ನವದೆಹಲಿ : Aloe Vera for pimples : ಮೊಡವೆಗಳು (Pimples) ಹಾರ್ಮೋನುಗಳ ಬದಲಾವಣೆಗಳು, ಮೇದೋಗ್ರಂಥಿ, ಮಾಲಿನ್ಯ, ಇಂಫ್ಲಮೆಶನ್  ಇತ್ಯಾದಿ ಕಾರಣಗಳಿಂದ ಉಂಟಾಗಬಹುದು. ಕಾರಣ ಏನೇ ಇರಲಿ, ಮೊಡವೆ ಒಮ್ಮೆ ಬಂತೆಂದರೆ ಮುಖದ ಹೊಳಪನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ಇನ್ನು ಮೊಡವೆ ನಂತರ ಉಳಿದಿರುವ ಚರ್ಮವು ಅಷ್ಟೊಂದು  ಆರೋಗ್ಯಕರವಾಗಿರುವುದಿಲ್ಲ. ಹೀಗಾಗಿ ತ್ವಚೆ ಒಣಗಿದಂತೆ ಕಾಣಿಸುತ್ತದೆ.  ಈ ಸಮಸ್ಯೆಯಿಂದ ಮುಕ್ತಿ ನೀಡಲು ಅಲೋವೆರಾವನ್ನು (Aloe Vera for pimples )ಬಳಸಬಹುದು. ಆಲೋವೆರಾ ಮೊಡವೆ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.  


COMMERCIAL BREAK
SCROLL TO CONTINUE READING

ಅಲೋವೆರಾ ಹೇಗೆ ಕೆಲಸ ಮಾಡುತ್ತದೆ ? 
ಇದು ಇಂಫ್ಲಮೆಶನ್ ಗುಣಲಕ್ಷಣಗಳ ಹೊಂದಿದೆ. ಹಾಗಾಗಿ ಮೊಡವೆಯ ಚಿಕಿತ್ಸೆ (pimples treatment) ಬಹಳ ಪರಿಣಾಮಕಾರಿಯಾಗಿದೆ. ಅದೇ ಸಮಯದಲ್ಲಿ, ಸ್ಯಾಲಿಸಿಲಿಕ್ ಆಮ್ಲ, ಸಪೋನಿನ್‌ಗಳು, ಎನ್ಜಯಿಮ್, ಅಮೈನೋ ಆಮ್ಲಗಳು, ಮಿನರಲ್ಸ್, ವಿಟಮಿನ್  ಚರ್ಮವನ್ನು ಪೋಷಿಸುತ್ತವೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಇದು ಕಳೆದುಹೋದ ಚರ್ಮದ ಹೊಳಪನ್ನು ಮರಳಿ ತರುತ್ತವೆ.


ಇದನ್ನೂ ಓದಿ : Lemon for face: ನಿಂಬೆ ತ್ವಚೆಗೆ ಈ ಐದು ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅಡ್ಡ ಪರಿಣಾಮಗಳ ಬಗ್ಗೆಯೂ ತಿಳಿದಿರಲಿ


ಮೊಡವೆಗಳನ್ನು ತೆಗೆದುಹಾಕಲು ಅಲೋವೆರಾವನ್ನು ಬಳಸಲು ಈ  4 ವಿಧಾನಗಳನ್ನು ಬಳಸಬಹುದು.
ತಾಜಾ ಅಲೋವೆರಾ ಜೆಲ್:
ಅಲೋವೆರಾದ ತಾಜಾ ಎಲೆಯನ್ನು (Aloe Vera gel) ತೆಗೆದುಕೊಂಡು ಅದನ್ನು ಕತ್ತರಿಸಿ ಮತ್ತು ಚಮಚದ ಸಹಾಯದಿಂದ ಒಳಗಿನಿಂದ ಪಾರದರ್ಶಕ ಜೆಲ್ ಅನ್ನು ಹೊರತೆಗೆಯಿರಿ. ಈಗ ಈ ಜೆಲ್ ಅನ್ನು ಪೇಸ್ಟ್ ಮಾಡಿ ಮತ್ತು ಅದನ್ನು ಮೊಡವೆಗಳಿಗೆ ಹಚ್ಚಿ ಮತ್ತು ರಾತ್ರಿಯಿಡೀ ಬಿಡಿ. ಬೆಳಿಗ್ಗೆ ನಿಮ್ಮ ಮುಖವನ್ನು ತೊಳೆಯಿರಿ.  ಪ್ರತಿದಿನ ಇದನ್ನು ಮಾಡುತ್ತಾ ಬನ್ನಿ. ನಿಮ್ಮ ಮುಖದ ಮೊಡವೆ ಮಾಯವಾಗುವವರೆಗೂ ಇದನ್ನು ಪುನಾವರ್ತಿಸಿ. 


ಅಲೋವೆರಾ ಜೆಲ್ ಮತ್ತು ನಿಂಬೆ:
ರಸ 2 ಟೀ ಚಮಚ ಅಲೋವೆರಾ ಜೆಲ್ ಜೊತೆಗೆ ನಾಲ್ಕನೇ ಚಮಚ ನಿಂಬೆ ರಸವನ್ನು (lemon juice) ಮಿಶ್ರಣ ಮಾಡಿ ಮೊಡವೆಗಳ ಮೇಲೆ ಹಚ್ಚಿ. ಈ ಮಿಶ್ರಣವು ಒಣಗಿದಾಗ, ಮುಖವನ್ನು ತೊಳೆಯಿರಿ ಮತ್ತು ನಂತರ ಮಾಯಿಶ್ಚರೈಸರ್ ಹಚ್ಚಿ. ಸೂಕ್ಷ್ಮ ಚರ್ಮ ಹೊಂದಿರುವವೃ, ಅಲೋವೆರಾ ಜೆಲ್ ಜೊತೆ  ನಿಂಬೆ ಬೆರೆಸುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳುವುದು ಉತ್ತಮ.


ಇದನ್ನೂ ಓದಿ: Benefits Of Ragi-Milk: ನಿತ್ಯ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ರಾಗಿ ಬೆರೆಸಿ ಕುಡಿದರೆ ಸಿಗುತ್ತೆ ಅದ್ಭುತ ಲಾಭ


ಅಲೋವೆರಾ ಸ್ಪ್ರೇ :
1.5 ಕಪ್ ಶುದ್ಧ ನೀರಿನೊಂದಿಗೆ ಒಂದು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ. ಅದಕ್ಕೆ ನಿಮ್ಮ ಆಯ್ಕೆಯ ಕೆಲವು ಹನಿ ಅಸೆನ್ಶಿಯಲ್ ಆಯಿಲ್ ಸೇರಿಸಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲಿಯಲ್ಲಿ ಇರಿಸಿ. ಅಗತ್ಯವಿದ್ದಾಗ, ಅದನ್ನು ಮುಖಕ್ಕೆ ಸಿಂಪಡಿಸಿ.


ಅಲೋವೆರಾ ಮತ್ತು ಬಾದಾಮಿ ಎಣ್ಣೆ :
3-4 ಹನಿ ಬಾದಾಮಿ ಎಣ್ಣೆಯನ್ನು ಒಂದು ಚಮಚ ಅಲೋವೆರಾ ಜೆಲ್ ನೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯದ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರಿಂದ ತ್ವಚೆಗೆ ಸಾಕಷ್ಟು ಲಾಭವಾಗುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.