ಚಾಣಕ್ಯ ನೀತಿ: ವಿಷಕಾರಿ ಹಾವಿಗಿಂತಲೂ ಅಪಾಯಕಾರಿಯಂತೆ ಇಂತಹ ಜನರು
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಒಂದು ಪದ್ಯವನ್ನು ಬರೆದಿದ್ದಾರೆ, ಅದರಲ್ಲಿ ಮೋಸಗಾರನನ್ನು ಹಾವಿಗೆ ಹೋಲಿಸಲಾಗಿದೆ. ದುಷ್ಟ, ಕುತಂತ್ರ ಮತ್ತು ಮೋಸಗಾರ ವ್ಯಕ್ತಿಗಿಂತ ವಿಷಪೂರಿತ ಹಾವೇ ಉತ್ತಮ ಎಂದಿದ್ದಾರೆ.
ಚಾಣಕ್ಯ ನೀತಿ: ಮನೆಯಲ್ಲಿ ಹಿರಿಯರು ದುಷ್ಟರಿಂದ ದೂರವಿರುವಂತೆ ಕಿರಿಯರಿಗೆ ಸಲಹೆ ನೀಡುವುದನ್ನು ಸಾಮಾನ್ಯವಾಗಿ ಕೇಳಿಯೇ ಇರುತ್ತೇವೆ. ಆಚಾರ್ಯ ಚಾಣಕ್ಯರು ಸಹ ತಮ್ಮ ನೀತಿ ಶಾಸ್ತ್ರದಲ್ಲಿ ಕೆಲವು ಜನರಿಂದ ದೂರ ಉಳಿಯುವಂತೆ ಸಲಹೆ ನೀಡಿದ್ದಾರೆ. ಕೆಲವು ಜನರನ್ನು ವಿಷಪೂರಿತ ಹಾವಿಗಿಂತಲೂ ಅಪಾಯಕಾರಿ ಎಂದು ಬಣ್ಣಿಸಿರುವ ಅವರು ಕೆಲವು ಜನರು ವಿಷಕಾರಿ ಹಾವುಗಳಿಗಿಂತ ಹೆಚ್ಚು ಅಪಾಯಕಾರಿ ಮತ್ತು ಬಹಳಷ್ಟು ಹಾನಿಯನ್ನುಂಟುಮಾಡುತ್ತಾರೆ ಎಂದಿದ್ದಾರೆ.
ಚಾಣಕ್ಯ ನೀತಿಯು ತೊಂದರೆಗಳಿಂದ ಪಾರಾಗುವುದು ಮತ್ತು ಉತ್ತಮ ಜೀವನವನ್ನು ಹೇಗೆ ಪಡೆಯುವುದು ಎಂಬ ಬಗ್ಗೆ ತಿಳಿಸುತ್ತದೆ. ಜೀವನದಲ್ಲಿ ಕಷ್ಟ-ಸುಖ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಆಗಬೇಕು. ಕಷ್ಟದ ಸಮಯದಲ್ಲಿ ಜನರ ಅಗತ್ಯ ಬೇಕೇ ಬೇಕು ಎಂಬುದನ್ನು ಯಾರೂ ತಳ್ಳಿಹಾಕುವಂತಿಲ್ಲ. ಆದರೆ, ಕೆಲವೊಮ್ಮೆ ಜೊತೆಗಿರುವ ಜನರೇ ಜೀವನದಲ್ಲಿ ಅನೇಕ ತೊಂದರೆಗಳನ್ನು ತಂದೊಡ್ಡುತ್ತಾರೆ. ಇದು ಜನರ ಗುಣ-ಸ್ವಭಾವವನ್ನು ಅವಲಂಬಿಸಿರುತ್ತದೆ. ಹಾಗಾಗಿ, ಸ್ನೇಹಿತರನ್ನು ಆಯ್ಕೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ ಎದು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ- ಗೊತ್ತಿಲ್ಲದೆ ಈ ತಪ್ಪುಗಳನ್ನು ಮಾಡಿದರೂ ಬಿಡದೆ ಕಾಡುತ್ತಾರೆ ಗುರು, ಶುಕ್ರ, ಶನಿ
ಇಂತಹ ಜನರು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸುತ್ತಾರೆ :
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಒಂದು ಪದ್ಯವನ್ನು ಬರೆದಿದ್ದಾರೆ. ಅದರಲ್ಲಿ ಮೋಸಗಾರನನ್ನು ಹಾವಿಗೆ ಹೋಲಿಸಿರುವ ಅವರು ದುಷ್ಟ, ಕುತಂತ್ರ ಮತ್ತು ಮೋಸಗಾರ ವ್ಯಕ್ತಿಗಿಂತ ವಿಷಪೂರಿತ ಹಾವೇ ಉತ್ತಮ ಎಂದಿದ್ದಾರೆ.
'ದುರ್ಜನಸ್ಯ ಚ ಸರ್ಪಸ್ಯ ವರಂ ಸರ್ಪೋ ನ ದುರ್ಜನಃ.
ಸರ್ಪೋ ದಷ್ಟಿ ಕಾಲೇ ತು ದುರ್ಜನಸ್ತು ಪದೇ ಪದೇ।।
ವೃಶ್ಚಿಸಸ್ಯ ವಿಷಂ ಪುಚೇ ಸರ್ವಾಂಗೇ ದುರ್ಜನೇ ವಿಷಮ್ ।।
ಹಾವಿಗೆ ಹಲ್ಲುಗಳಲ್ಲಿ ಮಾತ್ರ ವಿಷ ಇರುತ್ತದೆ. ವೃಶ್ಚಿಕ ಎಂದರೆ ಚೇಳಿನ ಬಾಲದಲ್ಲಿ ವಿಷವಿರುತ್ತದೆ. ಆದರೆ, ದುಷ್ಟ ಜನರಿಗೆ ಇಡೀ ದೇಹ ಮತ್ತು ಮನಸ್ಸು ವಿಷದಿಂದ ತುಂಬಿರುತ್ತದೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.
ಇದನ್ನೂ ಓದಿ- 24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ 5 ರಾಶಿಯವರಿಗೆ ಮಹಾ ಯೋಗ ..!
ಈ ಶ್ಲೋಕದಲ್ಲಿ, ಆಚಾರ್ಯ ಚಾಣಕ್ಯರು ದುರ್ಜನ (ದುಷ್ಟ, ಕುತಂತ್ರ ಮತ್ತು ಮೋಸಗಾರ) ಒಬ್ಬ ವ್ಯಕ್ತಿಗಿಂತ, ಸ್ವಭಾವದಲ್ಲಿ ವಿಷಪೂರಿತವಾಗಿರುವ ಹಾವು ಉತ್ತಮ ಎಂದಿದ್ದಾರೆ. ಏಕೆಂದರೆ ಹಾವು ತನಗೆ ತೊಂದರೆ ಆದಾಗ ಮಾತ್ರ ಹಾನಿ ಮಾಡುತ್ತದೆ, ಆದರೆ ದುಷ್ಟರ ಸಹವಾಸವು ನಿಮ್ಮನ್ನು ಯಾವಾಗಲೂ ಅಪಾಯಕ್ಕೆ ಸಿಲುಕಿಸುತ್ತದೆ. ಅಂತಹ ಮನುಷ್ಯನಿಗೆ ನೀವು ಎಷ್ಟೇ ಒಳ್ಳೆಯದನ್ನು ಮಾಡಿದರೂ ಅವರು ನಿಮಗೆ ಸದಾ ಕೇಡನ್ನೇ ಬಯಸುತ್ತಾರೆ. ಅಂತಹ ಜನರು ವಿಷಕಾರಿ ಹಾವುಗಳಿಗಿಂತ ಹೆಚ್ಚು ಅಪಾಯಕಾರಿ. ಅವರು ಮುಂದೆ ಬೆಣ್ಣೆಯಂತೆ ನಯವಾಗಿ ಮಾತಾನಾಡಿ ನಂಬಿಸುತ್ತಾರೆ, ಬೆನ್ನ ಹಿಂದೆ ನಿಮಗೆ ಗೊತ್ತಿಲ್ಲದಂತೆ ಚೂರಿ ಹಾಕುತ್ತಾರೆ. ಅಂತಹ ಸ್ವಭಾವದವರಿಂದ ಬಹಳ ಎಚ್ಚರದಿಂದಿರಬೇಕು ಎಂದಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ