24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ ರಾಶಿ ಬದಲಾವಣೆ, ಈ 5 ರಾಶಿಯವರಿಗೆ ಮಹಾ ಯೋಗ ..!

ಶನಿ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣವು ಕ್ರಮವಾಗಿ ಜುಲೈ 12 ಮತ್ತು ಜುಲೈ 13 ರಂದು ಸಂಭವಿಸಲಿದೆ. ಶನಿ ಮತ್ತು ಶುಕ್ರ ರಾಶಿಯ ಬದಲಾವಣೆಯು ಕೇವಲ 24 ಗಂಟೆಗಳಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.

Written by - Ranjitha R K | Last Updated : Jul 8, 2022, 09:06 AM IST
  • ಜುಲೈ 12 ಮತ್ತು ಜುಲೈ 13 ರಂದು ಶುಕ್ರ ಶನಿ ರಾಶಿ ಬದಲಾವಣೆ
  • ಕೆಲವು ರಾಶಿಯವರ ಮೇಲೆ ಉತ್ತಮ ಪರಿಣಾಮ
  • ಈ ರಾಶಿಯವರ ಪಾಲಿಗೆ ಅದೃಷ್ಟ ಕರುಣಿಸಲಿದ್ದಾನೆ ಶುಕ್ರ
24 ಗಂಟೆಗಳ ಅಂತರದಲ್ಲಿ 2 ಪ್ರಮುಖ ಗ್ರಹಗಳ  ರಾಶಿ ಬದಲಾವಣೆ, ಈ 5 ರಾಶಿಯವರಿಗೆ  ಮಹಾ ಯೋಗ ..!  title=
Shani Shukra Transit (file photo)

ಬೆಂಗಳೂರು : ಶನಿ ಮತ್ತು ಶುಕ್ರ ಸಂಚಾರವು ವ್ಯಕ್ತಿಯ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಶನಿ ಸಂಕ್ರಮಣ ಮತ್ತು ಶುಕ್ರ ಸಂಕ್ರಮಣವು ಕ್ರಮವಾಗಿ ಜುಲೈ 12 ಮತ್ತು ಜುಲೈ 13 ರಂದು ಸಂಭವಿಸಲಿದೆ. ಕೇವಲ 24 ಗಂಟೆಗಳ ಅಂತರದಲ್ಲಿ ಶನಿ ಮತ್ತು ಶುಕ್ರ ರಾಶಿಯ  ಪರಿವರ್ತನೆಯಾಗಲಿದ್ದು, ದೊಡ್ಡ ಬದಲಾವಣೆಯನ್ನು ತರುತ್ತದೆ. ಶನಿಯು ವಕ್ರಿಯಾಗಿದ್ದು, ಹಿಮ್ಮುಖ ಚಲನೆ ಮೂಲಕವೇ ರಾಶಿಯನ್ನು ಬದಲಾಯಿಸುತ್ತಾನೆ.  ಜುಲೈ 12 ರಂದು, ಶನಿ ಕುಂಭ ರಾಶಿಯಿಂದ ಮಕರ ರಾಶಿಗೆ ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾನೆ. ಜುಲೈ 13 ರಂದು ಶುಕ್ರನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಶುಕ್ರ ಮತ್ತು ಶನಿಯ ಸ್ಥಾನದಲ್ಲಾಗುವ ಬದಲಾವಣೆಗಳು ಕೆಲವು ರಾಶಿಯವರ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. 

ಈ ರಾಶಿಯವರ ಪಾಲಿಗೆ ಅದೃಷ್ಟ ಕರುಣಿಸಲಿದ್ದಾನೆ ಶುಕ್ರ: 
ಮಿಥುನ ರಾಶಿಯಲ್ಲಿ ಶುಕ್ರನ ಸಂಕ್ರಮಣವು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಶುಕ್ರವು  ಆಗಸ್ಟ್ 7 ರವರೆಗೆ ಮಿಥುನ ರಾಶಿಯಲ್ಲಿ ಇರುತ್ತಾನೆ. ಈ ಸಮಯದಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ತರಲಿದ್ದಾನೆ. 

ಇದನ್ನೂ ಓದಿ : ಜುಲೈ 16 ರಿಂದ ಈ ರಾಶಿಯವರನ್ನು ಕಷ್ಟದ ಸುಲಿಗೆ ನೂಕಲಿದ್ದಾನೆ ಸೂರ್ಯ

ಸಿಂಹ : ಶುಕ್ರನ ಸಂಕ್ರಮಣವು ಸಿಂಹ ರಾಶಿಯವರಿಗೆ ಬಲವಾದ ಆರ್ಥಿಕ ಲಾಭವನ್ನು ನೀಡುತ್ತದೆ. ಹಣ ಗಳಿಸಲು ಈ ರಾಶಿಯವರಿಗೆ ಅನೇಕ ಅವಕಾಶಗಳು ಸಿಗಲಿದೆ. ವೃತ್ತಿಗೆ ಸಂಬಂಧಿಸಿದಂತೆ ಪ್ರಯಾಣ ಯೋಗ ಎದುರಾಗಬಹುದು. ವ್ಯಾಪಾರಿಗಳಿಗೆ ಲಾಭವಾಗಲಿದೆ. 

ತುಲಾ: ತುಲಾ ರಾಶಿಯ ಅಧಿಪತಿ ಶುಕ್ರ. ಜುಲೈ 13 ರಂದು ಮಿಥುನ ರಾಶಿಯಲ್ಲಿ ಶುಕ್ರನ ಪ್ರವೇಶವು ತುಲಾ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿಯನ್ನು ನೀಡುತ್ತದೆ. ಹೊಸ ಉದ್ಯೋಗವನ್ನು ಪಡೆಯುವ ಬಲವಾದ ಅವಕಾಶಗಳಿವೆ. ಆದಾಯದಲ್ಲಿ ದೊಡ್ಡ ಮಟ್ಟದ ಹೆಚ್ಚಳವಾಗಬಹುದು. ಆಧ್ಯಾತ್ಮದ ಕಡೆಗೆ ಒಲವು ಹೆಚ್ಚಾಗುವುದು. ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಬಹುದು. 

ಇದನ್ನೂ ಓದಿ : Sun Transit : ವೃಷಭ ರಾಶಿಯಲ್ಲಿ ಸೂರ್ಯನ ಸಂಚಾರ : ಇವರಿಗೆ ಉದ್ಯೋಗದಲ್ಲಿ ಬಡ್ತಿ, ಗೌರವ!

ಕುಂಭ: ಶುಕ್ರನ ರಾಶಿಯ ಬದಲಾವಣೆಯು ಕುಂಭ ರಾಶಿಯವರಿಗೆ ಧನ ಲಾಭದ ಜೊತೆಗೆ ಬಹಳಷ್ಟು ಸಂತೋಷವನ್ನು ನೀಡುತ್ತದೆ. ಆದಾಯ ಹೆಚ್ಚಲಿದೆ. ಹೂಡಿಕೆಯಿಂದ ಲಾಭವನ್ನು ಪಡೆಯಬಹುದು. ವ್ಯಾಪಾರ ವೃದ್ಧಿಯಾಗಲಿದೆ. ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಿಗಲಿದೆ. ಸೃಜನಶೀಲತೆ ಉತ್ತುಂಗದಲ್ಲಿರುತ್ತದೆ. ಒಟ್ಟಿನಲ್ಲಿ ಈ ಬಾರಿ ವರದಾನದಂತೆ ಇರಲಿದೆ.  

ಶನಿ ಸಂಚಾರವು ಈ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ  :
ಮತ್ತೊಂದೆಡೆ, ಹಿಮ್ಮುಖ ಸ್ಥಿತಿಯಲ್ಲಿ ಮಕರ ರಾಶಿ ಪ್ರವೇಶಿಸಲಿರುವ  ಶನಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಎರಡೂ ರಾಶಿಯವರು ಶನಿ ಧೈಯ್ಯಾದಿಂದ ಮುಕ್ತಿ ಪಡೆಯುತ್ತಾರೆ. ಈ ಎರಡು ರಾದ್ಸಹಿಯವರಿಗೆ ತಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇದ್ದಕ್ಕಿದ್ದಂತೆ ಹಣದ ಅಹರಿವು ಹೆಚ್ಚಾಗುತ್ತದೆ. ಮಾನಸಿಕ ಒತ್ತಡದಿಂದ ಮುಕ್ತಿ  ಸಿಗಲಿದೆ. 

 

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News