Jaggery With Black Pepper: ಬೆಲ್ಲದ ಜೊತೆ ಕರಿಮೆಣಸು ಸೇವಿಸಿ ಈ ಸಮಸ್ಯೆಯಿಂದ ದೂರವಿರಿ

Jaggery With Black Pepper: ಚಳಿಗಾಲದಲ್ಲಿ ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಅನೇಕ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

Written by - Yashaswini V | Last Updated : Nov 25, 2021, 01:05 PM IST
  • ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ
  • ಬೆಲ್ಲ ಮತ್ತು ಕರಿಮೆಣಸನ್ನು ಸೇವಿಸುವುದರಿಂದ ನೀವು ಅನೇಕ ರೀತಿಯ ಸೋಂಕುಗಳನ್ನು ತಪ್ಪಿಸಬಹುದು
  • ಇದು ಶೀತ ಮತ್ತು ಜ್ವರದ ಸಮಸ್ಯೆಗೆ ಪರಿಹಾರ ನೀಡುತ್ತದೆ
Jaggery With Black Pepper: ಬೆಲ್ಲದ ಜೊತೆ ಕರಿಮೆಣಸು ಸೇವಿಸಿ ಈ ಸಮಸ್ಯೆಯಿಂದ ದೂರವಿರಿ  title=
Jaggery with Black Pepper

Jaggery With Black Pepper: ಚಳಿಗಾಲದಲ್ಲಿ ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಲ್ಲದ ಜೊತೆ ಸ್ವಲ್ಪ ಕರಿಮೆಣಸು ತಿಂದರೆ ಶೀತ ಮತ್ತು ಹಲವು ರೀತಿಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಜೊತೆಗೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. 

ಬೆಲ್ಲ ಮತ್ತು ಕರಿಮೆಣಸನ್ನು ನಿಯಮಿತವಾಗಿ ಸೇವಿಸುವುದರಿಂದ ಸಿಗುವ 6 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ:
ಸೋಂಕಿನ ವಿರುದ್ಧ ರಕ್ಷಣೆ:

ಕರಿಮೆಣಸು (Black Pepper) ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ನಿಯಮಿತವಾಗಿ ಬೆಲ್ಲ ಮತ್ತು ಕರಿಮೆಣಸನ್ನು ಸೇವಿಸುವುದರಿಂದ ನೀವು ಅನೇಕ ರೀತಿಯ ಸೋಂಕುಗಳನ್ನು ತಪ್ಪಿಸಬಹುದು.

ಶೀತದ ಸಮಸ್ಯೆಯಲ್ಲಿ ಪರಿಹಾರ:
ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು ಶೀತ ಮತ್ತು ಜ್ವರದ ಸಮಸ್ಯೆಯಲ್ಲೂ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. 1 ಬೌಲ್ ಮೊಸರಿನಲ್ಲಿ ಒಂದು ಸಣ್ಣ ತುಂಡು ಬೆಲ್ಲ ಮತ್ತು 1 ಚಿಟಿಕೆ ಕರಿಮೆಣಸನ್ನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿ. ಇದು ಶೀತ ಮತ್ತು ಜ್ವರದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಇದನ್ನೂ ಓದಿ- Weight Loss: ತೂಕ ಕಡಿಮೆ ಮಾಡಲು ನೀವು ಹಾಲು ಕುಡಿಯುವುದಿಲ್ಲವೇ? ಅದರ ಅಪಾಯಕಾರಿ ಪರಿಣಾಮದ ಬಗ್ಗೆ ಗೊತ್ತಿದೆಯೇ?

ಕೀಲು ನೋವಿನಲ್ಲಿ ಪರಿಹಾರ:
ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು (Jaggery with Black Pepper) ಕೀಲು ನೋವನ್ನು ಕಡಿಮೆ ಮಾಡಲು ಸಹ ಪರಿಣಾಮಕಾರಿಯಾಗಿದೆ. ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣ ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹವನ್ನು ಬೆಚ್ಚಗಾಗಿಸುತ್ತದೆ ಮತ್ತು ಕೀಲು ನೋವಿನಿಂದ ನಿಮಗೆ ಪರಿಹಾರವನ್ನು ನೀಡುತ್ತದೆ.

ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ:
ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದರಿಂದ ನಿಮಗೆ ಹಸಿವೂ ಆಗುತ್ತದೆ. ಒಂದು ಚಮಚ ಬೆಲ್ಲದಲ್ಲಿ ಅರ್ಧ ಚಮಚ ಕರಿಮೆಣಸಿನ ಪುಡಿಯನ್ನು ಬೆರೆಸಿ ನಿತ್ಯ ಸೇವಿಸಿ. ಇದರ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. 

ಬೆನ್ನುನೋವಿನ ಸಮಸ್ಯೆಗೆ ರಾಮಬಾಣ:
ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು (Jaggery with Black Pepper Benefits) ಬೆನ್ನು ನೋವಿನ ಸಮಸ್ಯೆಯಲ್ಲಿ ಸಹ ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದಕ್ಕಾಗಿ 1 ಕಪ್ ಬಿಸಿನೀರಿನಲ್ಲಿ 1 ಚಿಟಿಕೆ ಕರಿಮೆಣಸು ಮತ್ತು 1 ಚಮಚ ಬೆಲ್ಲದ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಚಹಾದಂತೆ ಕುಡಿಯಿರಿ. ಇದು ಬೆನ್ನುನೋವಿಗೆ ಪರಿಹಾರ ನೀಡುತ್ತದೆ. 

ಇದನ್ನೂ ಓದಿ- How to increase Memory: ಮರೆವಿನ ಸಮಸ್ಯೆ ನಿವಾರಣೆಗೆ ಮನೆಕೆಲಸವೇ ಮದ್ದು!

ಮುಟ್ಟಿನ ನೋವು ನಿವಾರಣೆ:
ಕರಿಮೆಣಸು ಮತ್ತು ಬೆಲ್ಲದ ಸೇವನೆಯು ಋತುಚಕ್ರದ ಸಮಯದಲ್ಲಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ಬೆಲ್ಲ ಮತ್ತು ಕರಿಮೆಣಸಿನ ಚಹಾವನ್ನು ತಯಾರಿಸಿ ಕುಡಿಯಬಹುದು.

ಆದಾಗ್ಯೂ, ಬೆಲ್ಲ ಮತ್ತು ಕರಿಮೆಣಸನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಅದರ ಪರಿಣಾಮವು ತುಂಬಾ ಬಿಸಿಯಾಗಿರುತ್ತದೆ ಮತ್ತು ಅತಿಯಾಗಿ ಸೇವಿಸುವುದರಿಂದ ನಿಮಗೆ ಹಾನಿಯಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News