61 ವರ್ಷ ವಯಸ್ಸಿನಲ್ಲೂ ಒಬ್ಬರ ವ್ಯಕ್ತಿ ತೂಕ ಕಳೆದುಕೊಂಡು ಯಂಗ್ ಆಗಿ ಕಾಣಬಹುದು. ಕೇಳೋದಕ್ಕೆ ಸ್ವಲ್ಪ ವಿಚಿತ್ರ ಎಂದು ಅನಿಸಿದರೂ ಸಹ ಇದು ನಿಜ. ಪೋರ್ಚುಗಲ್‌ನ ಕಿರುತೆರೆ ನಟಿ ಇಂತಹದ್ದೊಂದು ಸಾಹಸ ಮಾಡಿದ್ದಾರೆ. ಕರೋಲ್ ವೋರ್ಡರ್ಮನ್ ಎಂಬ 61ರ ಹರೆಯದ ನಟಿ ಕೇವಲ 15 ದಿನಗಳಲ್ಲಿ ತೂಕವನ್ನು ಕಳೆದುಕೊಂಡು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಅಷ್ಟಕ್ಕೂ ಇದು ಹೇಗೆ ಸಾಧ್ಯ? ಈ ಪ್ರಶ್ನೆಗೆ ಉತ್ತರ ಇಲ್ಲಿ ನೀಡುತ್ತೇವೆ ನೋಡಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: 100 ವರ್ಷಕ್ಕಿಂತ ಹೆಚ್ಚು ಬದುಕು, ರಾತ್ರಿಗಳೇ ಇಲ್ಲದ ದಿನಗಳು... ಭಯ ಹುಟ್ಟಿಸುವಂತಿವೆ ಈ ಭವಿಷ್ಯಗಳು


ರೆಸ್ಟೋರೆಂಟ್ ಫುಡ್ ತಿಂದ ನಂತರವೂ ನನ್ನ ತೂಕ ಕಡಿಮೆಯಾಗಿದೆ ಎಂದು ಆಕೆ ಹೇಳುತ್ತಿದ್ದಾಳೆ. ಆದರೆ ಕೇವಲ ರೆಸ್ಟೋರೆಂಟ್ ಆಹಾರವನ್ನು ಮಾತ್ರ ಸೇವಿಸಿದ್ದಾರೆ ಎಂದಲ್ಲ. ಇದಲ್ಲದೇ ತಾನು ಸೇವಿಸುತ್ತಿದ್ದ ಆಹಾರ ಕ್ರಮದ ಬಗ್ಗೆಯೂ ಮಾಹಿತಿ ನೀಡಿದ್ದಾರೆ.


ಕರೋಲ್ ವೋರ್ಡರ್‌ಮ್ಯಾನ್ ತನ್ನ ತೂಕ ಇಳಿಸುವ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ತೆಗೆದಿರುವ ಫೋಟೋ ಮತ್ತು ಈಗಿನ ಫೋಟೋವನ್ನು ಸೇರಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.


ಕ್ಯಾರೊಲ್ ವೊರ್ಡರ್‌ಮನ್ ತೂಕ ಇಳಿಸಿಕೊಳ್ಳಲು ಕೆಲವು ದಿನಗಳವರೆಗೆ ಮನೆಯಿಂದ ದೂರವಿರುವ ಕ್ಯಾಂಪ್ ಗೆ ತೆರಳಿದ್ದರು. ಆ ಶಿಬಿರದಲ್ಲಿ ತೂಕ ಇಳಿಸಿದ್ದಾರೆ. ಟಿವಿ ತಾರೆ ಕರೋಲ್ ಫೋಟೋ ಶೇರ್ ಮಾಡಿದ್ದು, 'ನಾವು ಬೇಗ ಮನೆಗೆ ಬರುತ್ತಿದ್ದೇವೆ. ಇನ್ನೂ ಒಂದು ದಿನ ಬಾಕಿ ಇದೆ' ಎಂದಿದ್ದಾರೆ. 18 ದಿನಗಳಲ್ಲಿ 3 ದಿನ ರೆಸ್ಟೋರೆಂಟ್‌ಗೆ ಹೋಗಿ ಆಹಾರ ಸೇವಿಸಿದ್ದೇನೆ. ಉಳಿದ 15 ದಿನಗಳಲ್ಲಿ ಏನು ತಿಂದಿದ್ದೇನೆ” ಎಂದು ಅವರು ವಿವರಿಸಿದ್ದಾರೆ.


ಕ್ಯಾರಲ್ ವೋರ್ಡರ್ಮನ್ ಅವರು ಶಿಬಿರದಲ್ಲಿ ಉಳಿಯುವ ಮೂಲಕ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಶಿಬಿರದಲ್ಲಿ, ಮೂರು ದಿನಗಳ ಕಾಲ ರೆಸ್ಟೋರೆಂಟ್‌ನಲ್ಲಿ ತಿನ್ನಲು ಅವಕಾಶ ನೀಡಲಾಯಿತು. 18 ದಿನಗಳ ಶಿಬಿರದಲ್ಲಿ, 3 ದಿನಗಳ ಕಾಲ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ನಂತರ, 15 ದಿನಗಳವರೆಗೆ ಜ್ಯೂಸ್‌ ಮಾತ್ರ ಕುಡಿಸಿದ್ದಾರೆ. ಇದಲ್ಲದೇ ಅನೇಕ ಚಟುವಟಿಕೆಗಳನ್ನು ಸಹ ಅಲ್ಲಿ ಮಾಡಿದ್ದಾರೆ. ಕಸರತ್ತು ಕೂಡ ಮೋಜಿನ ರೀತಿಯಲ್ಲಿ ನಡೆದಿದೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. 


ಇದನ್ನೂ ಓದಿ: BWF 2022: ಲಕ್ಷ್ಯ ಸೇನ್ ಗೆ ಗೆಲುವು-ಪದಕ ಬೇಟೆ ಮುಂದುವರೆಸಿದ ಭಾರತೀಯ ವೀರರು


ಅವರ ಫೋಟೋಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಪೋರ್ಚುಗಲ್‌ನ ಸ್ಟಾರ್ ನಟಿ ಕಳೆದ ಕೆಲವು ವರ್ಷಗಳಿಂದ ಫಿಟ್ ಆಗಿರಲು ಶ್ರಮಿಸುತ್ತಿದ್ದಾರೆ. ಇದೀಗ ತಮ್ಮ ಚಿತ್ರಗಳ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ. 61 ನೇ ವಯಸ್ಸಿನಲ್ಲಿ ತೂಕವನ್ನು ಕಳೆದುಕೊಳ್ಳುವುದು ಅವರಿಗೆ ಸಾಕಷ್ಟು ಥ್ರಿಲ್ ಆಗಿತ್ತು ಎಂದು ಸ್ವತಃ ಹೇಳಿಕೊಂಡಿದ್ದಾರೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.