Aloe Vera Benefits : ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ 'ಅಲೋವೆರಾ ಜ್ಯೂಸ್' : ಇದನ್ನು ಈ ರೀತಿ ಸೇವಿಸಿ!

ಅಲೋವೆರಾ ಜ್ಯೂಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲೋವೆರಾ ಬಳಕೆಯು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳ ಮೂಲಕ ಕಂಡು ಬಂದಿದೆ.

Written by - Channabasava A Kashinakunti | Last Updated : Jul 28, 2021, 07:31 PM IST
  • ನೀವು ಮಧುಮೇಹ ರೋಗಿಯಾಗಿದ್ದರೆ ಈ ಸುದ್ದಿ ನಿಮಗೆ ಬಹಳ ಉಪಯುಕ್ತ
  • ಮಧುಮೇಹವನ್ನು ನಿಯಂತ್ರಿಸುವಲ್ಲಿ ಅಲೋವೆರಾ ಹೇಗೆ ಸಹಾಯಕ
  • ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು
Aloe Vera Benefits : ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ 'ಅಲೋವೆರಾ ಜ್ಯೂಸ್' : ಇದನ್ನು ಈ ರೀತಿ ಸೇವಿಸಿ! title=

ನೀವು ಮಧುಮೇಹ ರೋಗಿ(sugar patient)ಯಾಗಿದ್ದರೆ ಈ ಸುದ್ದಿ ನಿಮಗೆ ಬಹಳ ಉಪಯುಕ್ತವಾಗಿದೆ. ಅಲೋವೆರಾ ಜ್ಯೂಸ್‌ನ ಪ್ರಯೋಜನಗಳನ್ನು ನಾವು ನಿಮಗಾಗಿ ತಂದಿದ್ದೇವೆ. ಹೌದು, ಅಲೋವೆರಾ ಜ್ಯೂಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲೋವೆರಾ ಬಳಕೆಯು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಸಂಶೋಧನೆಗಳ ಮೂಲಕ ಕಂಡು ಬಂದಿದೆ.

ಈ ಸುದ್ದಿಯಲ್ಲಿ, ಮಧುಮೇಹ(Diabetes)ವನ್ನು ನಿಯಂತ್ರಿಸುವಲ್ಲಿ ಅಲೋವೆರಾ ಹೇಗೆ ಸಹಾಯಕವಾದ ಪಾತ್ರವನ್ನು ವಹಿಸುತ್ತದೆ ಮತ್ತು ಅದನ್ನು ಹೇಗೆ ಬಳಸಬಹುದು ಎಂಬುದನ್ನು ನಾವು ನಿಮಗಾಗ್ ತಂದಿದ್ದೇವೆ.

ಇದನ್ನೂ ಓದಿ : Banana Benefits For Women:ಬಾಳೆಹಣ್ಣಿನಲ್ಲಿ ಅಡಗಿದೆ ಮಹಿಳೆಯರ ಆರೋಗ್ಯದ ಗುಟ್ಟು

ಮಧುಮೇಹ ರೋಗಿಗಳಿಗೆ ಅಲೋ ವೆರಾವನ್ನು ಹೇಗೆ ಬಳಸುವುದು?

ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಅವರ ಪ್ರಕಾರ, ಮಧುಮೇಹಕ್ಕೆ ಅಲೋವೆರಾ(Aloe vera) ರಸ ತುಂಬಾ ಪ್ರಯೋಜನಕಾರಿ ಆಗಿದೆ. ಅನೇಕ ವಿಧದ ಅಲೋವೆರಾ ಜ್ಯೂಸ್ ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ನೀವು ತಾಜಾ ಅಲೋವೆರಾ ಜ್ಯೂಸ್ ಅನ್ನು ಮಾತ್ರ ಬಳಸುವುದು ಉತ್ತಮ. ಇದಕ್ಕಾಗಿ ನೀವು ಅಲೋವೆರಾ ಸಸ್ಯವನ್ನು ಖರೀದಿಸಬಹುದು ಮತ್ತು ಅದರ ತಾಜಾ ರಸವನ್ನು ಬಳಸಬಹುದು.

ಅಲೋವೆರಾ ಮಧುಮೇಹಿಗಳಿಗೆ ಹೇಗೆ ಸಹಾಯ ಮಾಡುತ್ತದೆ?

ಹಲವಾರು ಅಧ್ಯಯನಗಳ ಪ್ರಕಾರ, ಅಲೋವೆರಾ ಜ್ಯೂಸ್(Aloe vera juice) ಅನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಡಾ. ಅಬ್ರಾರ್ ಮುಲ್ತಾನಿ ಹೇಳುತ್ತಾರೆ. ಅಲೋ ವೆರಾದಲ್ಲಿ ಹೈಪೊಗ್ಲಿಸಿಮಿಕ್ (ಗ್ಲೂಕೋಸ್-ಕಡಿಮೆಗೊಳಿಸುವ) ಅಂಶವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ, ಅಲೋವೆರಾದಲ್ಲಿನ ಇತರ ಸಂಯುಕ್ತಗಳಾದ ಹೈಡ್ರೋಫಿಲಿಕ್ ಫೈಬರ್, ಗ್ಲುಕೋಮನ್ನನ್ ಮತ್ತು ಫೈಟೊಸ್ಟೆರಾಲ್ಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಇದು ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Avoid Curd In Monsoon: ಮಳೆಗಾಲದಲ್ಲಿ ಮೊಸರು ಸೇವನೆ ಈ ಸಮಸ್ಯೆಗಳಿಗೆ ಕಾರಣವಾಗಬಹುದು

ಮನೆಯಲ್ಲಿ ಅಲೋವೆರಾ ಜ್ಯೂಸ್ ತಯಾರಿಸುವುದು ಹೇಗೆ?

1. ನಿಮಗೆ ಒಂದು ಅಲೋವೆರಾ ಎಲೆ ಮತ್ತು ನೀರು ಬೇಕಾಗುತ್ತದೆ
2. ಮೊದಲು, ಅಲೋವೆರಾ ಎಲೆಯನ್ನು ತೊಳೆಯಿರಿ ಮತ್ತು ನಂತರ ಅದನ್ನು ಮಧ್ಯದಿಂದ ಕತ್ತರಿಸಿ ಅದರ ಜೆಲ್ ಅನ್ನು ಬೇರ್ಪಡಿಸಿ.
3. ಎಲೆಗಳಲ್ಲಿರುವ ಲ್ಯಾಟೆಕ್ಸ್ (ಹಳದಿ ಬಣ್ಣದ ಲೇಪನ) ಅಲೋವೆರಾ ಜೆಲ್‌ನೊಂದಿಗೆ ಬೆರೆಯದಂತೆ ನೋಡಿಕೊಳ್ಳಿ.
4. ಈಗ ಜ್ಯೂಸ್ ಮಾಡಲು, ಸ್ವಲ್ಪ ನೀರು ಸೇರಿಸಿ ಎರಡು ಮೂರು ಚಮಚ ಅಲೋವೆರಾ ಜೆಲ್ ಮಿಶ್ರಣ ಮಾಡಿ.
5. ಅದು ರಸವಾದಾಗ ಅದನ್ನು ಗಾಜಿನಲ್ಲಿ ತೆಗೆಯಿರಿ.
6. ಈ ರಸದ ರುಚಿಯನ್ನು ಹೆಚ್ಚಿಸಲು, ನೀವು ಇದಕ್ಕೆ ನಿಂಬೆ, ಶುಂಠಿ ರಸ ಅಥವಾ ಆಮ್ಲಾ ರಸವನ್ನು ಸೇರಿಸಬಹುದು.
7. ಇದರ ನಂತರ ನೀವು ಅಲೋವೆರಾ ಜ್ಯೂಸ್ ಸೇವಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News