International Yoga Day 2023: ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಈ ನಿಯಮ ಪಾಲಿಸಲು ಮೊದಲು ಯೋಗ ಮಾಡುವುದನ್ನು ಪ್ರಾರಂಭಿಸಬೇಕು. ಉತ್ತಮ ಆರೋಗ್ಯ ನಮ್ಮದಾಗಬೇಕಾದರೇ ನೀವು ಪ್ರತಿನಿತ್ಯ ಮಾಡಲೇಬೇಕಾದ ಯೋಗಾಸನಗಳಿವು..
ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಕೇವಲ ಒಂದು ದಿನ ಯೋಗ ಮಾಡುವುದರಿಂದ ಪ್ರಯೋಜನವಿಲ್ಲ. ಪ್ರತಿನಿತ್ಯ ಈ ಅಭ್ಯಾಸ ಮಾಡುವುದರಿಂದ ಯಾವುದೇ ಔಷಧಿ ಪಡೆಯದೇ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದಾಗಿದೆ. ಹೀಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಈ ನಿಯಮ ಪಾಲಿಸಲು ಮೊದಲು ಯೋಗ ಮಾಡುವುದನ್ನು ಪ್ರಾರಂಭಿಸಬೇಕು. ಉತ್ತಮ ಆರೋಗ್ಯ ನಮ್ಮದಾಗಬೇಕಾದರೇ ನೀವು ಪ್ರತಿನಿತ್ಯ ಮಾಡಲೇಬೇಕಾದ ಯೋಗಾಸನಗಳಿವು..
ಉತ್ತಮ ಆರೋಗ್ಯ ನಮ್ಮದಾಗಬೇಕಾದರೇ ನೀವು ಪ್ರತಿನಿತ್ಯ ಮಾಡಲೇಬೇಕಾದ ಯೋಗಾಸನಗಳಿವು
ತಾಡಾಸನ ಮಾಡುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯದ ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ
ಉತ್ತಿಥ ಹಸ್ತಪಾದಾಸನ ಈ ಯೋಗಾಸನದಲ್ಲಿ ಸಮತೋಲನ ಏಕಾಗ್ರತೆ ಕಾಯ್ದುಕೊಳ್ಳಲು ನೆರೆವಾಗುತ್ತದೆ
ಸೂರ್ಯ ನಮಸ್ಕಾರ : ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹ ಫಿಟ್ ಆಗಿರಲು ಉಪಯುಕ್ತವಾಗಿದೆ
ತ್ರಿಕೋನಾಸನ: ಇದನ್ನು ಮಾಡುವುದರಿಂದ ಮೊಣಕಾಲು,ತೊಡೆ,ಕಾಲುಗಳು, ಪಾದಗಳು, ತೋಳುಗಳ ಎದೆ ಆರೋಗ್ಯ ವೃದ್ದಿಸುತ್ತದೆ ಹಾಗೆಯೇ ಸರಗವಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ವೀರಭದ್ರಾಸನ ಇದು ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ ಆಗಾಗ ಭುಜದಲ್ಲಿ ನೋವು ಕಾಣಿಸಿಕೊಳ್ಳುವ ಸಮಸ್ಯೆಗೆ ಇದು ಉತ್ತಮ ಯೋಗಾಸನವಾಗಿದೆ
ಭುಜಂಗಾಸನ ಸೊಂಟದ ಹಾಗೂ ಬೆನ್ನು ನೋವಿನ ಸಮಸ್ಯೆ ಇದು ಸೂಕ್ತ ಆಸನಾವಾಗಿದೆ
ಶವಾಸನದ ಪ್ರಯೋಜನಗಳು: ತಲೆನೋವು, ನಿದ್ರಾಹೀನತೆ ಪರಿಹಾರ ನೀಡುತ್ತದೆ ಹಾಗೆಯೇ ಒತ್ತಡ, ಆತಂಕ ರಕ್ತದೊತ್ತಡ ನಿವಾರಣೆ ಮಾಡುತ್ತದೆ