ನಿತ್ಯ ಈ ಯೋಗಾಸನ ಮಾಡುವುದರಿಂದ ಹೊಟ್ಟೆ ಮತ್ತು ಸುತ್ತಲಿನ ಭಾಗದ ಕೊಬ್ಬು ಸುಲಭವಾಗಿ ಕರಗುವುದು

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸಲುವಾಗಿ ಯೋಗ ಮಾಡುವುದಾದರೆ ಉತ್ಥಾನ ಪಾದಾಸನ ಬಹಳ ಸಹಕಾರಿ. ಈ ಆಸನವನ್ನು ನಿತ್ಯ ಮಾಡುವ ಮೂಲಕ ಹೊಟ್ಟೆ ಮತ್ತು ಸುತ್ತಲಿನ ಭಾಗದ ಕೊಬ್ಬನ್ನು ಕರಗಿಸಬಹುದು. 

Written by - Ranjitha R K | Last Updated : Mar 15, 2023, 09:33 AM IST
  • ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ.
  • ನಿಯಮಿತವಾಗಿ ಯೋಗವನ್ನು ಮಾಡುವುದರಿಂದ ಮನಸ್ಸು ದೇಹದ ಆರೋಗ್ಯ ವೃದ್ದಿಸುತ್ತದೆ
  • ಅಡ್ಡ ಪರಿಣಾಮವಿಲ್ಲದೆ ತೂಕ ಕಳೆದುಕೊಳ್ಳಲು ಸಹಕಾರಿ
ನಿತ್ಯ  ಈ  ಯೋಗಾಸನ  ಮಾಡುವುದರಿಂದ ಹೊಟ್ಟೆ ಮತ್ತು ಸುತ್ತಲಿನ  ಭಾಗದ ಕೊಬ್ಬು ಸುಲಭವಾಗಿ ಕರಗುವುದು  title=

ಬೆಂಗಳೂರು : ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾಗಿ ಯೋಗವನ್ನು ಮಾಡುವುದರಿಂದ  ಮನಸ್ಸಿನ ಶಾಂತಿ ಹೆಚ್ಚುವುದು ಮಾತ್ರವಲ್ಲ ಆತ್ಮ ವಿಶ್ವಾಸವನ್ನು ಕೂಡಾ ಹೆಚ್ಚಿಸುತ್ತದೆ.  ಯೋಗವು ಮನಸ್ಸು ಮತ್ತು ದೇಹ ಎರಡನ್ನೂ ಸದೃಢವಾಗಿಸುತ್ತದೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ದೇಹ ತೂಕ ಕಳೆದುಕೊಳ್ಳಲು ಇರುವ ಸುಲಭ ಮಾರ್ಗ ಯೋಗ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಸಲುವಾಗಿ ಯೋಗ ಮಾಡುವುದಾದರೆ ಉತ್ಥಾನ ಪಾದಾಸನ ಬಹಳ ಸಹಕಾರಿ. ಈ ಆಸನವನ್ನು ನಿತ್ಯ ಮಾಡುವ ಮೂಲಕ ಹೊಟ್ಟೆ ಮತ್ತು ಸುತ್ತಲಿನ ಭಾಗದ ಕೊಬ್ಬನ್ನು ಕರಗಿಸಬಹುದು. 

ಉತ್ಥಾನ ಪಾದಾಸನ ಮಾಡುವ ವಿಧಾನ :
1. ಮೊದಲು ಸಮತಟ್ಟಾದ ಮೇಲ್ಮೈಯಲ್ಲಿ ಮಲಗಿಕೊಳ್ಳಿ
2. ಈಗ ಎರಡೂ ಕಾಲುಗಳನ್ನು ಒಟ್ಟಿಗೆ  ಸೇರಿಸಿಕೊಳ್ಳಿ. 
3. ನಂತರ ಉಸಿರನ್ನು ಎಳೆದುಕೊಂಡು ಕಾಲನ್ನು ಮೇಲಕ್ಕೆತ್ತಿ 
4. 30 ಡಿಗ್ರಿಗಳವರೆಗೆ ಮಾತ್ರ ಕಾಲು ಮೇಲಕೆತ್ತಬೇಕು. 
5.  ಹೀಗೆ 30 ಡಿಗ್ರಿಗಳವರೆಗೆ ಕಾಲನ್ನು ಮೇಲಕೆತ್ತಿದ ಮೇಲೆ ಸ್ವಲ್ಪ ಹೊತ್ತು ಹಾಗೆಯೇ ಇಟ್ಟುಕೊಳ್ಳಬೇಕು. 
6. 30 ಸೆಕೆಂಡುಗಳ ನಂತರ, ಉಸಿರನ್ನು ಹೊರಗೆ ಬಿಡುತ್ತಾ ಕಾಲುಗಳನ್ನು  ಕೆಳಗೆ ತನ್ನಿ
7. ಒಂದೆರಡು ಸೆಕೆಂಡಿನ ವಿಶ್ರಾಂತಿ ಬಳಿಕ ಈ ಆಸನವನ್ನು ಮತ್ತೊಮ್ಮೆ  ಮುಂದುವರೆಸಿ.  

ಇದನ್ನೂ ಓದಿ : ನೀವೂ ಸಹ ಸ್ಕಿನ್ ಟೋನರ್ ಬಳಸ್ತೀರಾ... ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

ಈ ಆಸನ ನೋಡಲು ಸುಲಭ ಎನ್ನುವಂತೆ ಕಾಣುತ್ತದೆ. ಆದರೆ ಈ ಆಸನವನ್ನು ಮಾಡುವುದು  ಆರಂಭದಲ್ಲಿ ಸ್ವಲ್ಪ ಕಷ್ಟ ಎನ್ನುವಂತೆ ಭಾಸವಾಗಬಹುದು. ಯಾಕೆಂದರೆ 90 ಡಿಗ್ರಿ ಕೋನದಲ್ಲಿ ಲಂಬವಾಗಿ ಕಾಲನ್ಜು ಎತ್ತುವುದು ಸುಲಭ.  ಆದರೆ ಅದನ್ನು ನೆಲದಿಂದ 30 ಡಿಗ್ರಿ ಕೋನದಲ್ಲಿ ಎತ್ತಿ, ಅದೇ ಸ್ಥಿತಿಯಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳುವುದು ಸುಲಭವಲ್ಲ. ಆದರೆ ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಹೊಟ್ಟೆ ಮತ್ತು ಸುತ್ತಲಿನ ಭಾಗದ ಕೊಬ್ಬು ಕರಗಲು ಆರಂಭವಾಗುತ್ತದೆ. 

ಉತ್ಥಾನ ಪಾದಾಸನದ ಪ್ರಯೋಜನಗಳು :
ಈ ಆಸನ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಜೀರ್ಣಾಂಗ ಸಮಸ್ಯೆ ಇರುವವರಿಗೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ . ಈ ಆಸನವು ಬೆನ್ನು ನೋವನ್ನು ಸಹ ನಿವಾರಿಸುತ್ತದೆ.

ಇದನ್ನೂ ಓದಿ : ದಿನಕ್ಕೆ ಒಂದು ಕೆ.ಜಿ ತೂಕ ಕಳೆದುಕೊಳ್ಳಬೇಕೆ ? ಈ ಜ್ಯೂಸ್ ಕುಡಿಯಿರಿ

ಉತ್ಥಾನ  ಪಾದಾಸನ ಮಾಡುವಾಗ  ನೆನಪಿರಬೇಕಾದ ಅಂಶಗಳು : 
ಈ ಆಸನವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಮುಂಜಾನೆ ಅಥವಾ ಸಂಜೆಯ ವೇಳೆ ಈ ಆಸನ ಮಾಡಬಹುದು. ಈ ಆಸನ ಮಾಡುವ 6 ಗಂಟೆಗಳ ಮೊದಲು ಏನನ್ನಾದರೂ ಆಹಾರ ಸೇವಿಸಿದ್ದರೆ ಸಾಕು. ಈ ಆಸನ ಮಾಡುವಾಗ ಹೊಟ್ಟೆ ಖಾಲಿಯಾಗಿರಬೇಕು. ಬೆನ್ನು ನೋವು ಇದ್ದರೆ ಈ ಆಸನ ಪ್ರಯತ್ನಿಸುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ. ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಯ ನಂತರವೂ ಈ ಆಸನವನ್ನು ಮಾಡಬಾರದು. ಗರ್ಭಿಣಿಯರು ಈ ಆಸನವನ್ನು ಮಾಡಬಾರದು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News