9th International Day of Yoga: 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬುಧವಾರ ವಿಧಾನಸೌಧದಲ್ಲಿ ಗಣ್ಯರು ಯೋಗಾಸನ ಮಾಡುವ ಮೂಲಕ ಗಮನ ಸೆಳೆದರು.


COMMERCIAL BREAK
SCROLL TO CONTINUE READING

ವಿಧಾನಸೌಧ ಗ್ರಾಂಡ್ ಸ್ಟಪ್ ಮುಂಭಾಗದಲ್ಲಿ ಆಯುಷ್ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸ್ಪೀಕರ್ ಯು.ಟಿ ಖಾದರ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್,  ಮಾಜಿ ಕ್ರಿಕೆಟಿಗ ವಿ.ಕೆ ವೆಂಕಟೇಶ್ ಪ್ರಸಾದ್, ಅಂಜು ಬಾಬಿ ಜಾರ್ಜ್,  ನಟಿ ಭಾವನಾ ಭಾಗಿಯಾಗಿದ್ದರು. 


ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ನಮ್ಮ ಸಂಸ್ಕೃತಿಯಲ್ಲಿ ಯೋಗ ಪ್ರಾಚೀನ ಕಾಲದಲ್ಲೇ ಇತ್ತು. ಯೋಗ ಮನಸ್ಸು ಹಾಗೂ ಶರೀರವನ್ನು ಸಮತೋಲನದಲ್ಲಿ ಇಡಲು ಅನುಕೂಲಕಾರಿಯಾಗಿದೆ ಎಂದರು.


ಯೋಗ ಜನರನ್ನು ಒಂದು ಗೂಡಿಸುವ ಕೆಲಸ ಮಾಡುತ್ತಿದೆ. ನಾನು ಖುದ್ದು ಯೋಗ ಪ್ರಾಣಾಯಾಮ ಮಾಡಿ ಅದರ ಅನಕೂಲ ಪಡೆದುಕೊಂಡಿದ್ದೇನೆ, ನೀವೂ ಪ್ರಯತ್ನ ಮಾಡಿ ಎಂದು ಅವರು ಇದೇ ವೇಳೆ ಜನರಿಗೆ ಕರೆ ಕೊಟ್ಟರು.


ಇದನ್ನೂ ಓದಿ- ಕೋಮಲವಾದ ತ್ವಚೆಯನ್ನು ಪಡೆಯಲು ಇಲ್ಲಿವೆ ಪರಿಣಾಮಕಾರಿ ಯೋಗಾಸನಗಳು..!


ಕಾರ್ಯಕ್ರಮದಲ್ಲಿ ಮಾತನಾಡಿದ‌ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಯೋಗ ಪೂರ್ವಜರ ಕೊಡುಗಯಾಗಿದೆ. ಹಿರಿಯರು ಬಿಟ್ಟು ಹೋದ ಜ್ಞಾನವಾಗಿದೆ. ಯೋಗ ನಾವು ವಿಶ್ವಕ್ಕೆ ಕೊಟ್ಟ ಕೊಡುಗೆಯಾಗಿದೆ ಎಂದರು.


ಯೋಗದ ಲಾಭ ಅದನ್ನು ಮಾಡುವವರಿಗೆ ಗೊತ್ತಿದೆ. ಬದುಕಿನ ಶೈಲಿ ಬದಲಾವಣೆ, ಮಾಲಿನ್ಯ, ಆಹಾರ ಶೈಲಿ, ಮಾನಸಿಕ ಒತ್ತಡದ ಪರಿಣಾಮ ಆರೋಗ್ಯ ಕೆಡುತ್ತಿದೆ ಎಂದು ಹೇಳಿದರು.


ಯೋಗ ಅಭ್ಯಾಸ ಮಾಡುವವರ ಆರೋಗ್ಯ ಹತೋಟಿಯಲ್ಲಿರುತ್ತದೆ. ಯೋಗವನ್ನು ಪ್ರೋತ್ಸಾಹಿಸಲು ಸರ್ಕಾರದ ಕಡೆಯಿಂದ ಎಲ್ಲಾ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.


ಇದನ್ನೂ ಓದಿ- Yoga For Men's Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ಪ್ರತಿದಿನ ಮಾಡಿ ಈ ಸುಲಭ ಯೋಗ!


ಸ್ವೀಕರ್ ಯು.ಟಿ ಖಾದರ್ ಮಾತನಾಡಿ, ದೇಶದ ಋಷಿಮುಣಿಗಳು ವಿಶ್ವಕ್ಕೆ ಕೊಟ್ಟ ಕೊಡುಗೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದು. ಒತ್ತಡ ಬಹುದೊಡ್ಡ ಸಮಸ್ಯೆ, ಅದಕ್ಕೆ ಮದ್ದಿಲ್ಲ. ಯೋಗಾಭ್ಯಾಸ ಪ್ರತಿಯೊಬ್ಬರಿಗೆ ಅಗತ್ಯವಾಗಿದೆ. ದ್ವೇಷ ಮುಕ್ತ, ದುಷ್ಟಟ ಮುಕ್ತ ಸಮಾಜಕ್ಕೆ ಯೋಗಾಭ್ಯಾಸ ಅಗತ್ಯವಾಗಿದೆ. ಇವತ್ತು ಪವರ್ ಯೋಗ ಸೇರಿದಂತೆ ಭಿನ್ನ ಯೋಗಾಭ್ಯಾಸ ಇದೆ. ಆದರೆ  ಯೋಗಕ್ಕೆ ಪಠ್ಯಕ್ರಮ ಮಾಡಬೇಕು ಎಂದು ಮನವಿ ಮಾಡಿದರು.


ಶಾಸಕರಾದ ರಿಜ್ವಾನ್ ಹರ್ಷದ್ ಮಾತನಾಡಿ, ಯೋಗ ತಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಭಾಗವಾಗಿದೆ. ಯೋಗ ನಮ್ಮಿಂದ ಇಡೀ ಪ್ರಪಂಚಕ್ಕೆ ಬೆಳಗಾಗಿ ಹರಿದಿದೆ ಎಂಬುದು ಹೆಮ್ಮೆ. ಯೋಗ ಅಂದರೆ ಕೇವಲ ದೇಹದ ಆರೋಗ್ಯ ಅಲ್ಲ, ಮಾನಸೀಕ ಆರೋಗ್ಯಕ್ಕೂ ಅನುಕೂಲವಾಗಿದೆ ಎಂದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.