ಪ  ಪ್ರದರ್ಶನದಲ್ಲಿ ವಿಶ್ವಗುರು ಬಸವಣ್ಣನವರನ್ನ ಮುಖ್ಯವಾಗಿ ತೆಗೆದುಕೊಂಡಿರುವುದು ಖುಷಿ ವಿಚಾರ ಅಂತ ಹೇಳಿದರು. 


ಇನ್ನೂ ಈ ಬಾರಿ ಫಲಪುಷ್ಪ  ಪ್ರದರ್ಶನಕ್ಕೆ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅನುಭವ ಮಂಟಪ, ಐಕ್ಯ ಮಂಟಪ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಕಳೆದ ಐದು ದಿನಗಳ ಪ್ರದರ್ಶನದಲ್ಲಿ ಹೂಗಳು ಬಾಡಿರೋದರಿಂದ ನಿನ್ನೆ 15 ಲಕ್ಷ  ಹೂಗಳ ಬದಲಾವಣೆ ಮಾಡಿದ್ದೇವೆ. ಕಳೆದ 6 ದಿನದಲ್ಲಿ ಬರೋಬ್ಬರಿ 1 ಲಕ್ಷದ, 20 ಸಾವಿರ ಜನರಿಂದ ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಇದುವರೆಗೆ ಫಲಪುಷ್ಪ ಪ್ರದರ್ಶನದಿಂದ 88 ಲಕ್ಷ ಹಣ ಅದಾಯ ಬಂದಿದೆ. 


ಇದನ್ನೂ ಓದಿ- ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ


ಒಟ್ಟಿನಲ್ಲಿ, ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಈ ಬಾರಿ ಬಸವಣ್ಣನವರ ಕಲಾಕೃತಿಗಳು ಹೂವಿನಲ್ಲಿ ಅಲಂಕಾರಗೊಂಡಿರುವುದನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಅಂತಾರೆ ಸಸ್ಯಕಾಶಿಯ ಅಭಿಮಾನಿಗಳು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.