Mahashivratri Muhurat 2023: ಮಹಾಶಿವರಾತ್ರಿಯ ದಿನ ದೇವಾದಿದೇವ ಮಹಾದೇವ ಹಾಗೂ ತಾಯಿ ಪಾರ್ವತಿಯನ್ನು ವಿಶೇಷ ಭಕ್ತಿಭಾವದಿಂದ ಪೂಜಿಸಲಾಗುತ್ತದೆ.  ಈ ದಿನದಂದು ಶಿವನ ಕೃಪೆಯಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ತಾಯಿ ಪಾರ್ವತಿ ಮತ್ತು ಶಿವನ ವಿವಾಹವು ಮಹಾಶಿವರಾತ್ರಿಯ ದಿನದಂದು ನಡೆಯಿತು ಎನ್ನಲಾಗುತ್ತದೆ. ಈ ದಿನದಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ.  ಈ ದಿನ ಶನಿದೇವನು ಹಗಲಿನಲ್ಲಿ ಕುಂಭ ರಾಶಿಯಲ್ಲಿ ಸಾಗುತ್ತಾನೆ. 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶನಿಯ ಈ ಕುಂಭ ಸಂಚಾರ ನೆರವೇರುತ್ತಿರುವುದು ವಿಶೇಷವಾಗಿದೆ. ಈ ವರ್ಷ ಮಹಾಶಿವರಾತ್ರಿಯನ್ನು ಫೆಬ್ರವರಿ 18 ರಂದು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಮತ್ತೊಂದೆಡೆ, ಮಹಾಶಿವರಾತ್ರಿಯ ದಿನ, ಶನಿ ಪ್ರದೋಷ ವ್ರತದ ಕಾಕತಾಳೀಯವಿದೆ. ಹೀಗಾಗಿ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಆದರೆ ಈ ದಿನ ಅಪ್ಪಿತಪ್ಪಿಯೂ ಕೂಡ ಕೆಲ ಕೆಲಸಗಳನ್ನು ಮಾಡಬಾರದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಏಕೆಂದರೆ ಈ ಕೆಲಸಗಳನ್ನು ಮಾಡುವುದರಿಂದ ಶಿವ ನಿಮ್ಮ ಮೇಲೆ ಮುನಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಯಾವು ಯಾವ ಕೆಲಸ ಕಾರ್ಯಗಳನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,


ಮಹಾಶಿವರಾತ್ರಿಯ ಶುಭ ಮುಹೂರ್ತಗಳು
>> ಪ್ರಥಮ ಪ್ರಹರ ಪೂಜಾ ಸಮಯ: 18 ಫೆಬ್ರವರಿ 2023, ಸಂಜೆ 6: 41 ರಿಂದ ರಾತ್ರಿ 9: 47 ರವರೆಗೆ ಇರಲಿದೆ.
>> ದ್ವಿತೀಯ ಪ್ರಹರ ಪೂಜಾ ಸಮಯ: 18 ಫೆಬ್ರವರಿ 2023ರ ರಾತ್ರಿ 09:47 ರಿಂದ ರಾತ್ರಿ 12:53 ವರೆಗೆ ಇರಲಿದೆ.
>> ತೃತೀಯ ಪ್ರಹರ ಪೂಜಾ ಸಮಯ: ಫೆಬ್ರವರಿ 19, 2023 ರ  ಬೆಳಗಿನ ಜಾವ  12.53 ರಿಂದ ಬೆಳಗಿನ ಜಾವ 03.58 ರವರೆಗೆ ಇರಲಿದೆ.
>> ಚತುರ್ಥ ಪ್ರಹರ ಪೂಜಾ ಸಮಯ: ಫೆಬ್ರವರಿ 19, 2023ರ ಬೆಳಗಿನ ಜಾವ 03:58 ರಿಂದ ಬೆಳಗ್ಗೆ 07:06 ರವರೆಗೆ ಇರಲಿದೆ.


ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ
>> ಶಿವನ ಪೂಜೆಯಲ್ಲಿ ಕೇತಕಿ ಮತ್ತು ಚಂಪಾ ಹೂವುಗಳನ್ನು ಅರ್ಪಿಸಬೇಡಿ. ಈ ಹೂವುಗಳು ಶಿವನಿಂದ ಶಾಪ ಪಡೆದಿವೆ ಎಂದು ನಂಬಲಾಗಿದೆ. ಹೀಗಾಗಿ ಈ ಹೂವುಗಳನ್ನು ಅರ್ಪಿಸುವುದನ್ನು ತಪ್ಪಿಸಬೇಕು.


>> ಈ ದಿನ ಪೂಜಿಸುವಾಗ ಶಿವನಿಗೆ ಭಗ್ನಗೊಂಡ ಅಥವಾ ತುಂಡರಿಸಿದ ಅಕ್ಷತೆಯನ್ನು ಅರ್ಪಿಸಬಾರದು. ಏಕೆಂದರೆ ಮುರಿದ ಅಕ್ಕಿಯನ್ನು ಅಪೂರ್ಣತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ತುಂಡಾದ ಅಕ್ಷತೆಯನ್ನು ಅರ್ಪಿಸುವುದನ್ನು ತಪ್ಪಿಸಬೇಕು.


>> ಶಿವನಿಗೆ ಮೂರು ಅಕ್ಷರಗಳೊಂದಿಗೆ ಬೆಲ್ಪತ್ರಿಯನ್ನು ಶಿವನಿಗೆ ಅರ್ಪಿಸಿ. ಹರಿದು ಹೋದ ಬೆಲ್ಪತ್ರಿಯನ್ನು ಅರ್ಪಿಸಬೇಡಿ ಮತ್ತು ಬೇಲ್ಪತ್ರಿಯ ಮೇಲೆ ಶ್ರೀಗಂಧದಿಂದ ರಾಮ ಎಂದು ಬರೆಯುವುದನ್ನು ಮರೆಯಬೇಡಿ


>> ಮಹಾಶಿವರಾತ್ರಿಯಂದು ನಾಲ್ಕು ಪ್ರಹರಗಳಲ್ಲಿ ಪೂಜೆ ಸಲ್ಲಿಸುವವರು, ಮೊದಲ ಪ್ರಹರದಲ್ಲಿ ನೀರಿನಿಂದ, ಎರಡನೇ ಪ್ರಹರದಲ್ಲಿ ಮೊಸರಿನಿಂದ, ಮೂರನೇ ಪ್ರಹರದಲ್ಲಿ ತುಪ್ಪದಿಂದ ಮತ್ತು ನಾಲ್ಕನೇ ಪ್ರಹರದಲ್ಲಿ ಜೇನುತುಪ್ಪದಿಂದ ಶಿವನ ಮೇಲೆ ಅಭಿಷೇಕ ಮಾಡಬೇಕು.  ಹೀಗೆ ಮಾಡುವುದರಿಂದ ಕೀರ್ತಿ, ಭಾಗ್ಯ ಲಭಿಸುತ್ತದೆ.


>> ಈ ದಿನ ಶಿವನಿಗೆ ಋತುಮಾನದ ಹಣ್ಣುಗಳನ್ನು ಅರ್ಪಿಸಿ. ಅದರಲ್ಲಿಯೂ ವಿಶೇಷವಾಗಿ ಶಿವನಿಗೆ ಬಾರಿ ಹಣ್ಣುಗಳನ್ನು ಅರ್ಪಿಸಲು ಮರೆಯದಿರಿ, ಏಕೆಂದರೆ ಈ ಹಣ್ಣುಗಳನ್ನು ಶಾಶ್ವತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-ಕುಂಭ ರಾಶಿಯಲ್ಲಿ 12 ತಿಂಗಳುಗಳ ಬಳಿಕ ಸೂರ್ಯ-ಶುಕ್ರರ ಮೈತ್ರಿ, ಈ ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ!


>> ಈ ದಿನ ಶಿವನ ಪೂಜೆಯಲ್ಲಿ ಕುಂಕುಮ ಬಳಸಬಾರದು. ಏಕೆಂದರೆ ಶಿವನ ಆರಾಧನೆಯಲ್ಲಿ ಕುಂಕುಮವನ್ನು ನಿಷೇಧಿಸಲಾಗಿದೆ. ಕುಂಕುಮದ ಬದಲಿಗೆ ನೀವು ಶ್ರೀಗಂಧವನ್ನು ಬಳಸಬಹುದು.


ಇದನ್ನೂ ಓದಿ-ಸೂರ್ಯ-ಮಂಗಳನ ಸಂಯೋಜನೆಯಿಂದ ನವಪಂಚಮ ಯೋಗ ನಿರ್ಮಾಣ, ಈ ರಾಶಿಗಳಿಗೆ ಬಂಪರ್ ಲಾಭ!


>> ಈ ದಿನ ಕಪ್ಪು ಬಟ್ಟೆಯನ್ನು ಧರಿಸಬಾರದು. ಏಕೆಂದರೆ ಜ್ಯೋತಿಷ್ಯದಲ್ಲಿ ಕಪ್ಪು ಬಟ್ಟೆಯನ್ನು ಪೂಜೆಯಲ್ಲಿ ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ. ಅದಕ್ಕಾಗಿಯೇ ನೀವು ಕೆಂಪು, ಬಿಳಿ ಮತ್ತು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಬಹುದು.


ಇದನ್ನೂ ಓದಿ-ಯಾವ ರಾಶಿಯ ಜನರು ಎಂತಹ ರುದ್ರಾಕ್ಷಿ ಧರಿಸಿದರೆ ಹೆಚ್ಚು ಲಾಭದಾಯಕ?


>> ಈ ದಿನ ಶಿವನಿಗೆ ಅರ್ಪಿಸುವ ಪ್ರಸಾದವನ್ನು ಸ್ವೀಕರಿಸಬಾರದು. ಏಕೆಂದರೆ ಅದು ದುರಾದೃಷ್ಟವನ್ನು ತರುತ್ತದೆ. ಹೀಗೆ ಮಾಡುವುದರಿಂದ ಧನಹಾನಿ ಮತ್ತು ರೋಗಗಳು ಬರುವ ಸಾಧ್ಯತೆ ಇರುತ್ತದೆ.


ಇದನ್ನೂ ಓದಿ-Shani Paad Parivartan: ಲೋಹದ ಪಾದದಲ್ಲಿ ಶನಿಯ ನಡೆ, 3 ರಾಶಿಗಳ ಭಾಗ್ಯ ಪರಿವರ್ತನೆಯ ಸಾಧ್ಯತೆ, ಪ್ರತಿ ಕ್ಷೇತ್ರದಲ್ಲೂ ಯಶಸ್ಸು!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.