ಹಾಲನ್ನು ಪದೇ ಪದೇ ಬಿಸಿ ಮಾಡುವ ಅಭ್ಯಾಸ ನಿಮಗೂ ಇದೆಯೇ ? ಹಾಗಿದ್ದರೆ ತಿಳಿಯಿರಿ ಇದರ ದುಷ್ಪರಿಣಾಮ
ಹಾಲನ್ನು ದೀರ್ಘಕಾಲ ಕುದಿಸಿದ ನಂತರ ಅಥವಾ ಪದೇ ಪದೇ ಕುದಿಸುತ್ತಿದ್ದರೆ, ಹಾಲಿನಲ್ಲಿರುವ ಪೋಷಕಾಂಶಗಳು ಖಾಲಿಯಾಗುತ್ತವೆ ಎಂಬುದು ಹಲವು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ.
ನವದೆಹಲಿ : ಹಾಲಿನಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳು ಅದು ಬರುತ್ತವೆ. ಈ ಕಾರಣಕ್ಕಾಗಿಯೇ ಪ್ರತಿದಿನ ಹಾಲು ಕುಡಿಯುವಂತೆ ಸೂಚಿಸಲಾಗುತ್ತದೆ (Milk benefits). ಇದು ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ. ಹಾಲು ಕುದಿಸುವುದರಿಂದ ಅದರಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಈ ಕಾರಣದಿಂದಾಗಿ ಹಾಲನ್ನು ಕುದಿಸುತ್ತೇವೆ. ಆದರೆ ಹೆಚ್ಚಿನವರಿಗೆ ಹಾಲನ್ನು ಪದೇ ಪದೇ ಕುದಿಸುವ (Milk boiling tips) ಅಭ್ಯಾಸವಿರುತ್ತದೆ. ಈ ರೀತಿ ಪದೇ ಪದೇ ಹಾಲು ಕುದಿಸಿ ಉಪಯೋಗಿಸುವುದು ಒಳ್ಳೆಯದಲ್ಲ.
ಹಾಲು ಮತ್ತೆ ಮತ್ತೆ ಕುದಿಸುವ ದುಷ್ಪರಿಣಾಮಗಳು :
ಹಾಲನ್ನು ದೀರ್ಘಕಾಲ ಕುದಿಸಿದ ನಂತರ ಅಥವಾ ಪದೇ ಪದೇ ಕುದಿಸುತ್ತಿದ್ದರೆ, ಹಾಲಿನಲ್ಲಿರುವ ಪೋಷಕಾಂಶಗಳು ಖಾಲಿಯಾಗುತ್ತವೆ ಎಂಬುದು ಹಲವು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ (Disadvantages of milk boiling). ಹೀಗೆ ಪದೇ ಪದೇ ಕುದಿಸಿದ ಹಾಲು ಕುಡಿಯುವುದರಿಂದ ದೇಹಕ್ಕೆ ಯಾವ ಪ್ರಯೋಜನವೂ ಆಗುವುದಿಲ್ಲ.
ಇದನ್ನೂ ಓದಿ : Jaggery With Black Pepper: ಬೆಲ್ಲದ ಜೊತೆ ಕರಿಮೆಣಸು ಸೇವಿಸಿ ಈ ಸಮಸ್ಯೆಯಿಂದ ದೂರವಿರಿ
ಹಾಲು ಕುದಿಸುವ ಸರಿಯಾದ ವಿಧಾನವನ್ನು ತಿಳಿಯಿರಿ :
ಹಾಲನ್ನು ಕುದಿಸುವಾಗ, ಚಮಚದೊಂದಿಗೆ ಹಾಲನ್ನು (Milk) ಕಲಕುತ್ತಾ ಇರಿ. ಹಾಲು ಕುದಿ ಬಂದ ತಕ್ಷಣ ಗ್ಯಾಸ್ ಆಫ್ ಮಾಡಿ. ಇದರಿಂದ ಹಾಲಿನ ಪೋಷಕಾಂಶಗಳು ಖಾಲಿಯಾಗುವುದಿಲ್ಲ.
ಹಾಲು ಕುಡಿಯುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:
1.ಹಾಲು ಕುಡಿಯುವ ಮೊದಲು ಕಡಿಮೆ ಆಹಾರವನ್ನು (food) ಸೇವಿಸಿ. ಇದರಿಂದ ಹಾಲು ಕುಡಿದ ನಂತರ ಹೊಟ್ಟೆ ತುಂಬಿದಂತೆ ಆಗುವುದಿಲ್ಲ. ಅಲ್ಲದೆ, ಜೀರ್ಣಕ್ರಿಯೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
2. ಬದನೆ ಅಥವಾ ಈರುಳ್ಳಿ ತಿಂದ ನಂತರ ಎಂದಿಗೂ ಹಾಲು ಸೇವಿಸಬೇಡಿ. ಇದು ರಿಯಾಕ್ಷನ್ ಉಂಟುಮಾಡಬಹುದು.
3. ಯಾವುದೇ ಆಹಾರವನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ಹಾಲು ಸೇವಿಸಿ, ಇಲ್ಲದಿದ್ದರೆ ಅದು ಜೀರ್ಣಕ್ರಿಯೆಯಲ್ಲಿ (Digestion) ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ : Diabetes: ಈ ರೋಗವು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಅಪಾಯಕಾರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.