Hatti Gold Mines: 'ಏಪ್ರಿಲ್ 30 ರಂದು 'ಹಟ್ಟಿ ಚಿನ್ನದ ಗಣಿ'ಗೆ ಮರುನಾಮಕರಣ'

ಹಟ್ಟಿ ಚಿನ್ನದ ಗಣಿಗೆ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್  ಲಿಮಿಟೆಡ್' ಎಂದು ಮರುನಾಮಕರಣ

Last Updated : Apr 9, 2021, 06:52 PM IST
  • ಇದೆ ತಿಂಗಳ 30 ರಂದು ಬೆಂಗಳೂರಿನಲ್ಲಿ 'ಗಣಿ ಅದಾಲತ್' ನಡೆಯಲಿದೆ.
  • ಹಟ್ಟಿ ಚಿನ್ನದ ಗಣಿಗೆ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್ ಲಿಮಿಟೆಡ್' ಎಂದು ಮರುನಾಮಕರಣ
  • ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಣಿ
Hatti Gold Mines: 'ಏಪ್ರಿಲ್ 30 ರಂದು 'ಹಟ್ಟಿ ಚಿನ್ನದ ಗಣಿ'ಗೆ ಮರುನಾಮಕರಣ' title=

ಮಂಗಳೂರು: ಇದೆ ತಿಂಗಳ 30 ರಂದು ಬೆಂಗಳೂರಿನಲ್ಲಿ 'ಗಣಿ ಅದಾಲತ್'  ನಡೆಯಲಿದೆ. ಈ ವೇಳೆ ಹಟ್ಟಿ ಚಿನ್ನದ ಗಣಿಗೆ 'ಕರ್ನಾಟಕ ಹಟ್ಟಿ ಗೋಲ್ಡ್ ಮೈನ್ಸ್  ಲಿಮಿಟೆಡ್'(Karnataka Hatti Gold Mines Limited) ಎಂದು ಮರುನಾಮಕರಣ ಮಾಡಲಾಗುವುದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಣಿ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಚಿವ ಮುರುಗೇಶ್ ನಿರಣಿ(Murugesh Nirani), ಹಟ್ಟಿ ಚಿನ್ನದ ಗಣಿಯಲ್ಲಿ ವಾರ್ಷಿಕವಾಗಿ ಸುಮಾರು 1.7 ಟನ್ ಚಿನ್ನ ಪಡೆಯಲಾಗುತ್ತಿದ್ದು, ಗಣಿಗಾರಿಕೆ ಮಾಡಿದ ಚಿನ್ನವನ್ನು ರಾಜ್ಯ ಲಾಂಛನದೊಂದಿಗೆ, ನಾಣ್ಯಗಳ ರೂಪದಲ್ಲಿ ಮತ್ತು ಇನ್ನೊಂದೆಡೆ ರಾಜ್ಯದ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಟಂಕಿಸಿ ಮಾರಾಟ ಮಾಡಲು ಇಲಾಖೆ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : New Mining policy : 'ಈ ತಿಂಗಳ ಅಂತ್ಯದ ವೇಳೆಗೆ ಜಾರಿಯಾಗಲಿದೆ ಹೊಸ ಗಣಿಗಾರಿಕೆ ನೀತಿ'

 ಈ ತಿಂಗಳ ಅಂತ್ಯದೊಳಗೆ  ಹೊಸ ರಾಜ್ಯ ಗಣಿಗಾರಿಕೆ ನೀತಿಯನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ. 

ಸಧ್ಯ ಹೊಸ ರಾಜ್ಯ ಗಣಿಗಾರಿಕೆ ನೀತಿ(New mining policy)ಯ ಕರಡನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು, ತಜ್ಞರು ಮತ್ತು ಪತ್ರಕರ್ತರಿಗೆ ಕಳುಹಿಸಿಲಾಗುತ್ತದೆ. ಅವರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಬಹುದು ಎಂದು ಹೇಳಿದ್ದಾರೆ. 

ಇದನ್ನೂ ಓದಿ : Govind Karjol: ರಾಜ್ಯದ ಉಪಮುಖ್ಯಮಂತ್ರಿಗೆ 'ಕೊರೋನಾ ಪಾಸಿಟಿವ್'..।

ಹೊಸ ಗಣಿಗಾರಿಕೆ ನೀತಿಯಲ್ಲಿ 10 ಲಕ್ಷ ರೂ.ಗಿಂತ ಕಡಿಮೆ ವೆಚ್ಚದಲ್ಲಿ ಮನೆ(Home) ನಿರ್ಮಿಸುವ ಜನರಿಗೆ  ಸಾರಿಗೆ ವೆಚ್ಚವನ್ನು ಹೊರತುಪಡಿಸಿ ಪ್ರತಿ ಟನ್‌ಗೆ 100 ರೂ. ಕಡಿಮೆ ದರದಲ್ಲಿ ಮರಳು ನೀಡಲು ಯೋಜಿಸಲಾಗುತ್ತಿದ್ದ ಎಂದು ತಿಳಿಸಿದ್ದಾರೆ.

ಐದು ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವವರು 90 ದಿನಗಳಲ್ಲಿ ಪರವಾನಗಿ ಪಡೆಯಲು ವಕಾಶ ನೀಡಲಾಗಿದೆ ಎಂದು ತಳಿಸಿದ್ದಾರೆ.

ಇದನ್ನೂ ಓದಿ : BS Yediyurappa: 'ಸಾರಿಗೆ ಸಿಬ್ಬಂದಿಗಳೇ ಹಠಮಾರಿಗಳಾಗಬೇಡಿ, ಮುಷ್ಕರ ಕೈಬಿಡಿ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News