ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ

Malavya Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೀನ ರಾಶಿಯಲ್ಲಿ ಶುಕ್ರನ ಗೋಚಾರದಿಂದ ಸೃಷ್ಟಿಯಾಗುತ್ತಿರುವ ಮಾಲವ್ಯ ಮಹಾಪುರುಷ ರಾಜಯೋಗದಿಂದ ಮೂರು ರಾಶಿಯವರಿಗೆ ಖಜಾನೆ ತುಂಬಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Feb 1, 2023, 07:24 AM IST
  • ಫೆಬ್ರವರಿ 15, 2023 ರಂದು ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ
  • ಮೀನ ರಾಶಿಯಲ್ಲಿ ಶುಕ್ರನ ಪ್ರವೇಶದಿಂದ ಮಾಲವ್ಯ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದೆ.
  • ಈ ಯೋಗವು ಕೆಲವು ರಾಶಿಯವರಿಗೆ ಬಹಳ ಪ್ರಯೋಜನಕಾರಿ ಆಗಿದೆ
ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ  title=
Malavya Mahapurusha Rajayoga

Malavya Rajayoga: ವೈದಿಕ ಜ್ಯೋತಿಷ್ಯದ ಪ್ರಕಾರ, ಫೆಬ್ರವರಿ 15, 2023 ರಂದು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯಕಾರಕನಾದ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಮಾಲವ್ಯ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದ್ದು, ಮೂರು ರಾಶಿಯ ಜನರಗೆ ಅಪಾರ ಸಂಪತ್ತನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ:
ಮಿಥುನ ರಾಶಿ:

ಮೀನ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಮಾಲವ್ಯ ಮಹಾಪುರುಷ ರಾಜಯೋಗದ ಪರಿಣಾಮವವಾಗಿ ಈ ರಾಶಿಯವರಿಗೆ ಅಪಾರ ಧನ ಪ್ರಾಪ್ತಿಯಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವಾಗುವ ಸಾಧ್ಯತೆ ಇದ್ದು, ಆರ್ಥಿಕವಾಗಿ ಬಲಗೊಳ್ಳುವಿರಿ.

ಇದನ್ನೂ ಓದಿ- Shani Asta 2023: ಅಸ್ತನಾಗಿ ಈ ರಾಶಿಯವರ ಭಾಗ್ಯೋದಯ ಕರುಣಿಸಲಿದ್ದಾನೆ ಶನಿ ದೇವ

ಕನ್ಯಾ ರಾಶಿ:
ಶುಕ್ರ ರಾಶಿ ಪರಿವರ್ತನೆಯಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ವಿತ್ತೀಯ ಲಾಭದೊಂದಿಗೆ ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಲಿದೆ. ವಿದೇಶ ಪ್ರವಾಸಕ್ಕೆ ಹೋಗುವ ನಿಮ್ಮ ಬಹುದಿನದ ಕನಸು ನನಸಾಗಲಿದೆ.

ಇದನ್ನೂ ಓದಿ- Guru Asta 2023: ಗುರು ಅಸ್ತದ ಪರಿಣಾಮ - ಈ ಮೂರು ರಾಶಿಯವರಿಗೆ ಭಾರೀ ಸಂಕಷ್ಟ

ಧನು ರಾಶಿ:
ಮಾಲವ್ಯ ಮಹಾಪುರುಷ ರಾಜಯೋಗವು ಧನು ರಾಶಿಯವರ ಜೀವನವನ್ನು ಬೆಳಗಿಸಲಿದೆ. ಈ ಸಮಯದಲ್ಲಿ ಹೊಸ ಮನೆ, ವಾಹನ ಖರೀದಿಸುವ ಯೋಗವೂ ಇದೆ. ರಾಜಕೀಯ ರಂಗದಲ್ಲಿರುವವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಸುವರ್ಣ ಸಮಯ ಎಂದೇ ಹೇಳಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News