ಇಂದಿನಿಂದ ಈ ಐದು ರಾಶಿಯವರಿಗೆ ಆರಂಭವಾಗಲಿದೆ ಅಚ್ಚೇ ದಿನ್
ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಚಲನೆಯ ದೃಷ್ಟಿಯಿಂದ ಫೆಬ್ರವರಿ ತಿಂಗಳು ತುಂಬಾ ವಿಶೇಷವಾಗಿದೆ. ಇಂದು ಫೆಬ್ರವರಿ 07ರಂದು ಗ್ರಹಗಳ ರಾಜಕುಮಾರ ಬುಧನು ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಈ ಸಮಯದಲ್ಲಿ ಬುಧನು ಕೆಲವರ ಜೀವನದಲ್ಲಿ ಅಚ್ಚೇ ದಿನ್ ಅನ್ನು ತರಲಿದ್ದಾನೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಇಂದು ಫೆಬ್ರವರಿ 07ರಂದು ಬೆಳಿಗ್ಗೆ 07:11ಕ್ಕೆ ಗ್ರಹಗಳ ರಾಜಕುಮಾರ ಬುಧನು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರಿಗೆ ಅವರ ಕಷ್ಟದ ದಿನಗಳು ಕಳೆದು, ಅಚ್ಚೇ ದಿನ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...
ವೃಷಭ ರಾಶಿ:
ವೈದಿಕ ಜ್ಯೋತಿಷ್ಯದ ಪ್ರಕಾರ, ಬುಧನ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಮಂಗಳಕರ ಫಲಗಳನ್ನು ತರಲಿದ್ದಾನೆ. ಈ ಸಮಯದಲ್ಲಿ ನೀವು ಶುಭ ಸುದ್ದಿಯೊಂದನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ಬಂಪರ್ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯೂ ಇದೆ.
ಮಿಥುನ ರಾಶಿ:
ಶನಿಯ ರಾಶಿಯಲ್ಲಿ ಬುಧನ ಸಂಕ್ರಮಣ ಮಿಥುನ ರಾಶಿಯವರ ದಾಂಪತ್ಯ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರ ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗಲಿದ್ದು, ವ್ಯಾಪಾರ-ವ್ಯವಹಾರದಲ್ಲಿಯೂ ಭರ್ಜರಿ ಲಾಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ- ಕೇತು ಕೃಪೆಯಿಂದ ಶ್ರೀಮಂತರಾಗುತ್ತಾರೆ ಈ ರಾಶಿಯವರು
ಕನ್ಯಾ ರಾಶಿ:
ಬುಧ ಸಂಚಾರವು ಕನ್ಯಾ ರಾಶಿಯವರ ಆರ್ಥಿಕ ಮೂಲವನ್ನು ವೃದ್ಧಿಸಲಿದೆ. ಕಾನೂನು ವ್ಯವಹಾರಗಳು ನಿಮ್ಮ ಪರವಾಗಿ ಇತ್ಯರ್ಥಗೊಳ್ಳಲಿವೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಮಧುರವಾಗಿರಲಿದೆ.
ಮಕರ ರಾಶಿ:
ಮಕರ ರಾಶಿಯಲ್ಲೇ ಬುಧ ಪ್ರವೇಶಿಸಿರುವುದರಿಂದ ಇದರ ಗರಿಷ್ಠ ಪರಿಣಾಮ ನಿಮ್ಮ ಮೇಲೆಯೇ ಕಂಡು ಬರಲಿದೆ. ಈ ಸಮಯದಲ್ಲಿ ನೀವು ನಿಮ್ಮ ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಹಣಕಾಸಿನ ವಿಷಯದಲ್ಲಿಯೂ ಸಮಯ ನಿಮ್ಮ ಪರವಾಗಿರಲಿದೆ.
ಇದನ್ನೂ ಓದಿ- ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ
ಮೀನ ರಾಶಿ:
ಬುಧ ರಾಶಿ ಪರಿವರ್ತನೆಯಿಂದ ಮೀನ ರಾಶಿಯವರ ಜೀವನದಲ್ಲಿಯೂ ಅಚ್ಚೇ ದಿನ್ ಆರಂಭವಾಗಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇದು ಉತ್ತಮ ಸಮಯದ. ಹಣಕಾಸಿನ ಸ್ಥಿತಿಯೂ ಸುಧಾರಿಸಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.