ನವದೆಹಲಿ: ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಜನರ ಭವಿಷ್ಯ, ವೃತ್ತಿ, ವೈವಾಹಿಕ ಜೀವನ ಇತ್ಯಾದಿಗಳ ಬಗ್ಗೆ ಅವರ ಕೈ ರೇಖೆಗಳನ್ನು ನೋಡುವ ಮೂಲಕ ತಿಳಿದುಕೊಳ್ಳಬಹುದು. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಮುಖ್ಯವಾಗಿ 3 ಗೆರೆಗಳು ಗೋಚರಿಸುತ್ತವೆ. ಈ 3 ರೇಖೆಗಳು ಜೀವನ ರೇಖೆ, ತಲೆ ರೇಖೆ ಮತ್ತು ಹೃದಯ ರೇಖೆ. ಹಾಗೆಯೇ ಅಂಗೈಯಲ್ಲಿ ಮದುವೆಯ ರೇಖೆಯೂ ಇದೆ. ಇದನ್ನು ನೋಡಿದಾಗ ಆ ವ್ಯಕ್ತಿಯ ವೈವಾಹಿಕ ಜೀವನ ಹೇಗಿರುತ್ತದೆ? ಮದುವೆಯಾಗುತ್ತಾನೋ ಇಲ್ಲವೋ? ಯಾವಾಗ ಮದುವೆಯಾಗುತ್ತಾನೆ? ಇತ್ಯಾದಿಗಳ ಬಗ್ಗೆ ಹೇಳಬಹುದು.


COMMERCIAL BREAK
SCROLL TO CONTINUE READING

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮದುವೆಯ ರೇಖೆಯು ಅಂಗೈಯಲ್ಲಿನ ಚಿಕ್ಕ ಬೆರಳಿನ ಹತ್ತಿರದಲ್ಲಿದೆ. ಯಾರ ಅಂಗೈಯಲ್ಲಿ ಈ ರೇಖೆಯು ಹೃದಯ ರೇಖೆಯನ್ನು ತಲುಪುತ್ತದೆ ಮತ್ತು ಮುಂದೆ ಹೋಗುತ್ತದೆ, 2 ಅಥವಾ 3 ಗೆರೆಗಳಾಗುತ್ತದೆ, ಆಗ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಂದರೆ ಆ ವ್ಯಕ್ತಿಯ ದಾಂಪತ್ಯ ಜೀವನ ಸುಖಮಯವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ: ಹೇರ್ ಡೈ ಬೇಡವೇ ಬೇಡ … ಈ ಎರಡು ಎಣ್ಣೆಗಳಿದ್ದರೆ ಬಿಳಿಕೂದಲು ಬುಡಸಮೇತ ಕಪ್ಪಾಗುತ್ತೆ!


  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ಮುರಿದ ಹೃದಯ ರೇಖೆಯನ್ನು ಹೊಂದಿದ್ದರೆ, ಆತನ ವೈವಾಹಿಕ ಜೀವನದಲ್ಲಿ ಅನೇಕ ಸಮಸ್ಯೆಗಳಿರುತ್ತವೆ ಎಂದರ್ಥ.

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ವಿವಾಹ ರೇಖೆಯು ಹೃದಯ ರೇಖೆಯ ಕಡೆಗೆ ವಾಲಿದ್ದರೆ, ಜೀವನದುದ್ದಕ್ಕೂ ಪತಿ-ಪತ್ನಿಯರ ನಡುವೆ ಬಿರುಕು ಇರುತ್ತದೆ ಎಂದರ್ಥ. ನಿರ್ಧಾರಗಳ ಬಗ್ಗೆ ಇಬ್ಬರ ನಡುವೆ ಒಮ್ಮತ ಇರುವುದಿಲ್ಲ.

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈಯಲ್ಲಿ ಮದುವೆಯ ರೇಖೆಯ ಬಳಿ ದ್ವೀಪವಿದ್ದರೆ, ಅಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾನೆ.

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈಯಲ್ಲಿ ಅದೃಷ್ಟ ರೇಖೆಯು ಹಗುರವಾಗಿದ್ದರೆ ಅಥವಾ ಇಲ್ಲದಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ ಎಂದರ್ಥ. ಇದು ವೃತ್ತಿ ಅಥವಾ ಮದುವೆ ಬಗ್ಗೆ ತಿಳಿಸುತ್ತದೆ. ಇವರು ವೃತ್ತಿಯಲ್ಲಿ ಯಶಸ್ಸು ಮತ್ತು ವೈವಾಹಿಕ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ.

  • ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಅಂಗೈಯಲ್ಲಿ ಮದುವೆ ರೇಖೆ ಇಲ್ಲದಿದ್ದರೆ, ಆ ವ್ಯಕ್ತಿ ಮದುವೆಯಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದರ್ಥ. ಇಂತಹ ವ್ಯಕ್ತಿಗಳ ಕೆಲಸ-ಕಾರ್ಯಗಳು ಕಾರ್ಯರೂಪಕ್ಕೆ ಬರುವುದಿಲ್ಲ.


ಇದನ್ನೂ ಓದಿ: Yoga Day: ಉತ್ತಮ ಆರೋಗ್ಯ ನಿಮ್ಮದಾಗಬೇಕಾ.. ಹಾಗಿದ್ರೆ ಪ್ರತಿನಿತ್ಯ ನೀವು ಮಾಡಲೇಬೇಕಾದ ಯೋಗಾಸನಗಳಿವು..!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.