Shani Gochar In January 2022 : ಹಿಂದೂ ಧರ್ಮದಲ್ಲಿ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಈ ಎಲ್ಲಾ ಗ್ರಹಗಳಲ್ಲಿ, ಶನಿಯು ನಿಧಾನವಾಗಿ ಚಲಿಸುವ ಗ್ರಹ ಎಂದು ಹೇಳಲಾಗುತ್ತದೆ. ಶನಿಯು ಒಂದು ರಾಶಿಯಿಂದ ಹೊರ ಬಂದ ಮೇಲೆ ಮತ್ತೆ ಅದೇ ರಾಶಿಯನ್ನು ಪ್ರವೇಶಿಸಲು 30 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಲೆಕ್ಕಾಚಾರದ ಪ್ರಕಾರ ಇದೀಗ 30 ವರ್ಷದ ನಂತರ   ಜನವರಿ 17, 2023 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಇನ್ನು 2023ರಲ್ಲಿ ಕುಂಭ ರಾಶಿ ಪ್ರವೇಶಿಸುವ ಶನಿದೇವ ಹಿಮ್ಮುಖವಾಗಿಯೇ  ಸಾಗುತ್ತಾನೆ. ಕುಂಭ ರಾಶಿಯನ್ನು ಶನಿಯ ಮೂಲ ರಾಶಿ ಎಂದು ಕೂಡಾ ಹೇಳಲಾಗುತ್ತದೆ. ಶನಿಯನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಶನಿಯ ವಕ್ರ ದೃಷ್ಟಿ ಯಾವುದೇ ರಾಶಿಯ ಮೇಲೆ ಬಿದ್ದರೂ, ಆ ರಾಶಿಯವರು  ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜನವರಿ 17 ರಂದು ಶನಿ ಸಂಕ್ರಮಣದ ನಂತರ, ಕೆಲವೊಂದು ರಾಶಿಯವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. 


ಇದನ್ನೂ ಓದಿ : ಹೊಸ ವರ್ಷದ ಆರಂಭದಿಂದಲೇ ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ಮಹಾತ್ಮ


ಈ ರಾಶಿಯವರಿಗೆ ಆರಂಭವಾಗುವುದು ಶನಿ ಸಾಡೇಸಾತಿ :  
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಗ್ರಹವು 30 ವರ್ಷಗಳ ನಂತರ ಕುಂಭ ರಾಶಿಯನ್ನು ಪ್ರವೇಶಿಸಲಿದೆ. ಶನಿಯು ಈ ರಾಶಿಗೆ ಪ್ರವೇಶಿಸಿದ ಕೂಡಲೇ ಕುಂಭ, ಮಕರ, ಮೀನ ರಾಶಿಗಳಲ್ಲಿ ಶನಿಯ ಸಾಡೇಸಾತಿ  ಆರಂಭವಾಗುತ್ತದೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರ ಜಾತಕದಲ್ಲಿ ಎರಡೂವರೆ  ವರ್ಷದ ಶನಿ ದೆಸೆ ಆರಂಭವಾಗಲಿದೆ. 


ಈ ರಾಶಿಯವರಿಗೆ ಶನಿ ಗೋಚರದಿಂದ ಹಾನಿಯಾಗುವುದು : 
2023ರಲ್ಲಿ, ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಕುಂಭ ರಾಶಿ ಪ್ರವೇಶದೊಂದಿಗೆ ಕರ್ಕ ಮತ್ತು ವೃಶ್ಚಿಕ ರಾಶಿಯಲ್ಲಿ ಶನಿ ಧೈಯ್ಯಾ ಅಥವಾ ಎರಡೂವರೆ ವರ್ಷದ ಶನಿ ದೆಸೆ ಆರಂಭವಾಗಲಿದೆ. ಈ ಸಮಯದಲ್ಲಿ, ಈ ರಾಶಿಯವರು ಹಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ರಾಶಿಯವರು ಆರ್ಥಿಕ, ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸಬೇಕಾಗಬಹುದು.  ಇವರ ಮನೆಯ ಸಂತೋಷ ಮತ್ತು ಶಾಂತಿ ಭಂಗವಾಗಬಹುದು.  


ಇದನ್ನೂ ಓದಿ : Sun Transit 2022: ವೃಶ್ಚಿಕ ರಾಶಿಗೆ ಸೂರ್ಯನ ಪ್ರವೇಶ- ನಿಮ್ಮ ಪ್ರಗತಿ, ಆರ್ಥಿಕ ಸ್ಥಿತಿಯ ಮೇಲೆ ಏನು ಪರಿಣಾಮ ತಿಳಿಯಿರಿ


ಮಾತ್ರವಲ್ಲ ಈ ಮೂರೂ ರಾಶಿಯವರು ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಆದಾಯ ಕಡಿಮೆಯಾಗಬಹುದು. ಆರೋಗ್ಯವೂ ಹಾಳಾಗಬಹುದು. ಹಾಗಾಗಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.