ನವದೆಹಲಿ: ಹಿಂದೂ ಪಂಚಾಂಗದ  ಪ್ರಕಾರ, ಪ್ರತಿವರ್ಷ ವೈಶಾಖ ತಿಂಗಳ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅಕ್ಷಯ ತೃತೀಯ (Akshaya Tritiya) ಎಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ, ಅಕ್ಷಯ ತೃತೀಯವನ್ನು ಅತ್ಯಂತ ಶುಭ ಮತ್ತು ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು. ಈ ವರ್ಷ ಮೇ 14ರ ಶುಕ್ರವಾರ  ಅಕ್ಷಯ ತೃತೀಯ ವಿಶೇಷ ದಿನವಾಗಿದೆ. . ಈ ದಿನ ಚಿನ್ನ (Gold) ಖರೀದಿ ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

ಅಕ್ಷಯ ತೃತೀಯದಂದು ಚಿನ್ನ ಏಕೆ ಖರೀದಿಸಬೇಕು?
ಅಕ್ಷಯ ತೃತೀಯ (Akshaya Tritiya) ಅತ್ಯಂತ ಶುಭ ಎಂದು ಪರಿಭಾವಿಸಲಾಗಿದೆ. ಈ ದಿನ ಯಾವುದೇ ಲೋಹ ಖರೀದಿಸಿದರೂ, ಅದು ಪುನರಾವರ್ತನೆ ಆಗುತ್ತದೆ ಎಂಬುದು ನಂಬಿಕೆ.  ಹಾಗಾಗಿ ಈ ದಿನ ಚಿನ್ನವನ್ನು (gold) ಖರೀದಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ ಖರೀದಿಸಿದರೆ, ಸುಖ ಸಮೃದ್ಧಿ ಉಕ್ಕಿ ಹರಿಯುತ್ತದೆ ಎನ್ನುವ ನಂಬಿಕೆ ಇದೆ.. ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ದಿನದಂದು ಅಬುಜಾ ಮುಹೂರ್ತ ಯೋಗವಿದೆ, ಇದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಈ ದಿನದಂದು ಯಾವುದೇ ಶುಭ ಕೆಲಸ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸಬಹುದು.  ಇದಲ್ಲದೆ ಜನರು ಈ ದಿನ ಬೆಳ್ಳಿ (Silver), ಇತರ ಪಾತ್ರೆಗಳು ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಹ ಖರೀದಿಸುತ್ತಾರೆ.


ಇದನ್ನೂ ಓದಿ : Ram Navami 2021: ಈ ಮಂತ್ರಗಳನ್ನು ಜಪಿಸಿ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ


ಅಕ್ಷಯ ತೃತೀಯ ದಿನದಂದು ದಾನ ಯಾಕೆ ಮಾಡಬೇಕು.?
ಧರ್ಮಗ್ರಂಥಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು ದಾನ (Donate) ಮಾಡಬೇಕು. ಸಂಪತ್ತಿನ ದಾನ ಮಾಡುವ ಮೂಲಕ  ಸಂಪತ್ತು ಹೆಚ್ಚುತ್ತದೆ ಎಂಬುದು ನಂಬಿಕೆ.  ಕಥೆಯ ಪ್ರಕಾರ,  ಅಕ್ಷಯ ತೃತೀಯದಂದು ಕುಬೇರನಿಗೆ ಶಿವನ (Lord Shiva) ಆಶೀರ್ವಾದ ಲಭಿಸಿತು ಎಂದು ಹೇಳಲಾಗಿದೆ. ಇದೇ  ದಿನದಂದು ಶಿವನು ಸಹ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ (Godess lakshmi) ಆಶೀರ್ವಾದ ಮಾಡಿದರು ಎಂದು ನಂಬಲಾಗುತ್ತದೆ. ಅಕ್ಷಯ ತೃತೀಯಾದಂದು ಮಾಡಿದ ದಾನ ಶುಭ ಎಂದು ಪರಿಗಣಿಸಲಾಗುತ್ತದೆ.  ಈ ದಿನ ಮಾಡಿದ ಕಾರ್ಯಗಳೆಲ್ಲವೂ ಪುನರಾವರ್ತನೆ ಆಗುತ್ತದೆ ಎಂದು ನಂಬುತ್ತಾರೆ. ಹಾಗಾಗಿ, ಚಿನ್ನ ಖರೀದಿ, ಸಂಪತ್ತಿನ ದಾನ  ಇತ್ಯಾದಿ ಮಾಡಲಾಗುತ್ತದೆ.  


ಅಕ್ಷಯ ತೃತೀಯ ಮುಹೂರ್ತ
ಅಕ್ಷಯ ತೃತೀಯ ದಿನಾಂಕ - 14 ಮೇ 2021 ದಿನ ಶುಕ್ರವಾರ
ಮುಹೂರ್ತ  ಆರಂಭ - ಮೇ 14 ರಂದು ಬೆಳಿಗ್ಗೆ 5:38 ಕ್ಕೆ
ಮುಹೂರ್ತ  ಅಂತ್ಯ  - 15 ಮೇ ಬೆಳಿಗ್ಗೆ 07:59 ರವರೆಗೆ.
ಈ ಸಮಯದಲ್ಲಿ ನೀವು ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ಮಾಡಬಹುದು..


ಇದನ್ನೂ ಓದಿ : Amarnath Yatra: ಈ ದಿನದಿಂದ ಆರಂಭವಾಗಲಿದೆ ಅಮರನಾಥ ಯಾತ್ರೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.