Tamil Nadu Temple Lemon Auction : ತಮಿಳುನಾಡಿನ ದೇವಾಲಯಗಳು ತಮ್ಮ ಭವ್ಯತೆ, ಸೌಂದರ್ಯ ಮತ್ತು ಸಮೃದ್ಧಿಗಾಗಿ ಪ್ರಪಂಚದಾದ್ಯಂತ ಹೆಸರಾಗಿದೆ.  ಇದರಿಂದಾಗಿ ಈ ದೇವಾಲಯಗಳಿಗೆ ಹರಿದು ಬರುವ ಭಕ್ತರ ಸಂಖ್ಯೆ ಕೂಡಾ ಅಪಾರ. ತಮಿಳುನಾಡಿನ ಅಂತಹ ಪ್ರಸಿದ್ಧ ದೇವಾಲಯವೆಂದರೆ ವಿಲ್ಲುಪುರಂ ದೇವಾಲಯ. ಈ ದೇವಾಲಯವು ಇದೀಗ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಇಲ್ಲಿ ಪಂಗುನಿ ಉತಿರಂ ಜಾತ್ರೆ ಮುಗಿದಿದೆ. ಇದಾದ ನಂತರ ಈ ದೇವಾಲಯದಲ್ಲಿ 9 ನಿಂಬೆಹಣ್ಣುಗಳನ್ನು ಹರಾಜಿಗೆ ಇಡಲಾಯಿತು. ದೇವಸ್ಥಾನದಲ್ಲಿ ನಡೆದ ನಿಂಬೆಹಣ್ಣು ಹರಾಜಿನಲ್ಲಿ 9 ನಿಂಬೆಹಣ್ಣು 2.3 ಲಕ್ಷಕ್ಕೆ ಹರಾಜಾಗಿದೆ. ಕೇವಲ 20-30 ರೂ.ಗೆ ಸಿಗುವ ಈ ನಿಂಬೆಹಣ್ಣುಗಳು 2 ಲಕ್ಷ ರೂಪಾಯಿಗೆ ಹರಾಜಾಗಿರುವುದು ನಿಜಕ್ಕೂ ವಿಶೇಷ. ಅಷ್ಟಕ್ಕೂ ಈ ನಿಂಬೆಹಣ್ಣನ್ನು ಇಷ್ಟು ಹೆಚ್ಚು ಮೊತ್ತಕ್ಕೆ ಹರಾಜು ಹಾಕಿರುವ ಹಿಂದಿನ ಕಾರಣ ಏನು? ಈ ನಿಂಬೆಹಣ್ಣಿನ ವಿಶೇಷತೆ ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.  


COMMERCIAL BREAK
SCROLL TO CONTINUE READING

ದೇವರ ಪವಿತ್ರ ಈಟಿಗೆ ಜೋಡಿಸಲಾದ ನಿಂಬೆ ಹಣ್ಣು : 
ವಿಲ್ಲುಪುರಂ ದೇವಸ್ಥಾನದಲ್ಲಿ ಪ್ರತಿ ವರ್ಷ ಪಂಗುನಿ ಉತಿರಂ ಜಾತ್ರೆ ನಡೆಯುತ್ತದೆ.  ಈ ಜಾತ್ರೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಉತ್ಸವದ  ಕೊನೆಯ ದಿನದಂದು ಪೂಜೆಗೆ ಬಳಸುವ ನಿಂಬೆಹಣ್ಣುಗಳನ್ನು ಹರಾಜು ಹಾಕಲಾಗುತ್ತದೆ. ಅದರಂತೆಯೇ ಈ ಬಾರಿ ದೇವಸ್ಥಾನದ 9 ನಿಂಬೆಹಣ್ಣುಗಳನ್ನೂ ಹರಾಜಿಗೆ ಇಡಲಾಯಿತು. ಈ 9 ನಿಂಬೆ ಹಣ್ಣುಗಳು 2.3 ಲಕ್ಷಕ್ಕೆ ಹರಾಜಾಗಿದೆ.ಈ ನಿಂಬೆಹಣ್ಣುಗಳನ್ನು ದೇವರ ಪವಿತ್ರ ಈಟಿಗೆ ಜೋಡಿಸಲಾಗಿದೆ. ಈ ನಿಂಬೆಹಣ್ಣಿನಿಂದ ತಯಾರಿಸಿದ ನಿಂಬೆ ಪಾನಕವನ್ನು ಸೇವಿಸುವುದರಿಂದ ಬಂಜೆತನ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೆ ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹೆಚ್ಚಳಕ್ಕೆ ಕಾರಣವಾಗುತ್ತದೆಯಂತೆ. ಹಾಗಾಗಿ ಮಕ್ಕಳಿಲ್ಲದ ದಂಪತಿಗಳು ಹರಾಜಿನಲ್ಲಿ ಈ ನಿಂಬೆಹಣ್ಣುಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ. ಮುರುಗ ಸ್ವಾಮಿಯ ಈಟಿಗೆ ಅಂಟಿಕೊಂಡಿರುವ ಈ ನಿಂಬೆಹಣ್ಣುಗಳು ಮಾಂತ್ರಿಕ ಶಕ್ತಿಯನ್ನು ಹೊಂದಿರುತ್ತವೆ ಎನ್ನುವುದು ಇಲ್ಲಿನ ಜನರ ಬಲವಾದ ನಂಬಿಕೆ. 


ಇದನ್ನೂ ಓದಿ : Samudrika Shastra: ದೇಹದ ಈ ಭಾಗದಲ್ಲಿ ಮಚ್ಚೆ ಇರುವ ಮಹಿಳೆಯರಿಗೆ ಬೇಗ ಸಂತಾನ ಸುಖ ಪ್ರಾಪ್ತಿಯಾಗುತ್ತದೆ!


ತಮಿಳುನಾಡಿನಲ್ಲಿರುವ ಈ ದೇವಾಲಯದ ಪವಿತ್ರ ನಿಂಬೆಹಣ್ಣನ್ನು ಹರಾಜು ಹಾಕುವ ಘಟನೆ ಮಾತ್ರ ವಿಶಿಷ್ಟವಲ್ಲ, ನಿಂಬೆಹಣ್ಣುಗಳನ್ನು ಹರಾಜು ಹಾಕುವ ವಿಧಾನವೂ ವಿಶೇಷವಾಗಿದೆ.ಈ ಹಬ್ಬಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳನ್ನು ನಡೆಸಿದ ನಂತರ, ದೇವಾಲಯದ ಅರ್ಚಕರು ಈ ನಿಂಬೆಹಣ್ಣುಗಳನ್ನು ಮೊಳೆ   ತುಂಬಿದ ವೇದಿಕೆಯ ಮೇಲೆ ನಿಂತು ಹರಾಜು ಹಾಕುತ್ತಾರೆ.ಇದರ ನಂತರ, ಜನರು ಈ ನಿಂಬೆಹಣ್ಣುಗಳನ್ನು ಅತಿ ಹೆಚ್ಚು ಬಿಡ್ ಮಾಡುವ ಮೂಲಕ ಖರೀದಿಸುತ್ತಾರೆ. 9 ದಿನಗಳ ಉತ್ಸವದಲ್ಲಿ ದೇವಸ್ಥಾನದ ಅರ್ಚಕರು ಪ್ರತಿದಿನ ನಿಂಬೆ ಹಣ್ಣನ್ನು ಈಟಿಯಿಂದ ಚುಚ್ಚುತ್ತಾರೆ.ನಂತರ ಹಬ್ಬದ ಕೊನೆಯ ದಿನದಂದು ದೇವಾಲಯದ ಆಡಳಿತ ಮಂಡಳಿ ನಿಂಬೆಹಣ್ಣುಗಳನ್ನು ಹರಾಜು ಹಾಕುತ್ತದೆ.ಇದರಲ್ಲಿ ಮೊದಲ ದಿನದ ನಿಂಬೆಯನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ. 


ಈ ವರ್ಷ ಕುಳತ್ತೂರು ಗ್ರಾಮದ ದಂಪತಿ 50,500 ರೂ.ಗೆ ಮೊದಲ ದಿನದ ನಿಂಬೆಹಣ್ಣು ಖರೀದಿಸಿದ್ದಾರೆ. ಎಲ್ಲಾ 9 ನಿಂಬೆಹಣ್ಣುಗಳು ಒಟ್ಟು 2,36,100 ರೂ.ಗೆ ಹರಾಜಾಗಿದೆ. 


ಇದನ್ನೂ ಓದಿ : Chanakya Niti: ಚಾಣಕ್ಯನ ಈ 5 ಮಾತುಗಳನ್ನು ನೆನಪಿನಲ್ಲಿಡಿ, ನಿಮ್ಮ ಜೇಬು ಎಂದಿಗೂ ಖಾಲಿ ಉಳಿಯುವುದಿಲ್ಲ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ