Shani Paad Parivartan: ಲೋಹದ ಪಾದದಲ್ಲಿ ಶನಿಯ ನಡೆ, 3 ರಾಶಿಗಳ ಭಾಗ್ಯ ಪರಿವರ್ತನೆಯ ಸಾಧ್ಯತೆ, ಪ್ರತಿ ಕ್ಷೇತ್ರದಲ್ಲೂ ಯಶಸ್ಸು!

Shani Paad Parivartan: ಕುಂಭ ರಾಶಿಯಲ್ಲಿ ಗೋಚರಿಸಿರುವ ಶನಿ ತನ್ನ ಪಾದ ಅಥವಾ ಚರಣವನ್ನು ಬದಲಿಸಿದ್ದಾನೆ. ಈ ಲೇಖನದಲ್ಲಿ ನಾವು ಲೋಹದ ಪಾದದ ಮೂಲಕ ಕುಂಭ ರಾಶಿಯಲ್ಲಿ ಸಂಚಾರ ಆರಂಭಿಸಿರುವ ಶನಿ ಯಾವ ರಾಶಿಗಳ ಭಾಗ್ಯಕ್ಕೆ ಮರಗು ನೀಡಲಿದ್ದಾನೆ ಎಂಬುದನ್ನು ತಿಳಿದುಕೊಳ್ಳೋಣ.

Written by - Nitin Tabib | Last Updated : Feb 4, 2023, 06:56 PM IST
  • ಇದರೊಂದಿಗೆ ಶನಿದೇವನು ರಾಶಿಗೆ ಅನುಗುಣವಾಗಿ ತನ್ನ ಪಾದವನ್ನು ಬದಲಾಯಿಸುತ್ತಾನೆ.
  • ಇಲ್ಲಿ ನಾವು ನಿಮಗೆ ಒಟ್ಟು 3 ರಾಶಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು,
  • ಲೋಹದ ಪಾದದ ಮೂಲಕ ಸಾಗುತ್ತ ಶನಿ ಈ ರಾಶಿಗಳ ಜನರಿಗೆ ಅಪಾರ ಹಣ ಮತ್ತು ಪ್ರಗತಿಯನ್ನು ದಯಪಾಲಿಸಲಿದ್ದಾನೆ.
Shani Paad Parivartan: ಲೋಹದ ಪಾದದಲ್ಲಿ ಶನಿಯ ನಡೆ, 3 ರಾಶಿಗಳ ಭಾಗ್ಯ ಪರಿವರ್ತನೆಯ ಸಾಧ್ಯತೆ, ಪ್ರತಿ ಕ್ಷೇತ್ರದಲ್ಲೂ ಯಶಸ್ಸು! title=
ಲೋಹದ ಪಾದದಲ್ಲಿ ಶನಿ ಸಂಚಾರ ಆರಂಭ

Shani Paad Parivartan: ವೈದಿಕ ಜ್ಯೋತಿಷ್ಯದ ಪ್ರಕಾರ, ಒಂದು  ಗ್ರಹವು ತನ್ನ ರಾಶಿಯನ್ನು ಪರಿವರ್ತಿಸಿದಾಗ, ಅದರ ಚಲನೆಯ ಪರಿಣಾಮವು ಮಾನವ ಜೀವನದ ಮೇಲೆ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ನ್ಯಾಯ ಒದಗಿಸುವ ಶನಿ ದೇವನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ ಮತ್ತು ಈಗ ಅವನು 0 ಡಿಗ್ರಿಯಿಂದ 30 ಡಿಗ್ರಿಗೆ ಹೋಗುತ್ತಾನೆ. ಇದರೊಂದಿಗೆ ಶನಿದೇವನು ರಾಶಿಗೆ ಅನುಗುಣವಾಗಿ ತನ್ನ ಪಾದವನ್ನು ಬದಲಾಯಿಸುತ್ತಾನೆ. ಇಲ್ಲಿ ನಾವು ನಿಮಗೆ ಒಟ್ಟು 3 ರಾಶಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಲೋಹದ ಪಾದದ ಮೂಲಕ ಸಾಗುತ್ತ ಶನಿ ಈ ರಾಶಿಗಳ ಜನರಿಗೆ ಅಪಾರ ಹಣ  ಮತ್ತು ಪ್ರಗತಿಯನ್ನು ದಯಪಾಲಿಸಲಿದ್ದಾನೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ವೃಶ್ಚಿಕ ರಾಶಿ 
ನಿಮ್ಮ ರಾಶಿಯಿಂದ ಶನಿದೇವನ ಸಂಚಾರ ಲೋಹದ ಪಾದದ ಮೇಲೆ ನಡೆದಿದೆ. ಇದರಿಂದ ಶನಿಯು ಇಲ್ಲಿ ರಾಜಯೋಗಕಾರಕನಾಗಿದ್ದಾನೆ. ಇದೇ ವೇಳೆ ಶಶ ಎಂಬ ರಾಜಯೋಗವನ್ನೂ ಕೂಡ ರೂಪಿಸುತ್ತಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ಯಾವುದೇ ಆಸ್ತಿ ಮತ್ತು ವಾಹನವನ್ನು ಖರೀದಿಸಬಹುದು. ಅಲ್ಲದೆ, ಪೂರ್ವಜರ ಆಸ್ತಿಯ ಲಾಭವೂ ನಿಮಗೆ ಸಿಗಲಿದೆ ಅಥವಾ ಭೂಮಿ-ಆಸ್ತಿಯ ವ್ಯವಹಾರದಲ್ಲಿ ನೀವು ಲಾಭ ಪಡೆಯಬಹುದು. ಇದಲ್ಲದೆ, ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ನೀವು ಕಾಣಬಹುದು. ಆದರೆ ಶನಿ ಅಸ್ತನಾಗಿರುವ ಕಾರಣ ಶನಿಯ ಮೇಲೆ ಕೇತುವಿನ ದೃಷ್ಟಿ ಇದೆ. ಆದ್ದರಿಂದ, ತಾಯಿಯ ಆರೋಗ್ಯವು ಹದಗೆಡಬಹುದು. ಅಲ್ಲದೆ, ನಿಮ್ಮ ನರಮಂಡಲವೂ ಹಾನಿಗೊಳಗಾಗಬಹುದು. ಅಂದರೆ ಅಕ್ಟೋಬರ್ 30 ರವರೆಗೆ ನೀವು ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ ಕೇತುವಿನ ಬೀಜ ಮಂತ್ರವನ್ನು ಪಠಿಸಿ. ಮಂಗಳವಾರ ಉಪವಾಸ ಕೈಗೊಳ್ಳಿ. ಬಡವರಿಗೆ ಮತ್ತು ನಿರ್ಗತಿಕರಿಗೆ ಕಂಬಳಿಗಳನ್ನು ದಾನ ಮಾಡಿ.

ಇದನ್ನೂ ಓದಿ-ಬುಧನ ರಾಶಿಗೆ ಕೇತು, ಮೂರು ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

ಕರ್ಕ ರಾಶಿ
ನಿಮ್ಮ ರಾಶಿಯ ಕೂಲಕ ಲೋಹದ ಪಾದದ ಮೇಲೆ ಶನಿದೇವನ ಸಂಚಾರ ನಡೆಯುತ್ತಿದೆ. ಹೀಗಾಗಿ ಈ ಸಮಯದಲ್ಲಿ ನೀವು ಕಠಿಣ ಪರಿಶ್ರಮದ ಮೂಲಕ ಪಹಲಗಳನ್ನು ಪಡೆಯುತ್ತೀರಿ. ಇದರೊಂದಿಗೆ ತಂದೆಯೊಂದಿಗಿನ ಸಂಬಂಧದಲ್ಲಿ ಸುಧಾರಣೆ ಕಾಣಿಸಲಿದೆ. ಮತ್ತೊಂದೆಡೆ, ಕರ್ಕ ರಾಶಿಯ ಜನರು ಹಳೆಯ ಹೂಡಿಕೆಗಳಿಂದ ಹಣವನ್ನು ಪಡೆಯುತ್ತಾರೆ. ಅಲ್ಲದೆ, ಅವಿವಾಹಿತರು ಸಂಬಂಧಕ್ಕಾಗಿ ಪ್ರಸ್ತಾಪವನ್ನು ಪಡೆಯಬಹುದು. ಇದರೊಂದಿಗೆ ಉದ್ಯೋಗದಲ್ಲಿರುವವರು ಇನ್‌ಕ್ರಿಮೆಂಟ್ ಮತ್ತು ಬಡ್ತಿ ಪಡೆಯಬಹುದು. ಆದರೆ ಜನವರಿ 17 ರಿಂದ, ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ಪ್ರಾರಂಭವಾಗಿದೆ ಮತ್ತು ಶನಿಯು ನಿಮ್ಮ ಜನ್ಮ ಕುಂಡಲಿಯಲ್ಲಿ ಕೇತುವಿನ ಮೇಲೆ ತನ್ನ ಗಮನ ಕೆನ್ದ್ರೀಕರಿಸಿದ್ದಾನೆ. ಹೀಗಾಗಿ ಸಂಗಾತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.

ಇದನ್ನೂ ಓದಿ-Raj Yog: ಗುರು-ಚಂದ್ರರ ಮೈತ್ರಿಯಿಂದ ನವಪಂಚಮ ರಾಜ ಯೋಗ ನಿರ್ಮಾಣ, 3 ರಾಶಿಗಳ ಜನರಿಗೆ ಭಾರಿ ಧನಾಗಮನದ ಜೊತೆಗೆ ಭಾಗ್ಯೋದಯ ಬಾಗ್ಯ

ಮೀನ ರಾಶಿ
ಶನಿದೇವನು ನಿಮ್ಮ ರಾಶಿಯಿಂದ ಲೋಹದ ಪಾದದ ಮೂಲಕ ಸಾಗುತ್ತಿದ್ದಾನೆ. ಆದ್ದರಿಂದ, ಈ ಸಮಯದಲ್ಲಿ ನೀವು ನಿಮಗೆ ಬರಬೇಕಾದ ಹಣವನ್ನು ಮರಳಿ ಪಡೆಯಬಹುದು. ಅಲ್ಲದೆ, ಉದ್ಯೋಗವನ್ನು ಬದಲಾಯಿಸಲು ನೀವು ಯೋಜಿಸುತ್ತಿದ್ದರೆ, ಸಮಯ ಅನುಕೂಲಕರವಾಗಿದೆ. ವಿದೇಶಕ್ಕೆ ಹೋಗಿ ನೆಲೆಸಬಹುದು. ಆದರೆ ಈ ಸಮಯದಲ್ಲಿ ನೀವು ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅಲ್ಲದೆ, ನೀವು ಮೊಣಕಾಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.

ಇದನ್ನೂ ಓದಿ-Surya-Guru Yuti: 12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ 2 ದೊಡ್ಡ ಗ್ರಹಗಳ ಮೈತ್ರಿ, 3 ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News